2015 ಮಹೀಂದ್ರ ಥಾರ್ ಸಿಆರ್‌ಡಿಇ ಮನಮೆಚ್ಚಿದ 15 ವೈಶಿಷ್ಟ್ಯಗಳು!
ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಈಗಾಗಲೇ ತನ್ನ ಜನಪ್ರಿಯ 2015 ಥಾರ್ ಸಿಆರ್‌ಡಿಇ ಫೇಸ್ ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ವಾಹನ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
Also Read : ಹೊಸ ಸ್ವರೂಪದ 2015 ಮಹೀಂದ್ರ ಥಾರ್ ಭರ್ಜರಿ ಬಿಡುಗಡೆ
ಆಫ್ ರೋಡ್ ಸಾಮರ್ಥ್ಯದ ನೂತನ ಮಹೀಂದ್ರ ಥಾರ್ ಸಿಆರ್‌ಡಿಇ ದೇಶದ ಮಾರುಕಟ್ಟೆಯಲ್ಲಿ ಹೇಗೆ ಯಶ ಸಾಧಿಸಲಿದೆ ಎಂಬುದಕ್ಕೆ ಮನಮೆಚ್ಚಿದ 15 ವೈಶಿಷ್ಟ್ಯಗಳ ಮೂಲಕ ಇಲ್ಲಿ ಉತ್ತರ ಕಂಡುಹುಡುಕುವ ಪ್ರಯತ್ನ ಮಾಡಲಾಗುವುದು. ಇದಕ್ಕಾಗಿ ಮುಂದುವರಿಯಿರಿ...

01. ಹೊಸತಾದ ಫ್ರಂಟ್ ಹಾಗೂ ರಿಯರ್ ಬಂಪರ್
ಹೊಸ ಸ್ವರೂಪದ ಮಹೀಂದ್ರ ಥಾರ್ ನಲ್ಲಿ ನೂತನ ಫ್ರಂಟ್ ಹಾಗೂ ರಿಯರ್ ಬಂಪರ್ (ಮುಂಭಾಗ ಹಾಗೂ ಹಿಂಭಾಗದಲ್ಲಿ) ಕಂಡುಬರಲಿದೆ. ಈ ಮೂಲಕ ತಾಜಾತನವನ್ನು ಕಾಪಾಡಿಕೊಳ್ಳಲಾಗಿದೆ.

2. ಹೊಸ ವೀಲ್ ಆರ್ಚ್
ಹಿಂದಿನ ಮಾದರಿಗೆ ಹೋಲಿಸಿದಾಗ ಹೊಸ ಮಹೀಂದ್ರ ಥಾರ್ ಸಿಆರ್‌ಡಿಇ ಮಾದರಿಯಲ್ಲಿ ಹೆಚ್ಚು ಅಗಲವಾದ ವೀಲ್ ಆರ್ಚ್ ಕೊಡಲಾಗಿದೆ. ಈ ಮೂಲಕ ಪರಿಪೂರ್ಣ ಆಫ್ ರೋಡ್ ಗಾಡಿ ಎನಿಸಿಕೊಳ್ಳಲಿದೆ.

3. ಬದಿಯಲ್ಲಿ ಫೂಟ್ ಸ್ಟೆಪ್
ಒಂದು ಆಫ್ ರೋಡ್ ಗಾಡಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸುವಲ್ಲಿ ಬದ್ಧವಾಗಿರುವ ಮಹೀಂದ್ರ ಸಂಸ್ಥೆಯು, ಬಡಿಯಲ್ಲಿ ಗಟ್ಟಿಮುಟ್ಟಾದ ಫೂಟ್ ಸ್ಟೆಪ್ (ಮೆಟ್ಟಿಲು) ಸೌಲಭ್ಯವನ್ನು ನೀಡಿದೆ.

4. ಪರಿಷ್ಕೃತ ಮೇಲಾವರಣ
ಆಕರ್ಷಕ ಮೈಮಾಟ, ಗಾಡಿಯೊಳಗೆ ಶಬ್ದ ಕಡಿಮೆ ಮಾಡುವ ಹಾಗೂ ಎಸಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಹೊಚ್ಚ ಹೊಸತಾದ ಮೇಲಾವರಣದ ಸೌಲಭ್ಯವನ್ನು ಹೊಸ ಮಹೀಂದ್ರ ಥಾರ್ ಸಿಆರ್‌ಡಿಇಯಲ್ಲಿ ಕೊಡಲಾಗಿದೆ.

5. ಕ್ಲಿಯರ್ ಲೆನ್ಸ್ ಹೆಡ್ ಲ್ಯಾಂಪ್
ಕ್ಲಿಯರ್ ಲೆನ್ಸ್ ಹೆಡ್ ಲ್ಯಾಂಪ್ ಗಳು ರಾತ್ರಿ ವೇಳೆಯಲ್ಲೂ ನಿಖರ ಗೋಚರತೆಯನ್ನು ಪ್ರದಾನ ಮಾಡಲಿದೆ.

