ಹ್ಯುಂಡೈ ಗ್ರಾಂಡ್ ಐ10ಗೆ 'ಭಾರತದ ವರ್ಷದ ಕಾರು ಪ್ರಶಸ್ತಿ' ಗರಿ

By Nagaraja

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಲಾಂಚ್ ಕಂಡಿದ್ದ ಹ್ಯುಂಡೈ ಗ್ರಾಂಡ್ ಐ10, 'ಭಾರತದ ವರ್ಷದ ಕಾರು 2014' ಪಟ್ಟ ಆಲಂಕರಿಸಿಕೊಂಡಿದೆ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಷ್ಟೇ ರಸ್ತೆ ಪ್ರವೇಶಿಸಿದ್ದ ಗ್ರಾಂಡ್ ಐ10 ಅಲ್ಪಾವಧಿಯಲ್ಲಿ ಇಂತಹದೊಂದು ಮಹತ್ತರ ಮೈಲುಗಲ್ಲು ತಲುಪಿದೆ.

ಇವನ್ನೂ ಓದಿ: ಬೆಂಗ್ಳೂರು ವಿದ್ಯಾರ್ಥಿಗಳ ಮೈಲೇಜ್ ಚಾಲೆಂಜ್

ಐ10 ಹಾಗೂ ಐ20 ನಡುವೆ ಗುರುತಿಸಿಕೊಂಡಿರುವ ಹ್ಯುಂಡೈ ಗ್ರಾಂಡ್ ಐ10 ಪ್ರಮುಖವಾಗಿಯೂ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿಯ ಜನಪ್ರಿಯ ಸ್ವಿಫ್ಟ್ ಆವೃತ್ತಿಗೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿತ್ತು. ಇದರಂತೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವಲ್ಲಿ ಈ ಹ್ಯಾಚ್‌ಬ್ಯಾಕ್ ಕಾರು ಯಶಸ್ವಿಯಾಗಿದೆ.

ಹ್ಯುಂಡೈ ಗ್ರಾಂಡ್ ಐ10ಗೆ 'ಭಾರತದ ವರ್ಷದ ಕಾರು ಪ್ರಶಸ್ತಿ' ಗರಿ

ಇದೀಗ ದೇಶದ ಎರಡನೇ ಪ್ರಯಾಣಿಕ ಸಂಸ್ಥೆ ಹ್ಯುಂಡೈ ಮೋಟಾರು ಇಂಡಿಯಾ ಲಿಮಿಟೆಡ್‌ಗೆ ಇನ್ನೊಂದು ಕೋಡು ನೀಡಿರುವ ಗ್ರಾಂಡ್ ಐ10, ಭಾರತದ ವರ್ಷದ ಕಾರು 2014 (ಐಸಿಒಟಿವೈ) ಪ್ರಶಸ್ತಿಗೆ ಭಾಜನವಾಗಿದೆ.

ಹ್ಯುಂಡೈ ಗ್ರಾಂಡ್ ಐ10ಗೆ 'ಭಾರತದ ವರ್ಷದ ಕಾರು ಪ್ರಶಸ್ತಿ' ಗರಿ

ಮಾರುಕಟ್ಟೆಗೆ ಬಿಡುಗಡೆಗೊಂಡ ಎರಡನೇ ತಿಂಗಳಲ್ಲೇ ಟಾಪ್ 5 ಪಟ್ಟಿಯನ್ನು ಭೇಧಿಸಿದ್ದ ಹ್ಯುಂಡೈ ಗ್ರಾಂಡ್ ಐ10 ಕಾರಿಗೆ ಗ್ರಾಹಕರಿಗೆ ಅಭೂತಪೂರ್ವ ಪ್ರತಿಕ್ರಿಯೆ ಲಭಿಸಿತ್ತು.

ಹ್ಯುಂಡೈ ಗ್ರಾಂಡ್ ಐ10ಗೆ 'ಭಾರತದ ವರ್ಷದ ಕಾರು ಪ್ರಶಸ್ತಿ' ಗರಿ

ಅಷ್ಟೇ ಅಲ್ಲದೆ ಲಾಂಚ್ ಆಗಿರುವ 90 ದಿವಸದೊಳಗೆ 35,000ಕ್ಕೂ ಹೆಚ್ಚು ಗ್ರಾಂಡ್ ಐ10 ಯುನಿಟ್‌ಗಳನ್ನು ಗ್ರಾಹಕರಿಗೆ ಹಸ್ತಾಂತರಿಸುವಲ್ಲಿ ಹ್ಯುಂಡೈ ಯಶ ಕಂಡಿತ್ತು. ಈ ನೂತನ ಪಟ್ಟದೊಂದಿಗೆ ಹ್ಯುಂಡೈ ಗ್ರಾಂಡ್ ಐ10 ಮತ್ತೊಂದು ಮೈಲುಗಲ್ಲನ್ನಿರಿಸಿದೆ.

