ಅಗ್ಗದ ಹೈಬ್ರಿಡ್ ಕಾರು ಸೇರಿ ಮಾರುತಿಯ 3 ಹೊಸ ಕಾರುಗಳು ಬಿಡುಗಡೆಗೆ ಸಜ್ಜು: ವಿಶೇಷತೆಗಳೇನು?

ಮಾರುತಿ ಸುಜುಕಿ ಪ್ರಸ್ತುತ ಕಾರು ಮಾರಾಟದಲ್ಲಿ ಭಾರತದಲ್ಲಿ ನಂ.1 ಬ್ರ್ಯಾಂಡ್ ಆಗಿ ಮುಂದುವರಿಯುತ್ತಿದೆ. ದೇಶದಲ್ಲಿ ಪ್ರತಿ ವರ್ಷ ಇತರ ಬ್ರಾಂಡ್‌ಗಳಿಂದ ಪೈಪೋಟಿ ಎದುರಾದರು ಮಾರುತಿ ಮಾರಾಟದಲ್ಲಿ ಕುಸಿತವನ್ನು ಕಾಣುವುದಿಲ್ಲ. ಕೆಲವೊಮ್ಮೆ ಮಾಡಲ್‌ಗಳು ಹಳೆಯದಾದಂತೆ ಅವುಗಳಿಗೆ ಹೊಸ ಅಪ್‌ಡೇಟ್‌ಗಳನ್ನು ನೀಡಿ ಫೇಸ್‌ಲಿಫ್ಟ್ ಮಾಡಲ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅದರಂತೆ ಮಾರುತಿ ಸುಜುಕಿ ಈಗ ಎರಡು ಕಾರುಗಳಿಗೆ ಅಪ್‌ಡೇಟ್‌ ಸೇರಿದಂತೆ ಒಂದು ಹೊಚ್ಚ ಹೊಸ ಮಾಡಲ್‌ ಅನ್ನು 2026 - 2027 ನಡುವೆ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಮಾರುತಿ ಸುಜುಕಿ YMC: ಮಾರುತಿ ಸುಜುಕಿ ಇತ್ತೀಚೆಗಷ್ಟೆ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಪ್ರಸ್ತುತ ಇರುವ ಇವಿಗಳ ನಡುವೆ ಮಾರುತಿ ಇವಿ ತುಂಬಾ ಪೈಪೋಟಿ ಎದುರಿಸಬೇಕಿದ್ದು, ಇವಿ ಮಾರುಕಟ್ಟೆಯಲ್ಲಿ ಮುಂದುವರಿಯಲು ಮತ್ತೊಂದು ಎಲೆಕ್ಟ್ರಿಕ್ ಕಾರನ್ನು ಶೀಘ್ರದಲ್ಲೆ ಬಿಡುಗಡೆ ಮಾಡುವ ಅವಶ್ಯಕತೆ ಇದೆ. ಇ ವಿಟಾರಾದಂತೆಯೇ ಅದೇ ಡಿಸೈನ್ ಮತ್ತು ಬ್ಯಾಟರಿ ಸಂರಚನೆಗಳನ್ನು ಆಧರಿಸಿರುವ ಕಾರು ಬರಲಿದೆ ಎಂದು ಮೂಲಗಳು ತಿಳಿಸಿವೆ.

maruti-suzuki-to-launch-3-new-cars-including-1-hybrid-car

ಇದಕ್ಕೆ ಇನ್ನು ಹೆಸರಿಟ್ಟಲ್ಲವಾದರೂ, ಮಾರುತಿ ಸುಜುಕಿ YMC ಕೋಡ್ ನೇಮ್ ಬಳಸಲಾಗುತ್ತಿದೆ. ಮುಂಬರುವ ಈ ಎಲೆಕ್ಟ್ರಿಕ್ MPV ಮಾರುತಿ ಸುಜುಕಿಯ EV ಶ್ರೇಣಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಸ್ಟೈಲಿಂಗ್ ಅಂಶಗಳು ಕಂಪನಿಯ ಇತರ SUV ಮಾಡಲ್‌ಗಳಿಂದ ಸ್ಫೂರ್ತಿ ಪಡೆಯಬಹುದು. ಉದ್ಯಮ ಮೂಲಗಳ ಪ್ರಕಾರ ಈ ಕಾರು 2026 ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ನವೀಕರಿಸಿದ ಮಾರುತಿ ಸುಜುಕಿ ಫ್ರಾಂಕ್ಸ್: ಫ್ರಾಂಕ್ಸ್ ಅನ್ನು ಭಾರತದಲ್ಲಿ ಕಂಪನಿಯ ಫ್ಲೆಕ್ಸ್-ಫ್ಯೂಲ್ ಪವರ್‌ಟ್ರೇನ್‌ಗೆ ಸಂಭಾವ್ಯ ಲಾಂಚ್‌ಪ್ಯಾಡ್ ಆಗಿ ಮೌಲ್ಯಮಾಪನ ಮಾಡಲಾಗುತ್ತಿದೆ. ಅನುಮೋದನೆ ದೊರೆತರೆ, ಇದು ದೇಶದಲ್ಲಿ ಫ್ಲೆಕ್ಸ್-ಫ್ಯೂಲ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೊದಲ ಮಾಡಲ್ ಆಗಲಿದೆ. ಜೊತೆಗೆ, ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿರುವಂತೆ ಲೆವೆಲ್ 2 ADAS ಸೂಟ್ ಅನ್ನು ಸಹ ನೀಡಬಹುದು ಎನ್ನಲಾಗಿದೆ.

