ಬೆಂಗ್ಳೂರು-ಗೋವಾ ಕಾರ್ ರೇಸ್: ವಿನ್ನರ್ ಯಾರು?
ಮಹೀಂದ್ರ ಮಾನ್ಸೂನ್ ಚಾಲೆಂಜ್ ರಾಲಿ ನಿನ್ನೆ(ಭಾನುವಾರ) ಪಣಜಿಯಲ್ಲಿ ಕೊನೆಗೊಂಡಿದ್ದು, ಒಂದು ನಿಮಿಷ 52 ಸೆಕೆಂಡ್ ಪೆನಾಲ್ಟಿಯೊಂದಿಗೆ ಕಾರ್ತಿಕ್ ಮಾರುತಿ(ಸಹ ಚಾಲಕರಾಗಿ ಎಸ್ ಶಂಕರ್ ಆನಂದ್) ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಬೆಂಗಳೂರು ಗೋವಾ(ರಾತ್ರಿ ತಂಗಿದ್ದು ಮಂಗಳೂರು ಮತ್ತು ಶಿವಮೊಗ್ಗದಲ್ಲಿ) ಕಾರು ಪ್ರಯಾಣದಲ್ಲಿ 31 ವಾಹನಗಳು ಭಾಗವಹಿಸಿದ್ದವು. ಇದರಲ್ಲಿ ದ್ವಿತೀಯ ಸ್ಥಾನವನ್ನು ಸಂಜಯ್ ತಾಕಲ್( ಸಹ ಚಾಲಕ: ಮೊಹಮ್ಮದ್ ಮುಸ್ತಫಾ) ಮತ್ತು ಮೂರನೇ ಸ್ಥಾನವನ್ನು ಅಮಿತ್ರಜಿತ್ ಘೋಸ್(ಸಹ ಚಾಲಕ: ನೀರವ್ ಮಿತ್ರ) ಪಡೆದಿದ್ದಾರೆ.
ಮಹೀಂದ್ರ ಮಾನ್ಸೂನ್ ಚಾಲೆಂಜ್ ರಾಲಿಯ ಕಾರ್ ಓಪನ್ ವಿಭಾಗದಲ್ಲಿ ಗಣೇಶ್ ಮೂರ್ತಿ( ಸಹ ಚಾಲಕ: ಟಿ ನಾಗರಾಜನ್) ಅಗ್ರಸ್ಥಾನ ಪಡೆದರೆ, ಸ್ಪೋರ್ಟ್ ಯುಟಿಲಿಟಿ ವಿಭಾಗದಲ್ಲಿ ಷಣ್ಮುಗ ಎಸ್ಎನ್(ಆದೀತ್ಯ ಆಂತೊನಿ) ಅಗ್ರಸ್ಥಾನ ಪಡೆದಿದ್ದಾರೆ.
ಈ ರಾಲಿಯಲ್ಲಿ ಮುಂಗಾರು ಹನಿಗಳು, ಕಠಿಣ ರಸ್ತೆಗಳು, ಹೆದ್ದಾರಿ ಪ್ರಯಾಣ, ಸೆಕೆಂಡರಿ ರಸ್ತೆಗಳು, ದುರ್ಗಮ ರಸ್ತೆಗಳು ಪ್ರಯಾಣದ ಪ್ರಮುಖ ಸವಾಲು ಆಗಿದ್ದವು. ಮಹೀಂದ್ರ ಮಾನ್ಸೂನ್ ಚಾಲೆಂಜ್ ರಾಲಿಯಲ್ಲಿ ಸಮಯದ ಮಹತ್ವಕ್ಕೂ ಪಾಯಿಂಟ್ ಇದ್ದವು.


Click it and Unblock the Notifications