ಹ್ಯುಂಡೈ ಗ್ರಾಂಡ್ ಐ10ಗೆ 'ಭಾರತದ ವರ್ಷದ ಕಾರು ಪ್ರಶಸ್ತಿ' ಗರಿ

ನಿಮ್ಮ ಮಾಹಿತಿಗಾಗಿ, ದೇಶದ ಪ್ರಯಾಣಿಕ ಸೆಗ್ಮೆಂಟ್ ಪಾಲಿಗೆ ಇಂಡಿಯಾ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಅತ್ಯಂತ ಹೆಚ್ಚು ಪ್ರಾಧಾನ್ಯತೆಯನ್ನು ಗಿಟ್ಟಿಸಿಕೊಂಡಿದೆ. ಇದರಲ್ಲಿ ದೇಶದ ಹೆಸರಾಂತ ಟಾಪ್ ಗೇರ್, ಆಟೋ ಇಂಡಿಯಾ, ಕಾರ್ ಇಂಡಿಯಾ, ಓವರ್ ಡ್ರೈವ್, ಆಟೋ ಬ್ಲಿಡ್, ಆಟೋಎಕ್ಸ್, ಹಿಂದೂ ಬಿಸಿನೆಸ್ ಲೈನ್ ಮತ್ತು ಇವೊದ ಪ್ರಧಾನ ಸಂಪಾದಕರು ತೀರ್ಪುಗಾರರ ಪಟ್ಟಿಯಲ್ಲಿ ಸೇರಿದ್ದಾರೆ.

ಹ್ಯುಂಡೈ ಗ್ರಾಂಡ್ ಐ10ಗೆ 'ಭಾರತದ ವರ್ಷದ ಕಾರು ಪ್ರಶಸ್ತಿ' ಗರಿ

ಆ ಬಳಿಕ ಪ್ರಶಸ್ತಿ ಸ್ವೀಕರಿಸುತ್ತಾ ಮಾತನಾಡಿದ ಹ್ಯುಂಡೈ ಮೋಟಾರು ಇಂಡಿಯಾ ಲಿಮಿಟೆಡ್ ಮಹಾ ನಿರ್ದೇಶಕ ಹಾಗೂ ಸಿಇಒ ಬಿಎಸ್ ಸಿಯೋ, ಅತ್ಯಂತ ಪ್ರತಿಷ್ಠಿತ ವಾಹನ ಪ್ರಶಸ್ತಿ ಸ್ವೀಕರಿಸಿರುವುದರಲ್ಲಿ ನಾವು ಗೌರವಾನ್ವಿತರಾಗಿದ್ದೇವೆ ಎಂದಿದ್ದಾರೆ.

ಹ್ಯುಂಡೈ ಗ್ರಾಂಡ್ ಐ10ಗೆ 'ಭಾರತದ ವರ್ಷದ ಕಾರು ಪ್ರಶಸ್ತಿ' ಗರಿ

ಇಂಡಿಯಾ ವರ್ಷದ ಕಾರು ಪ್ರಶಸ್ತಿಯು ದೇಶದ ಪ್ರಯಾಣಿಕ ಮಾರುಕಟ್ಟೆಯಲ್ಲಿ ಹ್ಯುಂಡೈ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಇದು ಹೆಚ್ಚಿನ ಗುಣಮಟ್ಟ, ಬಾಳ್ವಿಕೆ ಮತ್ತು ವಿಶ್ವಾಸಾರ್ಹತೆಯನ್ನು ಪ್ರದಾನ ಮಾಡುತ್ತಿದೆ ಎಂದಿದ್ದಾರೆ.

ಹ್ಯುಂಡೈ ಗ್ರಾಂಡ್ ಐ10ಗೆ 'ಭಾರತದ ವರ್ಷದ ಕಾರು ಪ್ರಶಸ್ತಿ' ಗರಿ

ಅಷ್ಟಕ್ಕೂ ಹ್ಯುಂಡೈ ಗ್ರಾಂಡ್ ಐ10 ಕಾರಿನಲ್ಲಿರುವ ವೈಶಿಷ್ಟ್ಯಗಳೇನು ? ಮಾಹಿತಿಗಾಗಿ ಸಂದರ್ಶಿಸಿರಿ

ಹ್ಯುಂಡೈ ಗ್ರಾಂಡ್ ಐ10ಗೆ 'ಭಾರತದ ವರ್ಷದ ಕಾರು ಪ್ರಶಸ್ತಿ' ಗರಿ

ಹ್ಯುಂಡೈ ಗ್ರಾಂಡ್ ಐ10 ಫುಲ್ ಬಾಡಿ ಸ್ಕ್ಯಾನ್ ಮಾಡಿ

More from DriveSpark

Article Published On: Friday, December 20, 2013, 6:04 [IST]
English summary
Hyundai Motor India has won the most coveted Indian Car of the Year 2014 (ICOTY) award for the newly launched Grand i10. Grand has created a new benchmark in terms of quality, features and technology offering higher value proposition to Indian customers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+