ಮಹೀಂದ್ರ ರೇವಾಕ್ಕೆ ಪ್ಲಾಟಿನಂ ರೇಟಿಂಗ್, ಹಾಗೆಂದ್ರೆನು?

ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಜನಪ್ರಿಯಗೊಂಡಿರುವ ಮಹೀಂದ್ರ ರೇವಾ ಎಲೆಕ್ಟ್ರಿಕ್ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್(ಮಹೀಂದ್ರ ರೇವಾ)ಗೆ ಭಾರತೀಯ ಹಸಿರು ನಿರ್ಮಾಣ ಆಯೋಗ(ಐಜಿಬಿಸಿ)ದಿಂದ ಮಹತ್ವದ "ಪ್ಲಾಟಿನಂ" ರೇಟಿಂಗ್ ದೊರಕಿದೆ.

ಮಹೀಂದ್ರ ರೇವಾ ಘಟಕವು ಒಟ್ಟಾರೆ ಕಾರ್ಯನಿರ್ವಹಣೆಗಾಗಿ ಪ್ಲಾಟಿನಂ ಬಿರುದು ಪಡೆದಿದೆ. ಇಂತಹ ರೇಟಿಂಗ್ ಪಡೆದ ದೇಶದ ಪ್ರಪ್ರಥಮ ವಾಹನ ಕಂಪನಿ ಮಹೀಂದ್ರ ರೇವಾ ಆಗಿದೆ. ಪರಿಸರ ಸ್ನೇಹಿ ವಾಹನಗಳ ಉತ್ಪಾದನೆ ಮೂಲಕ ಜಾಗತಿಕ ತಾಪಮಾನ ಕಡಿಮೆ ಮಾಡುವ ಕೈಂಕರ್ಯವೂ ಈ ಪ್ರಶಸ್ತಿ ಪಡೆಯಲು ಕಾರಣವಾಗಿದೆ.

"ಭವಿಷ್ಯದ ನೆಮ್ಮದಿಯ ಬದುಕಿಗೆ ಪೂರಕ ವಾತಾವರಣ ಒದಗಿಸುವ ಉದ್ದೇಶ ಮಹೀಂದ್ರ ರೇವಾಕ್ಕಿದೆ. ಪರಿಸರ ಸ್ನೇಹಿ ಘಟಕದ ಮೂಲಕ ನಾವು ವಾಹನ ಉದ್ಯಮದಲ್ಲಿ ಹೊಸ ಶಖೆ ಆರಂಭಿಸಿದ್ದೇವೆ. ನಾಳೆಯ ಶುಭ್ರತೆಗಾಗಿ ಹೆಜ್ಜೆ ಇಡಲು ಪ್ಲಾಟಿನಂ ಸರ್ಟಿಫಿಕೇಟ್ ನಮಗೆ ಹೆಚ್ಚಿನ ಉತ್ತೇಜನ ನೀಡಿದೆ" ಎಂದು ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್ ವಾಹನ ಮತ್ತು ಕೃಷಿ ಸಲಕರಣೆ ಉತ್ಪಾದನೆ ವಿಭಾಗದ ಅಧ್ಯಕ್ಷರಾದ ಪವನ್ ಗೊಯೆಂಕಾ ಹೇಳಿದ್ದಾರೆ.

"ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ನೀಡಿದ ಪ್ಲಾಟಿನಂ ಹಣೆಪಟ್ಟಿಯಿಂದ ಪರಿಸರ ಸ್ನೇಹಿ ಕುರಿತಾದ ನಮ್ಮ ಕಾಳಜಿ ಹೆಚ್ಚಿಸಿಕೊಳ್ಳಲು ನೆರವಾಗಿದೆ" ಎಂದು ಮಹೀಂದ್ರ ರೇವಾ ಎಲೆಕ್ಟ್ರಿಕ್ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ ನ ತಂತ್ರಜ್ಞಾನ ಮತ್ತು ಕಾರ್ಯತಂತ್ರ ವಿಭಾಗದ ಸ್ಥಾಪಕ ಮತ್ತು ಮುಖ್ಯಸ್ಥ ಚೇತನ್ ಮೈನಿ ಹೇಳಿದ್ದಾರೆ.

"ದೇಶವು ಪರಿಸರ ಸ್ನೇಹಿ ಉತ್ತೇಜನದಲ್ಲಿ ನಾಯಕನಾಗಲು ಇದು ಪ್ರೋತ್ಸಾಹ ನೀಡಲಿದೆ. ಇದರಿಂದಾಗಿ ದೇಶದ ಇನ್ನಷ್ಟು ವಾಹನ ಕಂಪನಿಗಳು ಪರಿಸರ ಸ್ನೇಹಿ ಹಾದಿ ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆ ನಮಗಿದೆ" ಎಂದು ಐಜಿಬಿಸಿ ಚೇರ್ಮನ್ ಸಿ ಶೇಖರ್ ರೆಡ್ಡಿ ಅಭಿಪ್ರಾಯ ಪಟ್ಟಿದ್ದಾರೆ.

More from DriveSpark

Article Published On: Friday, July 27, 2012, 16:36 [IST]
English summary
Mahindra Reva Electric Vehicles Pvt. Ltd. (Mahindra Reva), a global pioneer of electric vehicle technology, today announced that it has been awarded the ‘Platinum' Rating from the Indian Green Building Council (IGBC).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+