ವಾಹನಗಳ ಮೇಲಿನ ತೆರಿಗೆ ಹೆಚ್ಚಿಸಲು ಕೇಂದ್ರಕ್ಕೆ ಮನವಿ ಮಾಡಿದ ಮಹಾರಾಷ್ಟ್ರ ಸರ್ಕಾರ

ಈಗಾಗಲೇ ದೇಶದಲ್ಲಿ ಏಕ ರೂಪದ ತೆರಿಗೆ ವ್ಯವಸ್ಥೆ(ಜಿಎಸ್‌ಟಿ) ಜಾರಿಯಲ್ಲಿದ್ದು, ಈ ನಡುವೆ ವಾಹನಗಳ ಮೇಲೆ ತೆರಿಗೆ ಹೆಚ್ಚಿಸುವಂತೆ ಮಹಾರಾಷ್ಟ್ರ ಸರ್ಕಾರ ಕೇಂದ್ರ ಪ್ರಸ್ತಾವನೆ ಸಲ್ಲಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

To Follow DriveSpark On Facebook, Click The Like Button
ವಾಹನಗಳ ಮೇಲಿನ ತೆರಿಗೆ ಹೆಚ್ಚಿಸಲು ಕೇಂದ್ರದ ಮೊರೆ ಹೋದ ಮಹಾರಾಷ್ಟ್ರ

ಈ ಹಿಂದೆ ಜಿಎಸ್‌ಟಿ ಜಾರಿಯಾದ ನಂತರ ಕಾರು ಖರೀದಿದಾರರು ಮತ್ತು ಉತ್ಪಾದಕರು ವಿವಿಧ ರೀತಿಯ ತೆರಿಗೆ ಪದ್ಧತಿಗಳಿಂದ ಮುಕ್ತಿ ಹೊಂದಿ ನಿಟ್ಟುಸಿರುವ ಬಿಟ್ಟಿದ್ದರು. ಆದ್ರೆ ಈ ಮಧ್ಯೆ ಮೋಟಾರ್ ವೆಹಿಕಲ್ಸ್ ಮೇಲಿನ ತೆರಿಗೆ ಹೆಚ್ಚಿಸುವಂತೆ ಮಹಾರಾಷ್ಟ್ರಾ ಸರ್ಕಾರ ಪಟ್ಟು ಹಿಡಿದಿದೆ.

ವಾಹನಗಳ ಮೇಲಿನ ತೆರಿಗೆ ಹೆಚ್ಚಿಸಲು ಕೇಂದ್ರದ ಮೊರೆ ಹೋದ ಮಹಾರಾಷ್ಟ್ರ

ಈ ಸಂಬಂಧ ಮುಂಗಾರು ಅಧಿವೇಶನದಲ್ಲಿ ಹೊಸ ತೆರಿಗೆ ಪದ್ಧತಿ ಬಗ್ಗೆ ನಿಳುವಳಿ ಮಂಡಿಸಿರುವ ಮಹಾರಾಷ್ಟ್ರ ಸರ್ಕಾರವು, ವಾಹನ ಮೇಲಿನ ತೆರಿಗೆ ಹೆಚ್ಚಿಸುವುದರಿಂದ ಸಮಾಧಾನಕರ ರಾಜ್ಯಸ್ವ ಹರಿದು ಬರಲಿದೆ ಎಂದು ಕೇಂದ್ರಕ್ಕೆ ಮನವಿ ಮಾಡಿದೆ.

ವಾಹನಗಳ ಮೇಲಿನ ತೆರಿಗೆ ಹೆಚ್ಚಿಸಲು ಕೇಂದ್ರದ ಮೊರೆ ಹೋದ ಮಹಾರಾಷ್ಟ್ರ

ರೂ. 10 ಲಕ್ಷ ಮೇಲ್ಪಟ್ಟ ವಾಹನಗಳ ಮೇಲೆ ಶೇ.11 ರಷ್ಟು ತೆರಿಗೆ ಮತ್ತು ರೂ.20 ಲಕ್ಷ ಮೇಲ್ಪಟ್ಟ ವಾಹನಗಳ ಮೇಲೆ ಶೇ.13 ರಷ್ಟು ತೆರಿಗೆ ವಿಧಿಸಲು ಅವಕಾಶ ನೀಡುವಂತೆ ಕೇಂದ್ರಕ್ಕೆ ಪಟ್ಟು ಹಿಡಿದಿದೆ.

ವಾಹನಗಳ ಮೇಲಿನ ತೆರಿಗೆ ಹೆಚ್ಚಿಸಲು ಕೇಂದ್ರದ ಮೊರೆ ಹೋದ ಮಹಾರಾಷ್ಟ್ರ

ಆದ್ರೆ ಈಗಾಗಲೇ ವಿವಿಧ ರೀತಿಯ ತೆರಿಗೆ ಪದ್ಧತಿಗಳನ್ನು ರದ್ದು ಮಾಡಿ ಏಕರೂಪದ ಜಿಎಸ್‌ಟಿ ಜಾರಿಗೆ ತರಲಾಗಿದ್ದರು ಮಹಾರಾಷ್ಟ್ರ ಸರ್ಕಾರ ಇದೀಗ ಹೊಸ ರಾಗ ಶುರುಮಾಡಿರುವ ವಾಹನ ಉತ್ಪಾದಕರು ಮತ್ತು ಖರೀದಿದಾರರಿಗೆ ತಲೆಬಿಸಿ ಉಂಟುಮಾಡಿದೆ.

ವಾಹನಗಳ ಮೇಲಿನ ತೆರಿಗೆ ಹೆಚ್ಚಿಸಲು ಕೇಂದ್ರದ ಮೊರೆ ಹೋದ ಮಹಾರಾಷ್ಟ್ರ

ಇದರ ಜೊತೆ ಎಲ್‌ಪಿಜಿ ಮತ್ತು ಸಿಎನ್‌ಜಿ ಮೇಲೆ ಓಡುತ್ತಿರುವ ವಾಹನಗಳ ಮೇಲೂ ಶೇ.7 ರಷ್ಟು ತೆರಿಗೆ ಹೆಚ್ಚಳ ಮನವಿ ಸಲ್ಲಿಸಲಾಗಿದ್ದು, ಮಹಾರಾಷ್ಟ್ರ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರ ಒಂದು ಗ್ರೀನ್ ಸಿಗ್ನಲ್ ನೀಡಿದ್ದೇ ಆದಲ್ಲಿ ಹೊಸ ವಾಹನ ಖರೀದಿದಾರರಿಗೆ ಮತ್ತೆ ಬೆಲೆ ಬಿಸಿ ತಟ್ಟಲಿದೆ.

ವಾಹನಗಳ ಮೇಲಿನ ತೆರಿಗೆ ಹೆಚ್ಚಿಸಲು ಕೇಂದ್ರದ ಮೊರೆ ಹೋದ ಮಹಾರಾಷ್ಟ್ರ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಹಾರಾಷ್ಟ್ರ ಸರ್ಕಾರದ ಹೊಸ ಯೋಜನೆ ಒಂದು ವೇಳೆ ಜಾರಿಯಾದ್ರೆ ಆಟೋ ಮೊಬೈಲ್ ಉದ್ಯಮದ ಮೇಲೆ ನಕಾರಾತ್ಮ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಕೇಂದ್ರವು ಇಂತಹ ಮನವಿಗಳಿಗೆ ಮನ್ನಣೆ ನೀಡದಿರುವುದೇ ಒಳಿತು.

Read more on ತೆರಿಗೆ tax
English summary
Read in Kannada in Maharashtra Proposes For Hike In Motor Vehicle Tax.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark