ಇನ್ನು ಮುಂದೆ ಬಾಂಡ್ ಸಿನೆಮಾದಲ್ಲಿ ಮಹೀಂದ್ರ ಕಾರು?

By Nagaraja

ಹೌದು, ಈ ಸುದ್ದಿ ಕೇಳಿ ನೀವು ಹೈರಾನ್ ಆಗಿದ್ದೀರಾ? ಯಾಕೆಂದರೆ ಭವಿಷ್ಯದಲ್ಲಿ ಇದು ನನಸಾಗುವ ಸಾಧ್ಯತೆಯೂ ಇದೆ. ಹಾಗಾಗಿ ಇದನ್ನು ಬರಿ ಸುಳ್ಳು ಸುದ್ದಿ ಎಂದು ತಳ್ಳಿಹಾಕುವಂತಿಲ್ಲ. ಇದಕ್ಕಾಗಿಯೇ ಇಂತಹದೊಂದು ಟೈಟಲ್ ಹೆಸರಿಸಿದ್ದೇವೆ.

ವಿಷಯ ಏನೆಂದರೆ ಈ ಹಿಂದೆ ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಆಸ್ಟನ್ ಮಾರ್ಟಿನ್ ಶೇರುಗಳನ್ನು ಭಾರತದ ಮುಂಚೂಣಿಯ ಕಂಪನಿ ಮಹೀಂದ್ರ ಖರೀದಿಸಲಿದೆಯಂತೆ! ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಸ್ಟನ್ ಮಾರ್ಟಿನ್‌ನ ಕುವೈಟ್ ಮಾಲಿಕರು ಮಹೀಂದ್ರ ಕಂಪನಿಯನ್ನು ಸಮೀಪಿಸಿದ್ದಾರೆ.

ಆಸ್ಟನ್ ಮಾರ್ಟಿನ್ ಕಂಪನಿಯಲ್ಲಿ ಶೇಕಡಾ 64ರಷ್ಟು ಶೇರು ಹೊಂದಿರುವ ಇನ್ವೆಸ್ಟ್‌ಮೆಂಟ್ ದಾರ್ ಪ್ರಕಾರ ಕಂಪನಿ ತೀರಾ ನಷ್ಟದಲ್ಲಿ ಓಡುತ್ತಿದ್ದು ಇದನ್ನು ಶೀಘ್ರದಲ್ಲೇ ಸರಿದೂಗಿಸಬೇಕಾಗಿದೆ. ಇದರಂತೆ ಕಂಪನಿಗೆ ಒಳ್ಳೆಯ ಶೇರುಗಳನ್ನು ಸೂಚಿಸುವಂತೆ ರಾಥ್ಸ್‌ಚೈಲ್ಡ್‌ಗೆ ಸೂಚಿಸಿದೆ.


ಐದು ವರ್ಷಗಳ ಹಿಂದೆ ಅಂದರೆ 2007ನೇ ಇಸವಿಯಲ್ಲಿ ಬರೋಬ್ಬರಿ 800 ಮಿಲಿಯನ್ ಹೂಡಿಕೆ ಮಾಡಿ ಆಸ್ಟನ್ ಮಾರ್ಟಿನ್ ಶೇರುಗಳನ್ನು ಇನ್ವೆಸ್ಟಿಮೆಂಟ್ ದಾರ್ ಖರೀದಿಸಿತ್ತು. ಇದು ಭಾರತೀಯ ರೂಪಾಯಿಗಳಿಗೆ ಹೋಲಿಸಿದರೆ 4,400 ಕೋಟಿ ರೂಪಾಯಿಗಳಾಗಿವೆ.

ಒಟ್ಟಿನಲ್ಲಿ ಆಸ್ಟನ್ ಮಾರ್ಟಿನ್ ಶೇರು ಮಾರಾಟ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರ ಬಂದಿಲ್ಲ. ಸದ್ಯ ಎರಡು ಕಂಪನಿಗಳು ಶೇರು ಮಾರಾಟ ಸುದ್ದಿಯನ್ನು ಅಲ್ಲಗಳೆದಿದೆ. ಆದರೆ ಮೂಲಗಳ ಪ್ರಕಾರ ಸಾಲದ ಸುಳಿಯಲ್ಲಿರುವ ಇನ್ವೆಸ್ಟಿಮೆಂಟ್ ದಾರ್ ನೂತನ ಶೇರುದಾರರ ಹುಡುಕಾಟದಲ್ಲಿದೆ.

ಆಸ್ಟನ್ ಮಾರ್ಟಿನ್ ಖರೀದಿಸುವವರ ಪಟ್ಟಿಯಲ್ಲಿ ಮಹೀಂದ್ರ ಫೇವರಿಟ್ ಲಿಸ್ಟ್‌ನಲ್ಲಿದೆ. ಆದರೆ ಆಸ್ಟನ್ ಮಾರ್ಟಿನ್ ಬ್ರಾಂಡ್ ಹೆಸರಿನ ಹೊರತಾಗಿ ಸ್ಯಾಂಗ್ಯೊಂಗ್ ಮಾಲಿಕ ಮಹೀಂದ್ರ ಪಡೆಯಲಿರುವ ಲಾಭದ ಬಗ್ಗೆ ಕಂಪನಿ ಮಗದೊಮ್ಮೆ ಯೋಚಿಸುವ ಸಾಧ್ಯತೆಯಿದೆ.

ಜಾಗ್ವಾರ್ ಲ್ಯಾಂಡ್ ರೋವರನ್ನು ಟಾಟಾ ಮೋಟಾರ್ಸ್ ಖರೀದಿಸಿದಂತೆಯೇ ಆಸ್ಟನ್ ಮಾರ್ಟಿನ್‌ರನ್ನು ಮಹೀಂದ್ರ ಖರೀದಿಸಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ ಆಸ್ಟನ್ ಮಾರ್ಟಿನ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವುದರಿಂದ ಮಹೀಂದ್ರ ಮುಂದಿನ ನಡೆ ಹೇಗಿರಬಹುದು ಎಂಬುದಕ್ಕೆ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಲಭಿಸಲಿದೆ.

More from DriveSpark

Article Published On: Friday, November 16, 2012, 13:00 [IST]
English summary
Will Aston Martin become yet another Indian owned iconic British car brand? According to reports coming in, the Kuwaiti owners of Aston Martin have approached several potential buyers to sell their majority stake in the company. Aston Martin, more famous for being James Bond's car might soon have an Indian super hero driving it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+