ನೂತನ ಮಹೀಂದ್ರ ಥಾರ್ ರಸ್ತೆಗೆ, ದರ 6.87 ಲಕ್ಷ ರು.

ಮಹೀಂದ್ರ ಕಂಪನಿಯು ಹೆಚ್ಚು ಸದ್ದು ಮಾಡದೆ ಥಾರ್ ಎಸ್‌ಯುವಿ ಪರಿಷ್ಕೃತ ಆವೃತ್ತಿಯನ್ನು ಪರಿಚಯಿಸಿದೆ. ನೂತನ ಥಾರ್ ಸಿಆರ್‌ಡಿಇ 4X4 ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ದರ ಸುಮಾರು 6.87 ಲಕ್ಷ ರುಪಾಯಿ. ಇದು ದೆಹಲಿ ಎಕ್ಸ್ ಶೋರೂಂ ದರ. ನೂತನ ಥಾರ್‌ನಲ್ಲಿ ಕಂಪನಿಯು ಸ್ಟಾಂಡರ್ಡ್ ಫೀಚರ್ ಆಗಿ ನೂತನ ಏರ್ ಕಂಡಿಷನರ್ ಮತ್ತು ಎಂಜಿನ್ ಇಮೊಬಿಲೈಝರ್ ಅಳವಡಿಸಿದೆ.

ನೋಡಲು ಜೀಪಿನಂತೆ ಕಾಣುವ ಥಾರ್ ಎಸ್‌ಯುವಿ ರಸ್ತೆಗಿಳಿದಾಗಲೇ ಹೆಚ್ಚು ಪ್ರಶಂಸೆಗೆ ಪಾತ್ರವಾಗಿತ್ತು. ಕಚ್ಚಾ ರಸ್ತೆ ಮಾತ್ರವಲ್ಲದೇ ಆಫ್ ರೋಡ್‌ನಲ್ಲೂ ನಿರುಮ್ಮಳವಾಗಿ ಸಾಗುವ ಇದರ ಶಕ್ತಿ ಹೆಚ್ಚು ಜನರಿಗೆ ಇಷ್ಟವಾಗಿತ್ತು. ಆದರೆ ಹಳೆಯ ಥಾರ್‌ನಲ್ಲಿ ಕೆಲವು ಸಾಮಾನ್ಯ ಫೀಚರುಗಳು ಮಿಸ್ ಆಗಿತ್ತು. ಇದೀಗ ಕಂಪನಿಯು ಎರಡು ಪ್ರಮುಖ ಫೀಚರುಗಳನ್ನು ಅಳವಡಿಸಿ ನೂತನ ಆವೃತ್ತಿಯನ್ನು ಹೊರತಂದಿದೆ.

ನೂತನ ಥಾರ್ ಎರಡು ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. 2.5 ಲೀಟರಿನ ಡಿಐ ಟರ್ಬೊ ಡೀಸೆಲ್ ಎಂಜಿನ್ ಮತ್ತು ಶಕ್ತಿಶಾಲಿ, ಸ್ವಚ್ಛ ಸಿಆರ್‌ಡಿಇ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. ಸಿಆರ್‌ಡಿಒ ಎಂಜಿನ್ 105 ಹಾರ್ಸ್ ಪವರ್ ಮತ್ತು 247ಎನ್ಎಂ ಟಾರ್ಕ್ ಪವರ್ ನೀಡುತ್ತದೆ. 2.5 ಲೀಟರ್‌ನ ಕಾಮನ್ ರೈಲ್ ಟರ್ಬೊ ಡೀಸೆಲ್ ಎಂಜಿನ್ 5 ಸ್ಪೀಡಿನ ಮ್ಯಾನುಯಲ್ ಟ್ರಾನ್ಷ್‌ಮಿಷನ್ ಹೊಂದಿದೆ.

ಇವೆರಡು ಹೊಸ ಫೀಚರುಗಳು ಹೊಸ ಥಾರ್‌ಗೆ ಮಾತ್ರವೆಂದು ಈಗಾಗಲೇ ಹಳೆಯ ಥಾರ್ ಹೊಂದಿರುವರು ಬೇಜಾರು ಮಾಡಬೇಕಿಲ್ಲ. ಹಳೆಯ ಥಾರ್ ಮಾಲೀಕರು ಸಹ ಇವೆರಡು ಫೀಚರುಗಳನ್ನು ಅಳವಡಿಸಿಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ. ಸದ್ಯ ದೇಶದ ಮಾರುಕಟ್ಟೆಯಲ್ಲಿ ಥಾರ್‌ಗೆ ಯಾವುದೇ ಪ್ರತಿಸ್ಪರ್ಧಿ ಕಂಪನಿಗಳಿಲ್ಲ. ಹೊಸದಾಗಿ ಏರ್ ಕಂಡಿಷನರ್ ಇರುವುದರಿಂದ ಬೇಸಿಗೆ ಬಿಸಿಲಿನಲ್ಲೂ ಆರಾಮವಾಗಿ ಥಾರ್ ಸವಾರಿ ಮಾಡಬಹುದು. (ಕನ್ನಡ ಡ್ರೈವ್‌ಸ್ಪಾರ್ಕ್)

More from DriveSpark

Article Published On: Monday, April 9, 2012, 14:53 [IST]
English summary
Mahindra has silently launched an upgraded variant of the Thar CRDe 4X4 SUV at Rs 6.86 lakhs (ex-showroom Delhi). The new Thar gets a factory fitted air conditioner and an engine immobilizer as standard.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+