ನಿರೀಕ್ಷಿಸಿ: ಮಂಗಳೂರು ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್

ಮಂಗಳೂರು, ಆ 31: ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಮಹತ್ವಾಕಾಂಕ್ಷೆಯ 300 ಕೋಟಿ ರು. ಹೂಡಿಕೆಯ ಬಹು ಅಂತಸ್ತಿನ ವಾಹನ ನಿಲುಗಡೆ ತಾಣ ಯೋಜನೆಯು ಶೀಘ್ರದಲ್ಲಿ ಅನುಷ್ಠಾನಗೊಳ್ಳುವ ನಿರೀಕ್ಷೆಯಿದೆ.

"ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕುರಿತಾದ ಸವಿಸ್ತಾರ ಯೋಜನೆ ವರದಿ(ಡಿಡಿಆರ್) ಸಿದ್ಧಗೊಳ್ಳುತ್ತಿದೆ ಮತ್ತು ಮುಂದಿನ ಕೆಲವೇ ತಿಂಗಳಲ್ಲಿ ಯೋಜನೆಯು ಕೆಎಸ್ಆರ್ ರಸ್ತೆಯಲ್ಲಿ ಆರಂಭವಾಗಲಿದೆ" ಎಂದು ಮುಡಾ ಚೇರ್ಮನ್ ರಮೇಶ್ ಎಸ್ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಮಂಗಳೂರು ಸಿಟಿ ಕಾರ್ಪೊರೇಷನ್ ಇದಕ್ಕಾಗಿ 1.55 ಎಕರೆ ಭೂಮಿಯನ್ನು 35 ವರ್ಷದ ಭೋಗ್ಯಕ್ಕೆ ನೀಡಿದೆ. ಬಹುಅಂತಸ್ತು ವಾಹನ ನಿಲುಗಡೆ ತಾಣಕ್ಕೆ ನೀಡುವ ಭೂಮಿ ಕುರಿತಾದ ಖಾಸಗಿ ವ್ಯಾಜ್ಯಗಳನ್ನು ಶೀಘ್ರದಲ್ಲಿ ಬಗೆಹರಿಸುವ ಸೂಚನೆಯನ್ನೂ ಅವರು ನೀಡಿದ್ದಾರೆ.

ಮಂಗಳೂರಿನಲ್ಲಿ ದಿನೇ ದಿನೇ ವಾಹನಗಳು ಹೆಚ್ಚಾಗುತ್ತಿವೆ. ಸಿಕ್ಕಸಿಕ್ಕಲ್ಲಿ ಕಾರು ಪಾರ್ಕಿಂಗ್ ಮಾಡುವುದು ಇಲ್ಲಿನ ಪ್ರಮುಖ ಸಮಸ್ಯೆ. ಇದನ್ನು ಬಗೆ ಹರಿಸಲು ಹಂಪನಕಟ್ಟೆ ಸಮೀಪ ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಮಾಡಲು ಯೋಜಿಸಲಾಗಿತ್ತು.

ಆದರೆ ಹಲವು ತಕರಾರು, ವಿರೋಧಗಳಿಂದ ಈ ಯೋಜನೆ ಕಡತದಲ್ಲಿಯೇ ಉಳಿದಿತ್ತು. ಟೆಂಡರ್ ಕರೆದರೂ ಯಾರೂ ಭಾಗವಹಿಸಿರಲಿಲ್ಲ. ಇದೀಗ ಈ ಯೋಜನೆ ಶೀಘ್ರದಲ್ಲಿ ಅನುಷ್ಠಾನಗೊಳ್ಳುವ ನಿರೀಕ್ಷೆಯಿದೆ.

ಹೇಗಿರಲಿದೆ ಇದು?: ಮಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಹನ್ನೊಂದು ಅಂತಸ್ತುಗಳನ್ನು ಹೊಂದಿರಲಿದೆ. ಅದರಲ್ಲಿ ಕೊನೆಯ ಐದು ಅಂತಸ್ತುಗಳು ಕಾರುಗಳಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ಕೆಳಮಹಡಿಯಿಂದ ಲಿಫ್ಟ್ ಮೂಲಕ ಈ ಕಾರುಗಳು ಅಂತಸ್ತುಗಳಿಗೆ ಪ್ರವೇಶಸಲಿದೆ.

ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ವ್ಯವಸ್ಥೆ ಮಂಗಳೂರಿಗೆ ಅನಗತ್ಯ ಹೊರೆಯೆಂಬ ಮಾತುಗಳೂ ಕೇಳಿಬರುತ್ತಿದೆ. ಓದುಗರೆ, ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕುರಿತು ನಿಮ್ಮ ಅಭಿಪ್ರಾಯಗಳೇನು? ನಮಗೆ ತಿಳಿಸಿ.

More from DriveSpark

Article Published On: Friday, August 31, 2012, 11:04 [IST]
English summary
Mangalore multi-level car parking project inaugurate Soon. Mangalore Urban Development Authority (Muda) car parking project likely start next couple of months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+