ಇದೀಗ ಹ್ಯುಂಡೈ ಗ್ರಾಂಡ್ ಐ10 ಎಲ್‌ಪಿಜಿ ಕಿಟ್‌ನಲ್ಲೂ ಲಭ್ಯ
ಗ್ರಾಹಕ ಸ್ನೇಹಿ ಬೆಳವಣಿಗೆಯೊಂದರಲ್ಲಿ ಹ್ಯುಂಡೈ ಗ್ರಾಂಡ್ ಐ10 ಎಲ್‌ಪಿಜಿನಲ್ಲೂ ಬಿಡುಗಡೆಗೊಳಿಸಲಾಗಿದೆ. ಈ ಮೂಲಕ ದೇಶದ ಎರಡನೇ ಅತಿದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯು ಹೆಚ್ಚಿನ ಮಾರಾಟವನ್ನು ಗುರಿಯಿರಿಸಿಕೊಂಡಿದೆ.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ಹ್ಯುಂಡೈ ಗ್ರಾಂಡ್ ಐ10 ನಿರೀಕ್ಷೆಗೂ ಮೀರಿದ ಬೇಡಿಕೆ ಗಿಟ್ಟಿಸಿಕೊಂಡಿತ್ತು. ಇದೀಗ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯು ಗ್ರಾಂಡ್ ಐ10 ಎಲ್‌ಪಿಜಿ ಕಿಟ್‌ನಲ್ಲೂ ಬಿಡುಗಡೆಗೊಳಿಸಿದೆ.

ಹ್ಯುಂಡೈ ಗ್ರಾಂಡ್ ಐ10 ಮ್ಯಾಗ್ನಾ ವೆರಿಯಂಟ್‌ನಲ್ಲಿ ಎಲ್‌ಪಿಜಿ ಕಿಟ್ ಲಭ್ಯವಿರಲಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 4.96 ಲಕ್ಷ ರು.ಗಳಾಗಿರಲಿದೆ.
ಹ್ಯುಂಡೈ ಗ್ರಾಂಡ್ ಐ10 ಎಲ್‌ಪಿಜಿ ಮಾದರಿಯು 998 ಸಿಸಿ ಪೆಟ್ರೋಲ್ ಎಂಜಿನ್ ಸಹ ಹೊಂದಿರಲಿದೆ. ಇದು ಡ್ಯುಯಲ್ ವಿಟಿವಿಟಿ ತಂತ್ರಜ್ಞಾನವನ್ನು ಪಡೆದುಕೊಳ್ಳಲಿದ್ದು, ಹೆಚ್ಚಿನ ಇಂಧನ ಕ್ಷಮತೆ ನೀಡಲಿದೆ. ಹಾಗೆಯೇ 68 ಅಶ್ವಶಕ್ತಿ (94 ಎನ್‌ಎಂ ಪೀಕ್ ಟಾರ್ಕ್) ಉತ್ಪಾದಿಸಲಿದೆ.
ಸಂಸ್ಥೆಯ ಪ್ರಕಾರ ಎಲ್‌ಪಿಜಿ ನಿಯಂತ್ರಿತ ಗ್ರಾಂಡ್ ಐ10 20.3 ಕೀ.ಮೀ. ಮೈಲೇಜ್ ನೀಡಲಿದೆ. ಇದರ 1.0 ಲೀಟರ್ ಕಪ್ಪ ಎಂಜಿನ್ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ.
ಗ್ರಾಂಡ್ ಐ10 ಎಲ್‌ಪಿಜಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಕೀಲೆಸ್ ಎಂಟ್ರಿ, ಸೆಂಟ್ರಲ್ ಲಾಕಿಂಗ್, ಫಾಗ್ ಲ್ಯಾಂಪ್, ಪವರ್ ವಿಂಡೋ, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಔಟ್‌ಸೈಡ್ ವ್ಯೂ ರಿಯರ್ ಮಿರರ್ ಮತ್ತು ಹಿಂದುಗಡೆ ಎಸಿ ವೆಂಟ್ಸ್ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ. ಇವೆಲ್ಲದರ ಜೊತೆಗೆ ಮಾಹಿತಿ ಮನರಂಜನಾ ವ್ಯವಸ್ಥೆಯು ಒಂದು ಗಿಗಾಬೈಟ್ ಆಂತರಿಕ ಮೆಮರಿ ಹಾಗೂ ಬೂಟ್ಲೂತ್ ಕೆನೆಕ್ಟಿವಿಟಿ ಸೇವೆಯನ್ನು ಪಡೆಯಲಿದೆ.


Click it and Unblock the Notifications








