ಅದ್ಬುತ ಟ್ಯಾಕ್ಸಿ ರೈಡ್ : 13 ತಿಂಗಳಲ್ಲಿ 45 ಸಾವಿರ ಮೈಲಿ!

Paul, Ellison, Archer Creates history
ಟೈಮ್ ಸಿಕ್ಕರೆ ಸಾಕು ಕ್ಲಾಸ್ ಬಂಕ್ ಮಾಡಿ ಮೂವಿ, ಮಜಾ, ಮಸ್ತಿ ಎಂದು ತಿರುಗುವ ಕಾಲೇಜು ಹುಡುಗರು, ಹದಿಹರೆಯದವರ ನಡುವೆ ಲಂಡನ್ನಿನ ಮೂವರು ವಿದ್ಯಾರ್ಥಿ ಮಿತ್ರರು ಅದ್ಭುತ ಸಾಧನೆ ಮಾಡಿದ್ದಾರೆ.

ಹಳೆ ಟ್ಯಾಕ್ಸಿಯೊಂದನ್ನು ಪಡೆದು ಸುಮಾರು 13 ತಿಂಗಳುಗಳ ಕಾಲ ವಿಶ್ವಪರ್ಯಟನೆ ಮಾಡಿದ್ದಾರೆ. ಲಂಡನ್ ನಿಂದ ನ್ಯೂಯಾರ್ಕ್ ವರೆಗೂ ಸುತ್ತಿದ ಪಾಲ್ ಆರ್ಚರ್(25), ಲೆಹ್ ಪುರ್ನೆಲ್(24) ಹಾಗೂ ಜಾನೊ ಎಲ್ಲಿಸನ್(28) ಅವರು ಈ ಅವಧಿಯಲ್ಲಿ 45,000 ಮೈಲಿ ದೂರ ಕ್ರಮಿಸಿ ದಾಖಲೆ ಬರೆದಿದ್ದಾರೆ. ಟ್ಯಾಕ್ಸಿ ಮೀಟರ್ 85,80-85,000 ಪೌಂಡ್ ಎಂದು ತೋರಿಸುತ್ತಿದೆ ಎಂದು ಪಾಲ್ ನಗೆಯಾಡುತ್ತಾರೆ.

ಈ ವಿಚಿತ್ರ ಐಡ್ಯಾ ಹೊಳೆದಿದ್ದು ಹೇಗೆ ಎಂದರೆ, ಒಂದು ದಿನ ಕಾಲೇಜಿಗೆ ಟ್ಯಾಕ್ಸಿಯಲ್ಲಿ ಹೋಗುವಾಗ ದೀರ್ಘಕಾಲ ಪ್ರಯಾಣ ಮಾಡುವ ಬಗ್ಗೆ ಚರ್ಚಿಸಿದ್ದಾರೆ. ನಂತರ ಮೂವರು ಸುದೀರ್ಘ ವಿಶ್ವಪರ್ಯಟನೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.

ಇಬೇನಲ್ಲಿ 1992 ಮಾದರಿಯ ಲಂಡನ್ ಬ್ಲ್ಯಾಕ್ ಕ್ಯಾಬ್ (LTI 2.7 liter diesel FX4TK, )ಕಣ್ಣಿಗೆ ಬಿದ್ದಿದ್ದೆ ತಡ 3000 ಡಾಲರ್ ತೆತ್ತು ಕಾರು ಪಡೆದಿದ್ದಾರೆ. ಈ ಕ್ಯಾಬ್ ಗೆ Hannah ಎಂದು ಹೆಸರಿಟ್ಟಿದ್ದಾರೆ.

ಪಯಣ ಹೇಗಿತ್ತು?: ಲಂಡನ್ನಿನಿಂದ ಕಳೆದ ಫೆಬ್ರವರಿಯಲ್ಲಿ ಆರಂಭವಾದ ಪಯಣ ನ್ಯೂಯಾರ್ಕ್ ನಲ್ಲಿ ಕೊನೆಗೊಂಡಿದೆ. ಜುಲೈ 2011ರಲ್ಲಿ ಭಾರತದ ಆಗ್ರಾ ರಸ್ತೆಯಲ್ಲೂ ಈ ಕ್ಯಾಬ್ ಚಲಿಸಿದೆ. ತಾಜ್ ಮಹಲ್ ನೋಡಿ ಮೂವರು ವಿದ್ಯಾರ್ಥಿಗಳು ಬೆರಗಾಗಿದ್ದಾರೆ. ಸ್ಥಳೀಯ ಮಕ್ಕಳ ಜೊತೆ ನಿಂತು ಫೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ.