maruti-suzuki-to-launch-3-new-cars-including-1-hybrid-car

ಹಾಗೆಯೇ ಮಾರುತಿ ಫ್ರಾಂಕ್ಸ್ ಹೈಬ್ರಿಡ್ ಕಾರು ಕೂಡ ಶೀಘ್ರದಲ್ಲೆ ಬಿಡುಗಡೆಯಾಗಲಿದೆ. ಈಗಾಗಲೇ ರೋಡ್‌ ಟೆಸ್ಟ್ ಮಾಡುವಾಗ ಹಲವಾರು ಬಾರಿ ಕಾಣಿಸಿಕೊಂಡಿದ್ದು, ಪರೀಕ್ಷೆಗಳು ಕೊನೆಯ ಹಂತವನ್ನು ತಲುಪಿವೆ ಎಂದು ಹೇಳಲಾಗುತ್ತಿದೆ. ಪೆಟ್ರೋಲ್ ಚಾಲಿತ ಫ್ರಾಂಕ್ಸ್‌ಗೆ ದೇಶದಲ್ಲಿ ತುಂಬಾ ಡಿಮ್ಯಾಂಡ್ ಇದೆ, ಈಗ ಹೈಬ್ರಿಡ್ ಕಾರು ಬಂದರೆ ಮಾರಾಟದಲ್ಲಿ ಫ್ರಾಂಕ್ಸ್ ನಂ.1 ಕಾರಾಗುವುದು ಖಚಿತ ಎಂದು ಹೇಳಲಾಗುತ್ತಿದೆ.

ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್: ಇತ್ತೀಚೆಗೆ ರಸ್ತೆ ಪರೀಕ್ಷೆ ನಡೆಸುತ್ತಿದ್ದಾಗ ನವೀಕರಿಸಿದ ಬ್ರೆಝಾ ಕಾಣಿಸಿಕೊಂಡಿದ್ದು, ಫೇಸ್‌ಲಿಫ್ಟ್ ಮಾಡಲ್ ಶೀಘ್ರದಲ್ಲೆ ಬರಲಿದೆ ಎಂಬ ಸುಳಿವನ್ನು ನೀಡಿದೆ. ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಉತ್ತಮ ಮಾರಾಟ ಕಾಣುತಿದ್ದ ಬ್ರೆಝಾಗೆ ಪ್ರತಿಸ್ಪರ್ಧಿಗಳಿಂದ ಪೈಪೋಟಿ ಹೆಚ್ಚಾಗಿದ್ದು, ಹೊಸ ಅಪ್‌ಡೇಟ್‌ಗಳು ಅನಿವಾರ್ಯವಾಗಿದೆ. ಹಾಗಾಗಿ ಈ ಹೊಸ ನವೀಕರಿಸಿದ ಬ್ರೆಝಾವನ್ನು ಪರಿಚಯಿಸಲಾಗುತ್ತಿದೆ.

maruti-suzuki-to-launch-3-new-cars-including-1-hybrid-car

ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ಕಾರಿನ ಕ್ಯಾಬಿನ್ ಒಳಗೆ ಅತ್ಯಂತ ಗಮನಾರ್ಹ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ರಿಫ್ರೆಶ್ ಮಾಡಲಾದ ಮಾದರಿಯು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ದೊಡ್ಡ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಅನ್ನು ಪಡೆಯುವ ಸಾಧ್ಯತೆಯಿದೆ. ತಂತ್ರಜ್ಞಾನದ ಬಗ್ಗೆ ಗ್ರಾಹಕರ ನಿರೀಕ್ಷೆಗಳು ಹೆಚ್ಚುತ್ತಿರುವಂತೆ ಇಂಟೀರಿಯರ್ ಅಪ್‌ಡೇಟ್‌ಗಳು SUV ಅನ್ನು ಸ್ಪರ್ಧಾತ್ಮಕವಾಗಿರಲು ಸಹಾಯ ಮಾಡುತ್ತದೆ.

ಹೊರಭಾಗದಲ್ಲಿ, ಬದಲಾವಣೆಗಳು ಸೂಕ್ಷ್ಮವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ - ಬಹುಶಃ ಸಣ್ಣ ಸ್ಟೈಲಿಂಗ್ ಟ್ವೀಕ್‌ಗಳು ಮತ್ತು ಅಲಾಯ್ ವೀಲ್‌ಗಳಿಗೆ ಹೊಸ ವಿನ್ಯಾಸಕ್ಕೆ ಸೀಮಿತವಾಗಿರುತ್ತದೆ. ಆದರೆ CNG ವೇರಿಯೆಂಟ್‌ನಲ್ಲಿ ಹೆಚ್ಚು ಗಮನಾರ್ಹ ಸುಧಾರಣೆ ಬರಬಹುದು, ಇಂಧನ ಟ್ಯಾಂಕ್ ಅನ್ನು ನೆಲದ ಕೆಳಗೆ ಸ್ಥಳಾಂತರಿಸುವ ನಿರೀಕ್ಷೆಯಿದೆ. ಹೊಸ 6-ಸ್ಪೀಡ್ MT ಗೇರ್ ಬಾಕ್ಸ್‌ ಸಹ ಫೇಸ್‌ಲಿಫ್ಟ್ ಮಾಡಲ್‌ನಲ್ಲಿ ಸಿಗಬಹುದು.

Article Published On: Wednesday, February 25, 2026, 17:55 [IST]
English summary
Maruti suzuki to launch 3 new cars including 1 hybrid car
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+