ಮಹೀಂದ್ರ ಆಂಡ್ ಮಹೀಂದ್ರದಿಂದ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಲಾಂಚ್

By Nagaraja

ಎಸ್‌ಯೂವಿ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾಗಿರುವ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಪ್ರಿಮಿಯಂ ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಮಹೀಂದ್ರ ಆಂಡ್ ಮಹೀಂದ್ರ ಕಂಪನಿ ಬಿಡುಗಡೆಗೊಳಿಸಿದೆ. ನೂತನ ರೆಕ್ಸ್ಟಾನ್ ಕಾರು ಆಧುನಿಕ ಮತ್ತು ಆಕರ್ಷಕ ವಿನ್ಯಾಸದಿಂದ ಕೂಡಿದ್ದು, ಟೊಯೊಟಾ ಫೋರ್ಚುನರ್, ಫೋರ್ಡ್ ಎಂಡ್ಯೂವರ್, ಹ್ಯುಂಡೈ ಸಾಂಟ್ರಾ ಫೆ ಮತ್ತು ಮಿಟ್ಸುಬಿಶಿ ಪಜೆರೊ ಸ್ಪೋರ್ಟ್ ಕಾರುಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗುವ ನಿರೀಕ್ಷೆಯಿದೆ.

ದರ ಮಾಹಿತಿ:

  • ರೆಕ್ಸ್ಟಾನ್ (ಆರ್‌ಎಕ್ಸ್ 5 ಎಂಟಿ) ದರ: 17.67 ಲಕ್ಷ ರು.
  • ರೆಕ್ಸ್ಟಾನ್ (ಆರ್‌ಎಕ್ಸ್ 7 ಎಟಿ 4ಡಬ್ಲ್ಯುಡಿ) ದರ: 19.67 ಲಕ್ಷ ರು.

ಐದು ಸಿಲಿಂಡರ್‌ನಿಂದ ನಿಯಂತ್ರಿಸಲ್ಪಡುವ ನೂತನ ರೆಕ್ಸ್ಟಾನ್, ಡಿಒಎಚ್‌ಸಿ 2.7-ಲೀಟರ್ ಟರ್ಬೊ ಡೀಸೆಲ್ ಮೋಟರ್ ಹೊಂದಿದೆ. ಆರ್‌ಎಕ್ಸ್ 5 ಹಾಗೂ ಆರ್ ಎಕ್ಸ್ 7 ಎಂಬ ಎರಡು ವೆರಿಯಂಟ್‌ಗಳಲ್ಲಿ ಕಾರು ಲಭಿಸಲಿದೆ. ಆರ್‌ಎಕ್ಸ್ 5 ಬ್ರಾಂಡ್‌ಗಳು ಫೈವ್ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗಳಲ್ಲಿ ಲಭ್ಯವಿರಲಿದೆ.

ರೆಕ್ಸ್ಟಾನ್ ಪೆಟ್ರೋಲ್ ಆವೃತ್ತಿಗೆ ಪ್ರತಿ ಲೀಟರ್‌ಗೆ 12.4 ಕಿಲೋ ಮೀಟರ್ ಹಾಗೂ ಆಟೊಮೆಟಿಕ್ ಆವೃತ್ತಿಗೆ 11.18 ಕಿಲೋ ಮೀಟರ್ ಇಂಧನ ದಕ್ಷತೆ ಲಭಿಸಲಿದೆ. ಕಾರಿನ ಒಳಭಾಗವನ್ನು ಗಮನಿಸಿದರೆ ಸನ್ ರೂಫ್, ವಾತಾವರಣ ನಿಯಂತ್ರಣ, ರಿಯರ್ ಪಾರ್ಕಿಂಗ್ ಸೆನ್ಸಾರ್, ಅಟೊಮೆಟಿಕ್ ಹೆಡ್‌ಲ್ಯಾಂಪ್, ರೈನ್ ಸೆನ್ಸಿಂಗ್ ವೈಪರ್, ಕ್ರೂಸ್ ಕಂಟ್ರೋಲ್ ಹಾಗೂ ಸ್ಟೀರಿಂಗ್ ಮೌಂಟೆಡ್ ಆಡಿಯೋ ನಿಯಂತ್ರಣಗಳನ್ನು ಹೊಂದಿದೆ.

ಸ್ಯಾಂಗ್ಯೊಂಗ್ ಮೋಟಾರ್ ಕಾರ್ಪೋರೇಷನ್ ಮೂಲತ: ಕೊರಿಯಾ ತಲಹದಿಯ ಕಾರು ತಯಾರಕ ಕಂಪೆನಿಯಾಗಿದ್ದು, ಭಾರತದಲ್ಲಿ ಮಹೀಂದ್ರ ಜತೆ ಕೈಜೋಡಿಸಿಕೊಂಡಿದೆ.

More from DriveSpark

Article Published On: Wednesday, October 17, 2012, 13:26 [IST]
English summary
Mahindra has launched its SsangYong Rexton premium SUV with a price tag of Rs 17.75 lakh (ex-showroom Mumbai) for the manual variant while the automatic costs Rs 19.67 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+