ಆರ್‌ಟಿಒ ಲೈಸನ್ಸ್ ಕಹಿ ಅನುಭವ: ಓದುಗರ ಪತ್ರಗಳು
ಓದುಗರಾದ ಸುಕುಂದರ್ ಹಲವು ದಶಕಗಳ ಹಿಂದಿನ ಅನುಭವ ಹಂಚಿಕೊಂಡಿದ್ದಾರೆ. ಹೀಗಾಗಿ ಅಂದು ಕೂಡ ಆರ್‌ಟಿಒ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯಿತ್ತು ಎನ್ನುವುದನ್ನು ತಿಳಿದುಕೊಳ್ಳಬಹುದು. ಉಳಿದ ಹೆಚ್ಚಿನ ಓದುಗರು ತಮ್ಮ ಇತ್ತೀಚಿನ ಅನುಭವ ಹಂಚಿಕೊಂಡಿದ್ದಾರೆ.
ಸುಕುಂದರ್: ಸಾವಿರದ ಒಂಬೈನೂರ ಅರುವತ್ತನೇ ಇಸವಿ, ವಸಂತ ನಗರ ಅರ್.ಟಿ.ಓ, ಆಫೀಸ್ ನಲ್ಲಿ , ನಾನು ಡ್ರೈವಿಂಗ್ ಲೈಸನ್ಸ್ ಮಾಡಿಸಲು ಹೋಗಿದ್ದೆ. ನಿಮ್ಮ ಲೇಖನದಲ್ಲಿ ತಿಳಿಸಿದ ಹಾಗೆ ಒಬ್ಬ ಮಧ್ಯವರ್ತಿ ನನಗೆ ಸುಲಭವಾಗಿ ಕೆಲಸ ಮಾಡಿಸಿ ಕೊಡುತ್ತೇನೆ ಅಂತ ನಂಬಿಸಿದ. ಅದಕ್ಕಾಗಿ 80 ರುಪಾಯಿ ತೆಗೆದುಕೊಂಡು(1960ರಲ್ಲಿ ಇದು ದೊಡ್ಡ ಮೊತ್ತ) ಸಂಜೆ ಮೂರು ಗಂಟೆಗೆ ಬನ್ನಿ ಅಂದ. ನಾನು ಸಂಜೆ ಹೋದಾಗ ಅವನ ಪತ್ತೆಯೇ ಇಲ್ಲ. ಅಲ್ಲಿದ್ದವರಿಗೆ ಯಾರಿಗೂ ಅವನ ವಿಷಯ ಗೊತ್ತಿಲ್ಲ. ಆದರೆ ಬೆಳಗ್ಗೆ ಆಫೀಸ್ ಒಳಗಡೆ ಅವನು ಎಲ್ಲರ ಜೊತೆ ಮಾತನಾಡುತ್ತಿದ್ದ. ಈ ಕುರಿತು ಆರ್‌ಟಿಒ ಕಮಿಷನರ್ ಬಳಿ ವಿಚಾರಿಸಿದರೆ ಏನೂ ಗೊತ್ತಿಲ್ಲದವರ ತರಹ ನನ್ನನ್ನು ವಾಪಸ್ ಕಳುಹಿಸಿದರು.
ಆದರೆ ಓದುಗರಾದ ಚೇತನ್ ಆರ್‌ಟಿಒ ಭ್ರಷ್ಟಚಾರಕ್ಕಿಂತ ರಾಜಕಾರಣಿಗಳು ಕೋಟಿಕೋಟಿ ನುಂಗುವ ಕುರಿತು ಕಳವಳ ವ್ಯಕ್ತಪಡಿಸುತ್ತಾರೆ. ಅದನ್ನು ಅವರ ಮಾತಲ್ಲೇ ಕೇಳಿ. "ಏನ್ ರೀ ಏನ್ ರೀ ನೀವು ಆಡೋ ಮಾತಿಗೆ ಒಂದು ಅರ್ಥ ಬೇಡ್ವ, ಲಕ್ಷ ಕೊಟ್ಟು ಕೆಲಸ ತಗೋತಾರೆ ಸಾವಿರ ತಗೊಂಡ್ರೆ ತಪ್ಪೇನಿಲ್ಲ ಸ್ವಾಮಿ, ನಮ್ಮ ಕಣ್ಣ ಮುಂದೆ ಹೋಗೋ ನೂರು ರೂಪಾಯಿ ನೋಡಿ ಮರುಗೊದಕ್ಕಿಂತ ನಮ್ಮ ಬೆನ್ನ ಹಿಂದೆ ಹೋಗ್ತಾ ಇರೋ ಕೋಟಿ ಬಗ್ಗೆ ಸ್ವಲ್ಪ ಗಮನಿಸಿದರೆ ನಾವೇ ಪ್ರಪಂಚದ ನಂಬರ್ ಒನ್ ಆಗಿರ್ತಿದ್ವಿ"
ಶ್ರೀನಾಥ್, ಮಂಜು ಇತ್ಯಾದಿ ಓದುಗರು ಅವರ ವ್ಯಾಪ್ತಿಯ ಆರ್‌ಟಿಒ ಕಚೇರಿಗಳಲ್ಲಿ ಆಗುವ ಬ್ರಷ್ಟಚಾರವನ್ನು ತಿಳಿಸಿದ್ದಾರೆ. ಓದುಗರಾದ ಚಂದು ಆರ್‌ಟಿಒ ಅಧಿಕಾರಿಗಳನ್ನು ನರರೂಪದ ರಕ್ತ ಹೀರುವ ತಿಗಣೆಗಳಿಗೆ ಹೋಲಿಸಿದ್ದಾರೆ.
