ಭಾರತದ ಅಕ್ಕರೆಯ ಮಾರುತಿ 800 ಕಾರಿಗೆ ಚೀನಾದಲ್ಲಿ ಪುನರ್ಜನ್ಮ

By Nagaraja

ಭಾರತೀಯ ಅಕ್ಕರೆಯ ಮಾರುತಿ 800 ಕಾರು ಚೀನಾದಲ್ಲಿ ಪುನರ್ಜನ್ಮ ಪಡೆದುಕೊಳ್ಳುತ್ತಿದೆ. ಹೀಗೊಂದು ವಾರ್ತೆ ಹಬ್ಬರಿಸುತ್ತಿದ್ದಂತೆಯೇ ವಾಹನ ಪ್ರೇಮಿಗಳಲ್ಲಿ ರೋಮಾಂಚನವನ್ನುಂಟು ಮಾಡಿದೆ. ದೇಶದ ಎರಡನೇ ಅತಿ ದೊಡ್ಡ ನಿರ್ಮಾಣ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಾರುತಿ 800 ಕಾರಿನ ನಿರ್ಮಾಣವನ್ನು 2013ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದು ದೇಶದ ಮಧ್ಯಮ ಕುಟುಂಬ ಸೇರಿದಂತೆ ಲಕ್ಷಾಂತರ ಮಂದಿಯ ಮೊದಲ ಕಾರು ಕೂಡಾ ಆಗಿದೆ.

ಸದ್ಯ ಬಂದಿರುವ ಸುದ್ದಿಯ ಪ್ರಕಾರ ಭಾರತದ ಅತಿ ಅಗ್ಗದ ಕಾರು ಚೀನಾದಲ್ಲಿ ಪುನರ್ಜನ್ಮ ಪಡೆದುಕೊಳ್ಳುತ್ತಿದೆ. ಚೀನಾ ವಾಹನ ತಯಾರಕ ಸಂಸ್ಥೆ ಝೋಟ್ಯೆ ಆಟೋಮೊಬೈಲ್ ಅಂಗ ಸಂಸ್ಥೆಯಾಗಿರುವ ಜಿಯಾಂಗ್ನನ್ ಆಟೋ ಅತಿ ನೂತನ ಜಿಯಾಂಗ್ನನ್ ಟಿಟಿ (Jiangnan TT) ಕಾರನ್ನು ನಿರ್ಮಿಸುತ್ತಿದೆ.

ಭಾರತದ ಅಕ್ಕರೆಯ ಮಾರುತಿ 800 ಕಾರಿಗೆ ಚೀನಾದಲ್ಲಿ ಪುನರ್ಜನ್ಮ

ನಾಲ್ಕು ಮಂದಿಗೆ ಆರಾಮವಾಗಿ ಸಂಚರಿಸಬಹುದಾದ ಈ ಕಾರಿನಲ್ಲೂ 0.8 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದ್ದು, 60 ಎನ್ ಎಂ ತಿರುಗುಬಲದಲ್ಲಿ 36 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಭಾರತದ ಅಕ್ಕರೆಯ ಮಾರುತಿ 800 ಕಾರಿಗೆ ಚೀನಾದಲ್ಲಿ ಪುನರ್ಜನ್ಮ

ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ನಿಂದನ ನಿಯಂತ್ರಿಸಲ್ಪಡುವ ನೂತನ ಕಾರು ಗಂಟೆಗೆ ಗರಿಷ್ಠ 120 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಭಾರತದ ಅಕ್ಕರೆಯ ಮಾರುತಿ 800 ಕಾರಿಗೆ ಚೀನಾದಲ್ಲಿ ಪುನರ್ಜನ್ಮ

ಜಿಯಾಂಗ್ನನ್ ಟಿಟಿ, 3.3 ಮೀಟರ್ ಉದ್ದ, 1.4 ಅಗಲವನ್ನಷ್ಟೇ ಹೊಂದಿದ್ದು, ವಾಹನ ದಟ್ಟಣೆಯನ್ನು ಸಮರ್ಥವಾಗಿ ಎದುರಿಸಲಿದೆ.

