ನಿಮಗಿದು ಗೊತ್ತೇ? ಸದ್ಯದಲ್ಲೇ ಬರುತ್ತಿದೆ ಹೊಸ ಮಹೀಂದ್ರ ಥಾರ್
ನಿಮಗಿದು ಗೊತ್ತೇ? ಅತಿ ಶೀಘ್ರದಲ್ಲೇ ಹೊಸ ಸ್ವರೂಪದ ಮಹೀಂದ್ರ ಥಾರ್ ಬಿಡುಗಡೆಯಾಗಲಿದೆ. ಇದರಂತೆ 2015 ಜುಲೈ 22ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ.
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಮಹೀಂದ್ರ ಥಾರ್ ಅತ್ಯುತ್ತಮ ಆಫ್ ರೋಡ್ ವಾಹನವಾಗಿದೆ. ಉಪಯುಕ್ತ ವಿಭಾಗದಲ್ಲಿ ಕಾಣಿಸಿಕೊಂಡಿರುವ ಥಾರ್ ಭಾರತದ ರಸ್ತೆ ಪರಿಸ್ಥಿತಿಯಲ್ಲಿ ಯಶಸ್ಸು ಸಾಧಿಸಿತ್ತು.

ಟ್ರಕ್ಕಿಂಗ್ ಗಳಂತಹ ಸಾಹಸ ಪಯಣ ಬಯಸುವವರಿಗೆ ಇದು ಅದ್ಭುತ ಚಾಲನಾ ಅನುಭವ ನೀಡುವಲ್ಲಿ ಸಕ್ಷಮವಾಗಿದೆ. ಇದನ್ನೇ ಗುರುತಿಸಿಕೊಂಡಿರುವ ಸಂಸ್ಥೆಯು ತನ್ನ ಐಕಾನಿಕ್ ಗಾಡಿಗೆ ಹೊಸ ಆಯಾಮವನ್ನು ನೀಡಲು ಹೊರಟಿದೆ.
ಅಂದತೆಯ ವಿಚಾರಕ್ಕೆ ಬಂದಾಗ ಹೊಸ ಥಾರ್ ನಲ್ಲಿ ಗಮನಾರ್ಹ ಬದಲಾವಣೆ ಕಂಡುಬರಲಿದೆ. ಹೊಸ ಫೇಸ್ ಲಿಫ್ಟ್ ನಲ್ಲಿ ಬಂಪರ್, ಸೈಡ್ ಸ್ಟೆಪ್, ಹೊಸ ರೂಫ್ ಇತ್ಯಾದಿ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ.
ಎರಡು ಎಂಜಿನ್ ಆಯ್ಕೆ
ಪ್ರಸ್ತುತ ಮಹೀಂದ್ರ ಥಾರ್ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಸಿಆರ್ ಡಿಇ 2.5 ಲೀಟರ್ ಡೀಸೆಲ್ (105 ಅಶ್ವಶಕ್ತಿ, 247 ಎನ್ ಎಂ ತಿರುಗುಬಲ) ಫೋರ್ ವೀಲ್ ಡ್ರೈವ್ ಅಥವಾ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ. ಹಾಗೆಯೇ ಡಿಐ 2,523 ಸಿಸಿ ಡೀಸೆಲ್ ಎಂಜಿನ್ (63 ಅಶ್ವಶಕ್ತಿ, 182.5 ಎನ್ಎಂ ತಿರುಗುಬಲ) 5 ಸ್ಪೀಡ್ ಮ್ಯಾನುವಲ್ ಜೊತೆಗೆ ಟು ಅಥವಾ ಫೋರ್ ವೀಲ್ ಡ್ರೈವ್ ನಲ್ಲಿ ಲಭ್ಯವಿರಲಿದೆ.


Click it and Unblock the Notifications