ಮಂಜು: ಹೌದು, ಬೇರೆ ಕಡೆ ಹೋಲಿಸಿದರೆ ಕೋರಮಂಗಲ RTO ಕಚೇರಿಯಲ್ಲಿ ಲಂಚಾವತಾರ No 1 ಇದೆ. ಲೋಕಾಯುಕ್ತರು ತಿಂಗಳಿಗೆ ಒಂದು ಸಲ ರೈಡ್ ಮಾಡಿದ್ರೆ ಇನ್ನು ಮುಂದೆ ಯಾವುದೇ ಅಪಘಾತಗಳು ಸಂಭವಿಸುವುದಿಲ್ಲ.
ಶ್ರೀನಾಥ್: ಜಮಖಂಡಿ ಆರ್‌ಟಿಒ ಕಚೇರಿಯಲ್ಲೂ ಭ್ರಷ್ಟಚಾರ ಎಲ್ಲೆ ಮೀರಿದೆ. ದಯವಿಟ್ಟು ಇಲ್ಲಿಗೂ ಲೋಕಾಯುಕ್ತ ದಾಳಿ ಮಾಡಿ ಭ್ರಷ್ಟರನ್ನು ಆರೇಸ್ಟ್ ಮಾಡಿ.
ಆರ್‌ಟಿಒ ಕಚೇರಿಗಳಲ್ಲಿ ಲಂಚದ ಹಾವಳಿಯ ಪರಿಣಾಮವನ್ನು ಪ್ರವೀಣ್ ಭಟ್ ತಿಳಿಸಿದ್ದು ಹೀಗೆ. " ಡ್ರೈವಿಂಗ್ ಗೊತ್ತಿಲ್ಲದವರಿಗೆ ಲಂಚದ ಮೂಲಕ ಲೈಸನ್ಸ್ ಕೊಡುತ್ತಿರುವುದರಿಂದ ಅಪಘಾತಗಳ ಪ್ರಮಾಣ ಜಾಸ್ತಿಯಾಗುತ್ತಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಕೇಶ್ ಶೆಟ್ಟಿ: ನನ್ನ ಮನೆಯಿಂದ ಆರ್.ಟಿ.ಓ ಕಚೇರಿಗೆ ೮-೯ ಕಿ.ಮಿ ದೂರ. ನಾನು ಎಲ್.ಎಲ್ ಮಾಡಿಸಲು ಹೋದಾಗ (೧೦ ವರ್ಷದ ಹಿಂದೆ) ಮೊದಲ ಬಾರಿ ಮಧ್ಯವರ್ತಿಯೊಬ್ಬ ಬಂದ ನಾನಾಗೆ ನೇರ ಹೋಗಿದ್ದಕ್ಕೆ ೬ ಬಾರಿ ಫೇಲ್ ಮಾಡಿದ್ದ ಆ ಮಹಾಶಯ. ನಾನು ಪಟ್ಟು ಬಿಡಲಿಲ್ಲ ಕಡೆಗೆ ೭ನೆ ಬಾರಿ ಸಿಕ್ಕಿತ್ತು.
ಓದುಗರೇ ನಿಮ್ಮ ಅಭಿಪ್ರಾಯವೇನು?


Click it and Unblock the Notifications









