ಆಮದು ಕಾರುಗಳಿಗೆ ತೆರಿಗೆ ಕಡಿತ ಮಾಡಿದ ಮಹಾರಾಷ್ಟ್ರ
ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಾರುಗಳ ಮೇಲಿನ ಸುಂಕವನ್ನು ಕಡಿತ ಮಾಡುವುದಾಗಿ ಮಹಾರಾಷ್ಟ್ರ ಸರಕಾರವು ಪ್ರಕಟಿಸಿದೆ. ಸರಕಾರವು ಆಮದು ಮಾಡಿದ ಕಾರುಗಳಿಗೆ ಶೇಕಡ 20ರಷ್ಟು ತೆರಿಗೆ ವಿಧಿಸಲಿದೆ. ಇಲ್ಲಿವರೆಗೆ ಪೆಟ್ರೋಲ್ ಕಾರುಗಳ ಆಮದಿಗೆ ಶೇಕಡ 22ರಷ್ಟು ಮತ್ತು ಡೀಸೆಲ್ ಕಾರುಗಳ ಆಮದಿಗೆ ಶೇಕಡ 26ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು.
ರಾಜ್ಯ ಕ್ಯಾಬಿನೆಟ್ ಸಚಿವಾಲಯವು ಆಮದು ಮಾಡುವ ಕಾರುಗಳ ತೆರಿಗೆ ಕಡಿತ ತೀರ್ಮಾನ ಕೈಗೊಂಡಿದೆ. ಆಮದು ಕಾರುಗಳಿಗೆ ಕಡಿಮೆ ತೆರಿಗೆ ವಿಧಿಸುವ ರಾಜ್ಯಗಳಿಗೆ ಹೆಚ್ಚಿನ ಜನರು ಕಾರುಗಳನ್ನು ಆಮದು ಮಾಡಿಕೊಳ್ಳುವುದು ಗಮನಕ್ಕೆ ಬಂದಿರುವ ಹಿನ್ನಲೆಯಲ್ಲಿ ಸರಕಾರವು ತೆರಿಗೆ ಕಡಿತಕ್ಕೆ ನಿರ್ಧರಿಸಿದೆ.
ಅಂದರೆ ಮಹಾರಾಷ್ಟ್ರದ ಸಾವಿರಾರು ಜನರು ಬೇರೆ ರಾಜ್ಯಗಳಿಗೆ ಕಾರುಗಳನ್ನು ಆಮದು ಮಾಡಿಕೊಳ್ಳುತ್ತಾರೆ. ಇದರಿಂದ ಆಮದು ಸುಂಕ ಕಡಿಮೆಯಾಗುತ್ತದೆ.
2012-13ನೇ ಸಾಲಿನ ಕೇಂದ್ರ ಬಜೆಟಿನಲ್ಲಿ ಖಾಸಗಿ ವಾಹನಗಳಿಗೆ ತೆರಿಗೆ ಹೆಚ್ಚಿಸಲಾಗಿತ್ತು. ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಕಾರು ಆಮದಿಗೆ ಕ್ರಮವಾಗಿ ಶೇಕಡ 2 ಮತ್ತು ಶೇಕಡ 4ರಷ್ಟು ತೆರಿಗೆ ಕಡಿತ ಮಾಡಲಾಗುವುದೆಂದು ಸರಕಾರ ಹೇಳಿದೆ.


Click it and Unblock the Notifications









