ಕಾಸಿಗೆ ಕತ್ತರಿ: ಡೀಸೆಲಿಗಿಂತ ಆಟೋ ಎಲ್‌ಪಿಜಿ ತುಟ್ಟಿ

ಕಾರುಗಳಿಗೆ, ಆಟೋ ರಿಕ್ಷಾಗಳಿಗೆ ಎಲ್‌ಪಿಜಿ ಅಗ್ಗದ ಮತ್ತು ಪರಿಸರಸ್ನೇಹಿ ಇಂಧನವೆಂಬ ಖ್ಯಾತಿಯಿತ್ತು. ಇನ್ಮುಂದೆ ಆಟೋ ಎಲ್‌ಪಿಜಿ ದುಬಾರಿಯೆಂ ಹಣೆಪಟ್ಟಿಕಟ್ಟಿಕೊಳ್ಳಲಿದೆ. ಯಾಕೆಂದರೆ ದೇಶಾದ್ಯಂತ ಆಟೋ ಎಲ್‌ಪಿಜಿ ತುಟ್ಟಿಯಾಗಿದೆ. ಅದರಲ್ಲೂ ಉದ್ಯಾನನಗರಿ ಬೆಂಗಳೂರಿನಲ್ಲಿ ವಾಹನಗಳಿಗೆ ಬಳಸುವ ಸಂಕುಚಿತ ಪೆಟ್ರೋಲಿಯಂ ಅನಿಲ(ಎಲ್‌ಪಿಜಿ)ದರ 6.80 ರು.ನಷ್ಟು ದುಬಾರಿಯಾಗಿದೆ.

ಇದರಿಂದ ನಗರದ ಎಲ್‌ಪಿಜಿ ಆಟೋ ರಿಕ್ಷಾ ಚಾಲಕರ ಮುಖ ಕಪ್ಪಿಟ್ಟಿದೆ. ಇದು ಅವರಿಗೆ ನುಂಗಲಾರದ ತುತ್ತು. ಯಾಕೆಂದರೆ ಇಂಧನ ದರ ದುಬಾರಿಯಾದರೂ ಬಾಡಿಗೆ ದರ ಹೆಚ್ಚಿಸುವ ಆಯ್ಕೆ ಅವರ ಮುಂದಿಲ್ಲ. ಎಲ್‌ಪಿಜಿ ಲೀಟರಿಗೆ 70 ರು. ಮುಟ್ಟುವರೆಗೂ ಬಾಡಿಗೆ ಹೆಚ್ಚಿಸುವಂತಿಲ್ಲವೆಂದು ಇತ್ತೀಚೆಗೆ ಡೆಪ್ಯೂಟಿ ಕಮಿಷನರ್ ಹೇಳಿದ್ದರು. ಈಗಾಗಲೇ ಬಾಡಿಗೆ ದರ ಹೆಚ್ಚಳದಿಂದ ಪ್ರಯಾಣಿಕರನ್ನು ಕಳೆದುಕೊಳ್ಳುತ್ತಿರುವ ಅರಿವು ಆಟೋ ಚಾಲಕರಿಗಾಗಿದೆ.

ಪೆಟ್ರೋಲ್ ದರ ಹೆಚ್ಚಳದ ಹಿನ್ನಲೆಯಲ್ಲಿ ‌ಎಲ್‌ಪಿಜಿ ಚಾಲೀತ ಕಾರುಗಳ ಉತ್ಪಾದನೆಗೂ ಕಾರು ಕಂಪನಿಗಳು ಒತ್ತು ನೀಡಿದ್ದವು. ಆದರೆ ಈಗ ಡೀಸೆಲ್ ದರವನ್ನು ಓವರ್‌ಟೇಕ್ ಮಾಡಿ ಆಟೋ ಎಲ್‌ಪಿಜಿ ದರ ಮುನ್ನುಗುವ ರೀತಿ ನೋಡಿದರೆ ಇದು ಗ್ರಾಹಕ ಸ್ನೇಹಿ ಇಂಧನವಲ್ಲವೆಂದು ಅರಿವಾಗುತ್ತಿದೆ. ಪ್ರಸಕ್ತ ವರ್ಷ ಸತತ ಮೂರನೇ ಬಾರಿ ಆಟೋ ಎಲ್‌ಪಿಜಿ ದರ ಹೆಚ್ಚಳ ಕಂಡಿದೆ. ಕಳೆದ ತಿಂಗಳಷ್ಟೇ ಆಟೋ ಎಲ್‌ಪಿಜಿ 3.31 ರು. ದುಬಾರಿಯಾಗಿತ್ತು. ಇಲ್ಲಿವರೆಗೆ ಇದರ ದರ 48.80 ರು. ಆಗಿತ್ತು.

