ಮಾರುತಿ ಆಲ್ಟೊ 800: ತಾಜಾ ಚಿತ್ರಗಳು ಲೀಕ್!
ನೂತನ ಮಾರುತಿ 800 ಬದಲಿ ಆವೃತ್ತಿ ಆಲ್ಟೊ 800 ಕುರಿತು ಜನರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಮಾರುತಿ ಆಲ್ಟೊ 800 ಪ್ರಸಕ್ತ ತಿಂಗಳಲ್ಲಿಯೇ ರಸ್ತೆಗಿಳಿಯುವ ಕುರಿತು ವದಂತಿಗಳು ದಟ್ಟವಾಗಿದೆ. ಇದೀಗ ನೂತನ ಆಲ್ಟೊ ಕಾರಿನ ಚಿತ್ರಗಳು ಇಂಟರ್ ನೆಟ್ ನಲ್ಲಿ ಓಡಾಡುತ್ತಿವೆ.
ವಿಶೇಷವೆಂದರೆ ನೂತನ ಆಲ್ಟೊ 800 ಕಾರು ಪೆಟ್ರೋಲ್ ಮಾತ್ರವಲ್ಲದೇ ಸಿಎನ್ ಜಿ ಆಯ್ಕೆಯಲ್ಲೂ ದೊರಕಲಿದೆಯಂತೆ. ನಮ್ಮ ಬೊಗಸೆಗೆ ಸಿಕ್ಕ ನೂತನ ಆಲ್ಟೊ 800 ಕಾರಿನ ಒಂದಿಷ್ಟು ಚಿತ್ರಗಳನ್ನು ಇಲ್ಲಿ ನೀಡಿದ್ದೇವೆ. ಹೊಸ ಆಲ್ಟೊ 800 ಕಾರಿನ ಕುರಿತು ಸ್ಪಷ್ಟ ಚಿತ್ರಣ ದೊರಕಲು ಈ ಚಿತ್ರಗಳು ನೆರವಾಗಬಹುದು.
ನೂತನ ಕಾರಿನ ಹೆಡ್ ಲ್ಯಾಂಪ್ ಅತ್ಯಾಕರ್ಷಕವಾಗಿದೆ. ಸಿಂಗಲ್ ಕ್ರೋಮ್ ಫೀನಿಷಿಂಗ್, ಗ್ರಿಲ್ಲುಗಳು ಕಾರಿನ ಸೌಂದರ್ಯ ಹೆಚ್ಚಿಸಿದೆ. ಫಾಗ್ ಲ್ಯಾಂಪ್ ನೋಡಲು ಐ20 ಕಾರಿನ್ನು ಹೋಲುತ್ತದೆ. ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಗೇರ್ ಬಾಕ್ಸ್ ಮುಂಭಾಗದಲ್ಲಿ ಕೊಂಚ ಸ್ಥಳಾವಕಾಶವಿದ್ದು, ಮೊಬೈಲ್ ಇತ್ಯಾದಿಗಳನ್ನು ಇಡಬಹುದು.
ಮೂರು ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಸ್ಟಿಯರಿಂಗ್ ವೀಲ್ ಇದೆ. ಸುರಕ್ಷತೆಗಾಗಿ ಏರ್ ಬ್ಯಾಗ್ ಇದೆ. (ಏರ್ ಬ್ಯಾಗ್ ಇಲ್ಲದ ಆವೃತ್ತಿಯೂ ಇರಲಿದೆ). ಆಲ್ಟೊ ಸಿಎನ್ಜಿ ನೂತನ ಆಲ್ಟೊ ಕಾರು ಪೆಟ್ರೋಲ್ ಮಾತ್ರವಲ್ಲದೇ ಸಿಎನ್ ಜಿ ಆಯ್ಕೆಯಲ್ಲೂ ದೊರಕಲಿದೆ. ಪ್ರಸಕ್ತ ದುಬಾರಿ ಪೆಟ್ರೋಲ್ ದರ ಸಮಯದಲ್ಲಿ ಇದು ಅವಶ್ಯವೂ ಹೌದು.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತದೆ!

ಚಂದಕ್ಕಿಂತ ಚಂದ
ನೂತನ ಕಾರಿನ ಹೆಡ್ ಲ್ಯಾಂಪ್ ಅತ್ಯಾಕರ್ಷಕವಾಗಿದೆ. ಸಿಂಗಲ್ ಕ್ರೋಮ್ ಫೀನಿಷಿಂಗ್, ಗ್ರಿಲ್ಲುಗಳು ಕಾರಿನ ಸೌಂದರ್ಯ ಹೆಚ್ಚಿಸಿದೆ. ಮುಂದಿನ ಚಿತ್ರನೋಡಿ.

ಆಲ್ಟೊ 800 ಹೊರವಿನ್ಯಾಸ
ಇದರ ಡೇಂಜರ್ ಲೈಟ್ ನೋಡಲು ಐ20 ಕಾರಿನ ಲೈಟ್ ತರಹವಿದೆ. ಆದರೆ ಅದಕ್ಕಿಂತ ಕೊಂಚ ಎತ್ತರವಾಗಿದೆ.

ಸುರಕ್ಷತೆಗಾಗಿ
ಮೂರು ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಸ್ಟಿಯರಿಂಗ್ ವೀಲ್ ಇದೆ. ಸುರಕ್ಷತೆಗಾಗಿ ಏರ್ ಬ್ಯಾಗ್ ಇದೆ. (ಏರ್ ಬ್ಯಾಗ್ ಇಲ್ಲದ ಆವೃತ್ತಿಯೂ ಇರಲಿದೆ).

ಆಲ್ಟೊ ಸಿಎನ್ಜಿ
ನೂತನ ಆಲ್ಟೊ ಕಾರು ಪೆಟ್ರೋಲ್ ಮಾತ್ರವಲ್ಲದೇ ಸಿಎನ್ ಜಿ ಆಯ್ಕೆಯಲ್ಲೂ ದೊರಕಲಿದೆ. ಪ್ರಸಕ್ತ ದುಬಾರಿ ಪೆಟ್ರೋಲ್ ದರ ಸಮಯದಲ್ಲಿ ಇದು ಅವಶ್ಯವೂ ಹೌದು.

ಆಲ್ಟೊ 800 ಒಳಭಾಗ
ಇದು ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಗೇರ್ ಬಾಕ್ಸ್ ಮುಂಭಾಗದಲ್ಲಿ ಕೊಂಚ ಸ್ಥಳಾವಕಾಶವಿದ್ದು, ಮೊಬೈಲ್ ಇತ್ಯಾದಿಗಳನ್ನು ಇಡಬಹುದು.


Click it and Unblock the Notifications