06. ಪವರ್ ಫುಲ್ ಎಂಜಿನ್
ಮಹೀಂದ್ರ ಥಾರ್ ಸಿಆರ್‌ಡಿಇ ಮಾದರಿಯಲ್ಲಿ ಅತ್ಯಂತ ಶಕ್ತಿಶಾಲಿ 2498 ಸಿಸಿ, ಟರ್ಬೊ ಚಾರ್ಜ್ಡ್ ಸಿಆರ್ ಡಿಇ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಇದು 105 ಅಶ್ವಶಕ್ತಿ (247 ತಿರುಗುಬಲ) ಉತ್ಪಾದಿಸಲಿದೆ.

07. ತಂತ್ರಜ್ಞಾನ - ಮೆಕ್ಯಾನಿಕಲ್ ಲಾಕಿಂಗ್ ರಿಯರ್ ಡಿಫೆರೆನ್ಸಿಯಲ್
ಆಫ್ ರೋಡ್ ಚಾಲನೆಯಲ್ಲಿ ಮತ್ತಷ್ಟು ರೋಚಕತೆ ಸೃಷ್ಟಿ ಮಾಡಿರುವ ಮಹೀಂದ್ರ ಸಂಸ್ಥೆಯು, ಸೆಗ್ಮೆಂಟ್ ನಲ್ಲಿ ಇದೇ ಮೊದಲ ಬಾರಿಗೆ ಥಾರ್ ಸಿಆರ್‌ಡಿಇ ಮಾದರಿಯಲ್ಲಿ ಫೋರ್ ವೀಲ್ ಡ್ರೈವಿಂಗ್ ಜೊತೆಗೆ ಮೆಕ್ಯಾನಿಕಲ್ ಲಾಕಿಂಗ್ ರಿಯರ್ ಢಿಫೆರೆನ್ಸಿಯಲ್ ತಂತ್ರಜ್ಞಾನವನ್ನು (Mechanical locking rear differential) ಒದಗಿಸಿದೆ. ಇದರಂತೆ ಆಫ್ ರೋಡ್ ಸಂಚಾರದ ವೇಳೆ ನಿಮ್ಮ ಗಾಡಿಯ ಒಂದು ಚಕ್ರ ಸಿಲುಕಿ ಹಾಕಿಕೊಂಡ್ಡಲ್ಲಿ ಎಲ್ಲ ಶಕ್ತಿಯು ಆ ನಿರ್ದಿಷ್ಟ ಚಕ್ರಕ್ಕೆ ವರ್ಗಾವಣೆಯಾಗಲಿದೆ. ಈ ಮೂಲಕ ಆಪತ್ಕಾಲ ಪರಿಸ್ಥಿತಿಯಿಂದ ಹೊರಬರಬಹುದಾಗಿದೆ. ಈ ಮೂಲಕ ನಿಮ್ಮ ಆಫ್ ರೋಡ್ ಪಯಣವನ್ನು ಮತ್ತಷ್ಟು ಸುರಕ್ಷಿತವಾಗಿಸಲಿದೆ.

08. ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್
ಆಧುನಿಕ ವಾಹನಗಳಲ್ಲಿ ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್ ಗಳು ಹೆಚ್ಚು ಜನಪ್ರಿಯವೆನಿಸಿದೆ. ಇಲ್ಲೂ ಮಹೀಂದ್ರ ಯಾವುದೇ ರಾಜಿಗೂ ತಯಾರಾಗಿಲ್ಲ. ಅಲ್ಲದೆ ಗ್ರಾಹಕರ ಇಚ್ಚೆಯನುಸಾರವಾಗಿ ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್ ಸೌಲಭ್ಯವನ್ನು ನೀಡಿದೆ.

09. ಪರಿಷ್ಕೃತ ಇನ್ಸ್ರುಮೆಂಟ್ ಕ್ಲಸ್ಟರ್
ವೃತ್ತಾಕಾರಾದ ಮೂರು ಪೊಡ್ ಗಳಲ್ಲಿ ತಾಜಾತನ ಮೂಡಿಸುವ ಇನ್ಸ್ಟ್ರುಮೆಂಟ್ ಕ್ಲಸ್ಟರ್ ರಚಿಸಲಾಗಿದೆ. ಇದರ ಮಧ್ಯಭಾಗದಲ್ಲಿ ಡಿಜಿಟಲ್ ಓಡೋ ಮೀಟರ್, ಬಲಬದಿಯಲ್ಲಿ ಆರ್ ಪಿಎಂ ಮೀಟರ್ ಹಾಗೂ ಎಡಬದಿಯಲ್ಲಿ ಎಂಜಿನ್ ತಾಪಮಾನ, ಇಂಧನ ಮಟ್ಟ ಮುಂತಾದ ಅಗತ್ಯ ಮಾಹಿತಿಗಳನ್ನು ಪಡೆಯಬಹುದಾಗಿದೆ.