ಈ ತಿಂಗಳು ಮಾಡಿರುವ ಆಟೋ ಎಲ್‌ಪಿಜಿ ದರ ಹೆಚ್ಚಳವು ಪ್ರಸಕ್ತ ವರ್ಷ ಮಾಡಿರುವ ಅತ್ಯಧಿಕ ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿನ ಏರುಪೇರಿಗೆ ತಕ್ಕಂತೆ ದರ ಹೆಚ್ಚಳ ಅನಿವಾರ್ಯವೆಂದು ತೈಲ ಕಂಪನಿಗಳು ಅಸಹಾಯಕತೆಯನ್ನು ವ್ಯಕ್ತಪಡಿಸಿವೆ.

ಎಲ್‌ಪಿಜಿ ದರ ಹೆಚ್ಚಳದಿಂದ ಕಾರು ಕಂಪನಿಗಳು ಗ್ಯಾಸ್ ಚಾಲೀತ ಕಾರುಗಳ ಉತ್ಪಾದನೆಗೆ ಬ್ರೇಕ್ ಹಾಕುವ ನಿರೀಕ್ಷೆಯಿದೆ. ಈಗಾಗಲೇ ಪೆಟ್ರೋಲ್ ಕಾರುಗಳ ಬೇಡಿಕೆಯೂ ಕಡಿಮೆಯಾಗಿದೆ. ಪೆಟ್ರೋಲ್ ಮತ್ತು ಎಲ್‌ಪಿಜಿ ಇಂಧನ ದರ ಹೆಚ್ಚಳವು ಡೀಸೆಲ್ ಕಾರುಗಳ ಉತ್ಪಾದನೆಗೆ ಮತ್ತಷ್ಟು ಹವಿಸ್ಸು ಸುರಿಯಲಿದೆ.

ಹಾಗಂತ ಮುಂದಿನ ದಿನಗಳಲ್ಲಿ ಡೀಸೆಲ್ ಕಾರು ಸರ್ವೋತ್ತಮ ಆಯ್ಕೆಯೆಂದು ನೆಮ್ಮದಿಯಿಂದ ಇರುವ ಆಗಿಲ್ಲ. ಪ್ರಸಕ್ತ ಬಜೆಟಿನಲ್ಲಿ ಡೀಸೆಲ್ ಹೆಚ್ಚುವರಿ ಸುಂಕದಿಂದ ಪಾರಾದರೂ ಡೀಸೆಲ್ ಕಾರುಗಳ ಮೇಲೆ ಬರೆ ಹಾಕಲು ಸರಕಾರ ಅವಕಾಶಕ್ಕಾಗಿ ಕಾಯುತ್ತಿದೆ ಅನ್ನೋದು ಸುಳ್ಳಲ್ಲ. ಇಂತಹ ಸಮಯದಲ್ಲಿ ಎಲೆಕ್ಟ್ರಿಕ್ ಕಾರುಗಳು ಬೆಸ್ಟ್ ಅಥವಾ ಅನಿವಾರ್ಯ ಆಯ್ಕೆಯಾಗಬಹುದು. (ಕನ್ನಡ ಡ್ರೈವ್‌ಸ್ಪಾರ್ಕ್)

More from DriveSpark

Article Published On: Tuesday, April 3, 2012, 12:07 [IST]
English summary
The price of auto LPG has been increased by Rs.6.8 making it more expensive than diesel. This will reduce demand for the eco friendly LPG cars and boost demand for diesel cars. Oil companies have said the price hike was necessary due to increased international prices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+