ಮಹೀಂದ್ರ ರೇವಾ ಎಲೆಕ್ಟ್ರಿಕ್ ಉತ್ಪಾದನೆಗೆ ಹೊಸ ಪಾಲುದಾರ
ಎಲೆಕ್ಟ್ರಿಕ್ ಕಾರು ಉತ್ಪಾದನೆ ಹೆಚ್ಚಿಸಲು ಹೊಸ ಮೈತ್ರಿಗೆ ಮಹೀಂದ್ರ ರೇವಾ ಕಂಪನಿ ಮುಂದಾಗಿದೆ. ತನ್ನ ಎಲೆಕ್ಟ್ರಿಕ್ ಕಾರುಗಳಿಗೆ ಮುಂದಿನ ಬೃಹತ್ ಮಾರುಕಟ್ಟೆಯಾದ ಆಸ್ಟ್ರೇಲಿಯಾದತ್ತ ಕಂಪನಿ ಗಮನ ಹರಿಸಿದೆ. ಅಲ್ಲಿ ಕಂಪನಿಯು ಹೊಸ ಘಟಕ ನಿರ್ಮಿಸಲಿದೆಯಂತೆ. ಈ ಕುರಿತಾದ ಎಲ್ಲಾ ಪ್ರಕ್ರಿಯೆಗಳು ಈ ವರ್ಷದ ಅಂತ್ಯಕ್ಕೆ ಕೊನೆಗೊಳ್ಳುವ ನಿರೀಕ್ಷೆಯನ್ನು ಕಂಪನಿಯ ವಕ್ತಾರರು ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದಿಸಲು ಮತ್ತು ಅಭಿವೃದ್ಧಿಪಡಿಸುವ ಸಾಧ್ಯತೆಯ ಕುರಿತು ವಿಕ್ಟ್ರೋರಿಯಾ ಸರಕಾರದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮಹೀಂದ್ರ ರೇವಾ ಪ್ರಯತ್ನಿಸುತ್ತಿದೆ.
"ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ಘಟಕ ಸ್ಥಾಪಿಸುವ ಯೋಜನೆ ನಮಗಿದೆ. ಅಲ್ಲಿನ ಮಾರುಕಟ್ಟೆ ಕುರಿತಾದ ಸಮೀಕ್ಷೆ ಇತ್ಯಾದಿಗಳನ್ನು ಈಗ ಮಾಡುತ್ತಿದ್ದೇವೆ. ಮುಂದಿನ ಆರು ತಿಂಗಳಲ್ಲಿ ಈ ಕುರಿತು ಸ್ಪಷ್ಟ ನಿರ್ಣಯ ಹೊರಬೀಳಲಿದೆ" ಎಂದು ಕಂಪನಿಯ ಕಾರ್ಯತಂತ್ರ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಚೇತನ ಮೈನಿ ಹೇಳಿದ್ದಾರೆ.
ಸದ್ಯ ಕಂಪನಿಯು ಜಾಗತಿಕವಾಗಿ ಬಾಂಗ್ಲಾದಲ್ಲಿ ಮಾತ್ರ ಉತ್ಪಾದನಾ ಘಟಕ ಹೊಂದಿದೆ. ಬಾಂಗ್ಲಾದಲ್ಲಿ ಕಂಪನಿಯು ಇನ್ನೊಂದು ಘಟಕವನ್ನು ನಿರ್ಮಿಸಲು ಸಹ ಯೋಜಿಸಿದೆ ಎಂದು ಚೇತನ್ ಹೇಳಿದ್ದಾರೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









