ಬೆಂಗ್ಳೂರಲ್ಲಿ ರೇವಾ ಪರಿಸರ ಸ್ನೇಹಿ ಘಟಕ ಉದ್ಘಾಟನೆ

ಬೆಂಗಳೂರು, ಆ 23: ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಎಲೆಕ್ಟ್ರಿಕ್ ಕಾರು ವಿಭಾಗ ಮಹೀಂದ್ರ ರೇವಾದ ಹೊಸ ಘಟಕವೊಂದು ಬೆಂಗಳೂರಿನಲ್ಲಿ ನಿನ್ನೆ ಶುಭಾರಂಭಗೊಂಡಿದೆ. ಸಂಪೂರ್ಣವಾಗಿ ಸೌರಶಕ್ತಿ ಚಾಲೀತ ಈ ಘಟಕವನ್ನು ಮಹೀಂದ್ರ ಸಮೂಹದ ಚೇರ್ಮನ್ ಆನಂದ್ ಮಹೀಂದ್ರ ಉದ್ಘಾಟಿಸಿದ್ದಾರೆ.

ನೂತನ ಮಹೀಂದ್ರ ರೇವಾ ಎನ್ಎಕ್ಸ್ಆರ್ ಎಲೆಕ್ಟ್ರಿಕ್ ಕಾರು ಉತ್ಪಾದನೆಗಾಗಿ ನೂತನ ಘಟಕವನ್ನು ನಿರ್ಮಿಸಲಾಗಿದೆ. ಕಂಪನಿಯು ಇದಕ್ಕೆ ಸುಮಾರು 100 ಕೋಟಿ ರುಪಾಯಿ ಹೂಡಿಕೆ ಮಾಡಿದೆ. ಸುಮಾರು 4.2 ಎಕರೆ ವ್ಯಾಪಿಸಿರುವ ನೂತನ ಘಟಕದಲ್ಲಿ ಕಾರು ನಿರ್ಮಾಣಕ್ಕೆ ಅತ್ಯಲ್ಪ ಕರೆಂಟ್ ಬಳಸಲಾಗುವುದು ಎಂದು ಕಂಪನಿ ಹೇಳಿದೆ.

ಈ ಘಟಕಕ್ಕೆ ಅಗತ್ಯವಿರುವ ಶೇಕಡ 35ರಷ್ಟು ವಿದ್ಯುತನ್ನು ಘಟಕದ ಹೊರಭಾಗದಲ್ಲಿ ಅಳವಡಿಸಿರುವ ಸೋಲಾರ್ ಪ್ಯಾನೆಲಿನಿಂದ ಪಡೆಯಲಾಗುವುದು ಎಂದು ಕಂಪನಿ ಹೇಳಿದೆ. ಘಟಕದ ಹೊರಭಾಗದಲ್ಲಿ ಸಾಲಾಗಿ ಜೋಡಿಸಿರುವ ಸೋಲಾರ್ ಪ್ಯಾನೆಲುಗಳು ಕಣ್ಮನ ಸೆಳೆಯುತ್ತದೆ.

ನೂತನ ಘಟಕವು ವಾರ್ಷಿಕ 30 ಸಾವಿರ ಕಾರು ಉತ್ಪಾದನೆ ಸಾಮರ್ಥ್ಯ ಹೊಂದಿದೆ. ಆದರೆ ಕಂಪನಿಯು ಆರಂಭಿಕವಾಗಿ ಕೇವಲ 6 ಸಾವಿರ ಕಾರುಗಳನ್ನು ಉತ್ಪಾದಿಸಲು ಯೋಜಿಸಿದೆ. ಯುರೋಪ್ ಮಾರುಕಟ್ಟೆಗೆ ರಫ್ತು ಆರಂಭವಾದ ನಂತರ ಕಾರು ಉತ್ಪಾದನೆಯನ್ನು ಹೆಚ್ಚಿಸಲಾಗುವುದು ಎಂದು ಕಂಪನಿ ಹೇಳಿದೆ.

ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಜನಪ್ರಿಯಗೊಂಡಿರುವ ಮಹೀಂದ್ರ ರೇವಾ ಎಲೆಕ್ಟ್ರಿಕ್ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್(ಮಹೀಂದ್ರ ರೇವಾ)ಗೆ ಭಾರತೀಯ ಹಸಿರು ನಿರ್ಮಾಣ ಆಯೋಗ(ಐಜಿಬಿಸಿ)ದಿಂದ ಮಹತ್ವದ "ಪ್ಲಾಟಿನಂ" ರೇಟಿಂಗ್ ಪಡೆದಿದೆ.

ಕೇವಲ ಪರಿಸರ ಸ್ನೇಹಿ ವಾಹನ ಉತ್ಪಾದನೆ ಮಾತ್ರವಲ್ಲದೇ ಘಟಕವನ್ನೂ ಪರಿಸರ ಸ್ನೇಹಿಯಾಗಿಸಿದ ಮಹೀಂದ್ರ ಕಂಪನಿಯು ಉಳಿದ ಕಂಪನಿಗಳಿಗಿಂತ ವಿಶೇಷವಾಗಿ ಕಾಣುತ್ತದೆ. ಕನ್ನಡ ಡ್ರೈವ್ ಸ್ಪಾರ್ಕ್ ಕಡೆಯಿಂದ ಮಹೀಂದ್ರ ಸಮೂಹದ ಮುಖ್ಯಸ್ಥ ಆನಂದ್ ಮಹೀಂದ್ರಗೆ ಅಭಿನಂದನೆಗಳು. ನೀವೂ ನಮ್ಮ ಟ್ವಿಟ್ಟರ್ ಪುಟಕ್ಕೆ ಪ್ರವೇಶಿಸಿ ಆನಂದ್ ಮಹೀಂದ್ರರನ್ನು ಅಭಿನಂದಿಸಬಹುದು.

ಓದಿ: ರೇವಾ ಎನ್ಎಕ್ಸ್ಆರ್: ಎಲೆಕ್ಟ್ರಿಕ್ ಕಾರಿನ ತಾಜಾ ಸುದ್ದಿ

More from DriveSpark

Article Published On: Thursday, August 23, 2012, 10:36 [IST]
English summary
Mahindra Reva, the electric car division of Mahindra and Mahindra can now boast of an eco friendly car plant too along with its eco friendly cars. Mahindra Group chairman Anand Mahindra inaugurated Mahindra Reva's new car manufacturing plant in Bangalore today, 22nd, August. The plant is a result of a Rs.100
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+