ಡ್ರೈವಿಂಗ್ ಲೈಸನ್ಸ್ ಕುರಿತು ಆಯುಕ್ತ ಶ್ಯಾಂ ಭಟ್ ಏನಂದ್ರು?

"ಜನರಿಗೆ ಡ್ರೈವಿಂಗ್ ಲೈಸನ್ಸ್ ನೀಡುವ ಯೋಜನೆ ಹೆಚ್ಚು ಪಾರದರ್ಶಕವಾಗಿರಬೇಕು. ವಾಹನ ಚಾಲನೆ ಸರಿಯಾಗಿ ತಿಳಿಯದವರಿಗೆ ಪರವಾನಿಗೆ ನೀಡಬಾರದು. ಈ ಕುರಿತು ಜಾಗೃತಿ ಮೂಡಿಸಲು ಜ್ಞಾನ ಭಾರತಿಯಲ್ಲಿ ಚಾಲನಾ ಟ್ರ್ಯಾಕ್ ನಿರ್ಮಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
ಅಪಘಾತಕ್ಕೆ ವಾಹನಗಳ ಸ್ಥಿತಿಗತಿ ಕೂಡ ಕಾರಣವಾಗುತ್ತದೆ. ತಾಂತ್ರಿಕವಾಗಿ ವಾಹನದ ಸಮರ್ಪಕತೆ ಪರಿಶೀಲಿಸಲು ನೆಲಮಂಗಲ ಸಮೀಪ ವಾಹನ ಗುಣಮಟ್ಟ ಪರಿಶೀಲನೆ ಮತ್ತು ಪ್ರಮಾಣ ಪತ್ರ ನೀಡುವ ಕಚೇರಿ ಆರಂಭಿಸುವ ಸೂಚನೆಯನ್ನು ಅವರು ನೀಡಿದ್ದಾರೆ,
"ಇದರೊಂದಿಗೆ ಧಾರವಾಡ ಮತ್ತು ಬೆಂಗಳೂರಿನಲ್ಲ ಜ್ಞಾನಭಾರತಿಯಲ್ಲಿರುವಂತಹ ತರಬೇತಿ ಸಂಸ್ಥೆ ಆರಂಭಿಸಲಾಗುವುದು. ಇಲ್ಲೇ ಪರವಾನಿಗೆ ಬಯಸುವರ ಚಾಲನಾ ಕೌಶಲ್ಯ ಪರಿಶೀಲಿಸಲಾಗುವುದು. ಇಲ್ಲೇ ಡ್ರೈವಿಂಗ್ ಲೈಸನ್ಸ್ ವಿತರಣೆ ಮಾಡಲಾಗುವುದು" ಎಂದು ಶ್ಯಾಂ ಭಟ್ ಹೇಳಿದ್ದಾರೆ.


Click it and Unblock the Notifications