ಕಾಂಬೋಡಿಯಾ, ಪ್ಯಾರೀಸ್, ಮಾಸ್ಕೋ, ಇರಾಕ್ ಗಡಿಭಾಗ, ಪಾಕಿಸ್ತಾನ, ಚೀನಾ ಸೇರಿದಂತೆ 39 ದೇಶಗಳು 4 ಖಂಡಗಳು, 10 ವಿವಿಧ ಕಾಲಮಾನ ಹಾಗೂ 40ಕ್ಕೂ ಅಧಿಕ ಅಂತಾರಾಷ್ಟ್ರೀಯ ಗಡಿ ದಾಟಿ ಬಂದ ಸಂತಸ ಮೂವರಲ್ಲೂ ಮನೆ ಮಾಡಿದೆ.

ಇರಾಕ್ ನಲ್ಲಿ ಗುಪ್ತಚರ ದಳದ ಕೈಗೆ ಸಿಕ್ಕು ಸ್ವಲ್ಪ ತೊಂದರೆ ಅನುಭವಿಸಬೇಕಾಯಿತು. ಅದು ಬಿಟ್ಟರೆ, 17,500 ಅಡಿ ಎತ್ತರಕ್ಕೂ ನಮ್ಮ ಕಾರು ಏರಿತ್ತು. ಟಿಬೆಟ್ ಗಡಿಗೂ ಮುನ್ನ ಎವೆರೆಸ್ಟ್ ಬೇಸ್ ಕ್ಯಾಂಪ್ ತನಕ ನಮ್ಮ ಟ್ಯಾಕ್ಸಿಯನ್ನು ಕೊಂಡೊಯ್ದೆವು. ಸುಮಾರು 14 ಗಂಟೆಗಳ ಸತತ ಪ್ರಯತ್ನದ ನಂತರ ಸಾಧ್ಯವಾಯ್ತು. ಅದು ನಮ್ಮ ಪಯಣದ ಅತ್ಯಂತ ರೋಚಕ ಅನುಭವ ಎನ್ನುತ್ತಾರೆ ಎಲ್ಲಿಸನ್.

ಮೂವರು ಸಾಧನೆ ಜೊತೆಗೆ ರೆಡ್ ಕ್ರಾಸ್ ಗೆ ನಿಧಿ ಸಂಗ್ರಹಿಸುವ ಕಾರ್ಯದಲ್ಲೂ ತೊಡಗಿಕೊಂಡಿದ್ದಾರೆ. 20,000 ಪೌಂಡ್ ಸಂಗ್ರಹದ ಗುರಿ ಹೊಂದಿರುವ ತಂಡ ಈ ವರೆಗೂ 14,000 ಪೌಂಡ್ ಸಂಗ್ರಹಿಸಿದೆ. GetTaxi ಕಾರ್ಪೊರೇಟ್ ಸಂಸ್ಥೆ ಪ್ರಯೋಕತ್ವ ಕೂಡಾ ಲಭಿಸಿದ್ದು, ಸಹಾಯಕ್ಕೆ ಬಂದಿದೆ. ಹೆಚ್ಚಿನ ವಿವರಗಳಿಗೆ ಈ ತಂಡದ ವೆಬ್ ತಾಣ ವೀಕ್ಷಿಸಿ

More from DriveSpark

Article Published On: Saturday, March 31, 2012, 17:32 [IST]
English summary
Around the World in London Black Cab, Three adventure friends Paul, Ellison, Archer Creates history by taking longest taxi drive of around 45,000 miles in 13 months crossing 39 countries. Also made world record of reaching Everest Base Camp(17,5000 ft).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+