10. ಪರಿಷ್ಕೃತ ಎಸಿ ವೆಂಟ್ಸ್
ಮಹೀಂದ್ರ ಥಾರ್ ಎಸಿ ನಿಖರವಾಗಿ ಕೆಲಸ ಮಾಡುತ್ತಿಲ್ಲವೆಂಬ ಆಪಾದನೆಯಿದೆಯೇ? ಇದಕ್ಕೂ ಸಂಸ್ಥೆ ಪರಿಹಾರ ಕಂಡುಹುಡುಕಿದೆ. ಅಲ್ಲದೆ ಪರಿಷ್ಕೃತ ಎಸಿ ವೆಂಟ್ಸ್ ಗಳು ಆಂತರಿಕ ಹಾಗೂ ಗಾಡಿಯ ಡ್ಯಾಶ್ ಬೋರ್ಡ್ ಗೆ ಹೆಚ್ಚು ಐಷಾರಾಮಿ ಅನುಭವವನ್ನುಂಟು ಮಾಡಲಿದೆ.

11. ಹೊಸ ಸ್ಟೀರಿಂಗ್ ವೀಲ್
ಮಹೀಂದ್ರ ಥಾರ್ ಸಿಆರ್‌ಡಿಇ ಮಾದರಿಯಲ್ಲಿ ಕೊಡಲಾಗಿರುವ ನೂತನ ಸ್ಟೀರಿಂಗ್ ವೀಲ್ ಚಾಲನೆ ವೇಳೆ ಅತ್ಯುತ್ತಮ ಹ್ಯಾಂಡ್ಲಿಂಗ್ ಪ್ರದಾನ ಮಾಡಲಿದೆ.

12. ಪರಿಷ್ಕೃತ ಫ್ಲೋರ್ ಕನ್ಸೋಲ್
ಹಿಂದಿನ ಮಾದರಿಗೂ ಭಿನ್ನವಾಗಿ ಹೊಸ ಮಹೀಂದ್ರ ಥಾರ್ ಜೀಪ್ ಹೆಚ್ಚು ಅಚ್ಚುಕಟ್ಟಾಗಿದ್ದು, ಕಪ್ ಹೋಲ್ಡರ್ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗಿದೆ.

13. 2 ಡಿನ್ ಮ್ಯೂಸಿಕ್ ಪ್ಲೇಯರ್
ಅಲ್ಲದೆ ಹೊಸ ಮಹೀಂದ್ರ ಥಾರ್ ಸಿಆರ್ ಡಿಇ ಮಾದರಿಯಲ್ಲಿ 2 ಡಿನ್ ಮ್ಯೂಸಿಕ್ ಪ್ಲೇಯರ್ ಇಡಲು ಅವಕಾಶ ಕೊಡಲಾಗಿದೆ. ಇದು ಸಂಗೀತ ಪ್ರಿಯರನ್ನು ಮನರಂಜಿಸಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

14. ಅಗಲವಾದ ಸೀಟು
ದೂರ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗುವ ರೀತಿಯಲ್ಲಿ ಅಗಲವಾದ ಸೀಟುಗಳ ಆಯ್ಕೆಯನ್ನು ಕೊಡಲಾಗಿದೆ.

15. 5 ಆಕರ್ಷಕ ಬಣ್ಣಗಳು
- ಐದು ಆಕರ್ಷಕ ಬಣ್ಣಗಳಲ್ಲಿ ಹೊಸ ಮಹೀಂದ್ರ ಥಾರ್ ಸಿಆರ್‌ಡಿಇ ಲಭ್ಯವಾಗಲಿದೆ. ಅವುಗಳೆಂದರೆ,
- ರೆಡ್ ಬೀಜ್,
- ಫಿಯೆರಿ ಬ್ಲ್ಯಾಕ್,
- ಮಿಸ್ಟ್ ಸಿಲ್ವರ್,
- ಡೈಮಂಡ್ ವೈಟ್,
- ರೊಕಿ ಬೀಜ್

ಈಗ 2015 ಮಹೀಂದ್ರ ಥಾರ್ ಸಿಆರ್‌ಡಿಇ ಬಗ್ಗೆ ನಿಮ್ಮ ಅಮೂಲ್ಯ ಅನಿಸಿಕೆಗಳನ್ನು ನಮ್ಮ ಜೊತೆಗೆ ಹಂಚಿಕೊಳ್ಳಲು ಮರೆಯದಿರಿ.


Click it and Unblock the Notifications








