ಹೊಸ ಮಹೀಂದ್ರ ರೇವಾ ಎನ್ಎಕ್ಸ್ಆರ್ ಬೆಂಗ್ಳೂರಲ್ಲಿ ಪತ್ತೆ!

ಪ್ರಸಕ್ತ ವರ್ಷದ ಅಂತ್ಯದೊಳಗೆ ಮಹೀಂದ್ರ ಕಂಪನಿಯ ಬಹುನಿರೀಕ್ಷಿತ ಎಲೆಕ್ಟ್ರಿಕ್ ಕಾರು ರೇವಾ ಎನ್ಎಕ್ಸ್ಆರ್ ಆಗಮಿಸುವ ವದಂತಿಗಳಿದ್ದವು. ಇದಕ್ಕೆ ಪುಷ್ಠಿ ನೀಡುವಂತೆ ಬೆಂಗಳೂರಿನ ರಸ್ತೆಯಲ್ಲಿ ಅಂದರೆ ಮಹೀಂದ್ರ ಕಂಪನಿಯ ತವರೂರಿನಲ್ಲಿಯೇ ಹೊಸ ಮಹೀಂದ್ರ ರೇವಾ ಎನ್ಎಕ್ಸ್ಆರ್ ಟೆಸ್ಟ್ ಮಾಡುತ್ತಿರುವ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಬಿದ್ದಿದೆ.

ಚಿತ್ರ ನೋಡಿದಾಗಲೇ ಹೊಸ ರೇವಾ ಕಾರಿನ ಬಗ್ಗೆ ಕುತೂಹಲ ಕೆರಳುವುದು ಸಹಜ. ಹಳೆಯ ರೇವಾ ಕಾರಿನಷ್ಟು ಪುಟ್ಟದಾಗಿರದೇ, ನಾಲ್ಕು ಜನರಿಗೆ ಕುಳಿತುಕೊಳ್ಳಬಹುದಾದಷ್ಟು ವಿಶಾಲವಾಗಿರುವುದು ಚಿತ್ರ ನೋಡಿದಾಗ ಅರಿವಾಗುತ್ತದೆ. ಎರಡು ಡೋರಿನ ನಾಲ್ಕು ಸೀಟಿನ ನೂತನ ರೇವಾ ಎನ್ಎಕ್ಸ್ಆರ್ ದೊಡ್ಡದಾಗಿದ್ದು, ಆಕರ್ಷಕವಾಗಿ ಕಣ್ಮನ ಸೆಳೆಯುತ್ತದೆ.

ಎಬಿಎಸ್ ಪ್ಲಾಸ್ಟಿಕ್ ಬಳಕೆ ಮಾಡಿರುವ ಹಿನ್ನಲೆಯಲ್ಲಿ ನೂತನ ಕಾರಿನ ಬಾಡಿ ಸದೃಢವಾಗಿದೆ. ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ವಿಶಾಲ ಗ್ರಿಲ್ಲುಗಳು ಮತ್ತು ದೊಡ್ಡದಾದ ಟೈರುಗಳು ಈ ಕಾರಿನ ಅಂದವನ್ನು ಹೆಚ್ಚಿಸಿವೆ. ಮಹೀಂದ್ರ ರೇವಾ ಎನ್ಎಕ್ಸ್ಆರ್ ರಸ್ತೆಗಿಳಿಯುವ ವೇಳೆಗೆ ಸಾಕಷ್ಟು ಜನರನ್ನು ಇಂಪ್ರೆಸ್ ಮಾಡುವ ನಿರೀಕ್ಷೆಯಿದೆ.

ನೂತನ ರೇವಾ ಎನ್ಎಕ್ಸ್ಆರ್ ಕಾರಿನ ಎಲೆಕ್ಟ್ರಿಕ್ ಮೋಟರ್ ಗರಿಷ್ಠ 17.5 ಅಶ್ವಶಕ್ತಿ ಮತ್ತು 55 ಎನ್ಎಂ ಟಾರ್ಕ್ ಪವರ್ ನೀಡಲಿದೆ ಎಂದು ಮೂಲಗಳು ಹೇಳಿವೆ. ನೂತನ ಕಾರಿನ ಬ್ಯಾಟರಿ ಚಾರ್ಜ್, ಬ್ಯಾಟರಿ ಬಾಳಿಕೆ, ಮೈಲೇಜ್, ದಕ್ಷತೆ, ದರ ವಿಷಯವೆಲ್ಲ ಸದ್ಯಕ್ಕೆ ಲಭ್ಯವಿಲ್ಲ.

ಪ್ರಾಯಶಃ ನೂತನ ಮಹೀಂದ್ರ ರೇವಾ ಎನ್ಎಕ್ಸ್ಆರ್ ಲೀಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಸಾಧ್ಯತೆಯಿದೆ. ನಾಲ್ಕು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 120 ಕಿ.ಮೀ. ಪ್ರಯಾಣಿಸಲು ಸಾಧ್ಯವಿದೆ. ನವೆಂಬರ್ ವೇಳೆಗೆ ನೂತನ ಕಾರು ವಾಹನ ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ. ದರ ಸುಮಾರು 4 ಲಕ್ಷ ರುಪಾಯಿ ಆಸುಪಾಸಿನಲ್ಲಿರಬಹುದು.

More from DriveSpark

Article Published On: Thursday, June 28, 2012, 9:45 [IST]
English summary
Mahindra Reva NXR Spotted In Bangalore. Mahindra Reva NXR has been found testing at the outskirts of Bangalore city. The Reva NXR which may use Lithium ion battery stack as a power source claims a drive range of 120 kilo metres on a four hour full charge. Expect the electric car to hit the showrooms by November with a price tag of around Rs 4 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+