'ಸ್ಪೋರ್ಟ್ಜ್ ಎಡಿಷನ್' ಜೊತೆ ಹ್ಯುಂಡೈ ಗ್ರಾಂಡ್ ಐ10 ಸಂಭ್ರಮ

Written By:

ದೇಶಕ್ಕೆ ಪಾದಾರ್ಪಣೆಗೈದು ಒಂದರ ವಸಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಜನಪ್ರಿಯ ಹ್ಯುಂಡೈ ಗ್ರಾಂಡ್ ಐ10 ಸಂಭ್ರಮಕ್ಕೆ ಎರಡು ಕಾರಣಗಳಿವೆ. ಒಂದೆಡೆ ಪ್ರಥಮ ವಾರ್ಷಿಕೋತ್ಸವನ್ನು ಆಚರಿಸುತ್ತಿರುವ ಹ್ಯುಂಡೈ ಗ್ರಾಂಡ್ ಐ10 ಈಗಾಗಲೇ 1.1 ಲಕ್ಷ ಮಂದಿ ಸಂತೃಪ್ತ ಗ್ರಾಹಕರನ್ನು ಹೊಂದಿದೆ.

ಇದೇ ಖುಷಿಯಲ್ಲಿರುವ ದೇಶದ ಅತಿದೊಡ್ಡ ರಫ್ತುದಾರ ಹಾಗೂ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್), ಅತ್ಯಾಕರ್ಷಕ ಗ್ರಾಂಡ್ ಐ10 ಸ್ಪೋರ್ಟ್ಜ್ ಎಡಿಷನ್ ಬಿಡುಗಡೆ ಮಾಡಿದೆ.

ಈ ಹಿಂದೆ 2013 ಸೆಪ್ಟೆಂಬರ್ ತಿಂಗಳಲ್ಲಿ ಲಾಂಚ್ ಆಗಿದ್ದ ಹ್ಯುಂಡೈ ಗ್ರಾಂಡ್ ಐ10, ಪ್ರತಿಷ್ಠಿತ 'ಭಾರತದ ವರ್ಷದ ಕಾರು' (ICOTY 2014) ಜೊತೆಗೆ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಹ್ಯುಂಡೈ ಇಂಡಿಯಾ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿರುವ ರಾಕೇಶ್ ಶ್ರೀವಾಸ್ತವಾ, "ಗ್ರಾಂಡ್ ಯಶಸ್ವಿಯನ್ನು ಆಚರಿಸಿಕೊಳ್ಳಲು ವಿಶೇಷ ಸ್ಪೋರ್ಟ್ಜ್ ಎಡಿಷನ್ ಪರಿಚಯಿಸುತ್ತಿರುವುದಾಗಿ ತಿಳಿಸಿದ್ದಾರೆ. ಮಾತು ಮುಂದುವರಿಸಿದ ಅವರು ಗ್ರಾಂಡ್ 10 ಕೇವಲ 10 ತಿಂಗಳಲ್ಲೇ ಒಂದು ಲಕ್ಷ ಸಂತೃಪ್ತ ಗ್ರಾಹಕರ ಮೈಲುಗಲ್ಲನ್ನು ತಲುಪಿರುವುದಾಗಿ" ತಿಳಿಸಿದ್ದಾರೆ.

ವೈಶಿಷ್ಟ್ಯಗಳೇನು?

ಹೊಸತಾದ ಗ್ರಾಂಡ್ ಗ್ರಾಂಡ್ ಐ10 'ಸ್ಪೋರ್ಟ್ಜ್ ಎಡಿಷನ್' 14 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಸ್, ಬ್ಲೂಟೂತ್ ಕನೆಕ್ಟಿವಿಟಿ, ಸ್ಟೀರಿಂಗ್ ಮೌಟೆಂಡ್ ಆಡಿಯೋ, ಬ್ಲೂಟೂತ್ ಕಂಟ್ರೋಲ್, ಲೆಥರ್ ಹೋದಿಕೆ ಸ್ಟೀರಿಂಗ್ ವೀಲ್, ರಿಯರ್ ಸ್ಪಾಯ್ಲರ್, ಬಿ ಪಿಲ್ಲರ್ ಬ್ಲ್ಯಾಕೌಟ್ ಜೊತೆಗೆ ಬಾಡಿ ಗ್ರಾಫಿಕ್ಸ್‌ಗಳಂತಹ ಹೈ-ಟೆಕ್ ಸೌಲಭ್ಯಗಳನ್ನು ಪಡೆಯಲಿದೆ. ಇನ್ನು ಕಾರಿನೊಳಗೆ ಸಂಪೂರ್ಣ ಪ್ರೀಮಿಯಂ ಹೋದಿಕೆ ಮತ್ತು ಕೆಂಪು ವರ್ಣದ ಅಂದಗಾರಿಕೆಯನ್ನು ಅನುಭವಿಸಬಹುದಾಗಿದೆ.

Grand i10 SportZ Edition

ಎಂಜಿನ್, ಮೈಲೇಜ್

ಅಂದ ಹಾಗೆ ಸ್ಪೋರ್ಟ್ಜ್ ವೆರಿಯಂಟ್ ಅತ್ಯಾಧುನಿಕ ಮತ್ತು ಮಿತವ್ಯಯದ ಎರಡನೇ ತಲೆಮಾರಿನ ಯು2 1.1 ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದ್ದು, ಭಾರತ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕರಾ ಪ್ರತಿ ಲೀಟರ್‌ಗೆ 24 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಅದೇ ರೀತಿ ಅಪಾರ ಮೆಚ್ಚುಗೆ ಪಡೆದಿರುವ ಆಲ್ ಅಲ್ಯೂಮಿನಿಯಂ 1.2 ಲೀಟರ್ ಕಪ್ಪ ಪೆಟ್ರೋಲ್ ಎಂಜಿನ್ ಜೊತೆಗಿನ ವಿಟಿವಿಟಿ ಟೆಕ್ನಾಲಜಿ ಎಆರ್‌ಎಐ ಮಾನ್ಯತೆಯ ಪ್ರಕಾರ ಪ್ರತಿ ಲೀಟರ್‌ಗೆ 18.9 ಕೀ.ಮೀ. ಮೈಲೇಜ್ ನೀಡಲಿದೆ.

English summary
Hyundai Motor India Limited (HMIL), the country’s largest exporter and the second-largest car manufacturer; celebrating the first anniversary of Grand i10, today introduced its ‘SportZ Edition’. Launched in September 2013, Grand has over 1.1 lakh happy owners in India and has won the prestigious Indian Car of the Year (ICOTY 2014) and numerous awards.
Story first published: Thursday, September 4, 2014, 11:22 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark