ಹೊಸ ಫೆರಾರಿ ಕ್ಯಾಲಿಫೋರ್ನಿಯಾ: ಸೂಪರ್ ಸುಂದರಿ
ಫೆರಾರಿ ಕ್ಯಾಲಿಫೋರ್ನಿಯಾವೆಂಬ ವೇಗದ ಕಾರಿನ ಬಗ್ಗೆ ನಿಮಗೆ ಗೊತ್ತಿರಬಹುದು. ಇದೀಗ ಕಂಪನಿಯು ಕ್ಯಾಲಿಫೋರ್ನಿಯಾ ಕಾರಿನ ಹಗುರ ಮತ್ತು ಹೆಚ್ಚು ಶಕ್ತಿಶಾಲಿ ಆವೃತ್ತಿಯೊಂದನ್ನು ಪರಿಚಯಿಸಿದೆ. ಹೊಸ್ ಎಗ್ಸಾಟ್ ಮತ್ತು ಎಂಜಿನ್ ಫೆರಾರಿ ಸುಂದರಿಯ ವೇಗವನ್ನು ಹೆಚ್ಚಿಸಿದೆ.
ಹೊಸ ಫೆರಾರಿ ಕಾರು 4.3 ಲೀಟರಿನ ವಿ8 ಎಂಜಿನ್ ಹೊಂದಿದ್ದು, 483 ಹಾರ್ಸ್ ಪವರ್ ನೀಡುತ್ತದೆ. ಇದರ ಗರಿಷ್ಠ ಟಾರ್ಕ್ 5 ಸಾವಿರ ಆರ್ ಪಿಎಂ. ಹೊಸ ಅಲ್ಯುಮಿನಿಯಂ ಫೆಬ್ರಿಕೇಷನ್ ತಂತ್ರಜ್ಞಾನ ಮತ್ತು ನಿರ್ಮಾಣ ತಾಂತ್ರಿಕತೆಯು ಹೊಸ ಕ್ಯಾಲಿಫೋರ್ನಿಯಾ ಕಾರಿನ ತೂಕ ಕಡಿಮೆ ಮಾಡಲು ನೆರವಾಗಿದೆ.
ಈ ಕಾರು ಹಳೆಯ ಕ್ಯಾಲಿಫೋರ್ನಿಯಾಕ್ಕಿಂತ ಹತ್ತನೇ ಒಂದು ಭಾಗದಷ್ಟು ಹೆಚ್ಚು ಶೀಘ್ರವಾಗಿ ವೇಗ ಪಡೆದುಕೊಳ್ಳುತ್ತದೆ. ಕೇವಲ 3.8 ಸೆಕೆಂಡಿನಲ್ಲಿ 0-100 ಕಿ.ಮೀ. ಆಕ್ಸಿಲರೇಟರ್ ವೇಗ ಪಡೆದುಕೊಳ್ಳಬಹುದು. ಕಂಪನಿಯು ಈ ಕಾರನ್ನು ಜಿನಿವಾ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸುವ ನಿರೀಕ್ಷೆಯಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