ಭಾರತದ ಅಕ್ಕರೆಯ ಮಾರುತಿ 800 ಕಾರಿಗೆ ಚೀನಾದಲ್ಲಿ ಪುನರ್ಜನ್ಮ

ತಯಾರಕರು ಅಭಿಪ್ರಾಯಪಡುವಂತೆ ಕೇವಲ 5.2 ಲೀಟರ್ ಇಂಧನ ತುಂಬಿಸಿದರೆ 100 ಕೀ.ಮೀ. ದೂರದ ವರೆಗೆ ಸಂಚರಿಸಬಹುದಾಗಿದೆ. ಅಂದರೆ ಪ್ರತಿ ಲೀಟರ್ ಗೆ 19.23 ಕೀ.ಮೀ.ಗಳಷ್ಟು ಮೈಲೇಜ್ ನೀಡಲಿದೆ.

ಭಾರತದ ಅಕ್ಕರೆಯ ಮಾರುತಿ 800 ಕಾರಿಗೆ ಚೀನಾದಲ್ಲಿ ಪುನರ್ಜನ್ಮ

ಹೆಚ್ಚು ಪ್ರತಿಷ್ಠೆಯನ್ನು ಬಯಸದ ಸಾಮಾನ್ಯ ಜನರಿಗೆ ನೂತನ ಕಾರು ಅತ್ಯುತ್ತಮ ಆಯ್ಕೆಯಾಗಿರಲಿದೆ ಎಂದು ಸಂಸ್ಥೆಯು ತಿಳಿಸುತ್ತದೆ.

ಭಾರತದ ಅಕ್ಕರೆಯ ಮಾರುತಿ 800 ಕಾರಿಗೆ ಚೀನಾದಲ್ಲಿ ಪುನರ್ಜನ್ಮ

1984ರಿಂದ 1988ರ ಅವಧಿಯಲ್ಲಿ ನಿರ್ಮಾಣವಾಗಿರುವ ಎರಡನೇ ತಲೆಮಾರಿನ ಸುಜುಕಿ ಆಲ್ಟೊ ತಳಹದಿಯಲ್ಲಿ ಜಿಯಾಂಗ್ನನ್ ಟಿಟಿ ನಿರ್ಮಿಸಲಾಗಿದೆ.

ಭಾರತದ ಅಕ್ಕರೆಯ ಮಾರುತಿ 800 ಕಾರಿಗೆ ಚೀನಾದಲ್ಲಿ ಪುನರ್ಜನ್ಮ

ಚೀನಾದಲ್ಲಿ ಆಲ್ಟೊ ಕಾರು ದೀರ್ಘ ಮತ್ತು ರೋಚಕ ಇತಿಹಾಸವನ್ನು ಹೊಂದಿದೆ. ಚಾಂಗನ್ ಆಟೋಮೊಬೈಲ್ ಜೊತೆಗಾರಿಕೆಯಲ್ಲಿ ಆಲ್ಟೊ ಕಾರನ್ನು ಸುಜುಕಿ ನಿರ್ಮಿಸುತ್ತಿತ್ತು. ಬಳಿಕ ಅನೇಕ ಸಂಸ್ಥೆಗಳಿಗೆ ನಿರ್ಮಾಣ ಹಕ್ಕನ್ನು ವಹಿಸಿಕೊಟ್ಟಿತ್ತು.

ಭಾರತದ ಅಕ್ಕರೆಯ ಮಾರುತಿ 800 ಕಾರಿಗೆ ಚೀನಾದಲ್ಲಿ ಪುನರ್ಜನ್ಮ

ಈಗ ಜಿಯಾಂಗ್ನನ್ ಸಹ ಆಲ್ಟೊ ಕಾರನ್ನು ನಿರ್ಮಿಸುವುದಕ್ಕಾಗಿ ಮಾನ್ಯತಾ ಹಕ್ಕನ್ನು ಪಡೆದಿದೆ. 2005ರಲ್ಲಿ ಆಲ್ಟೊ ನೈಜ ಹಕ್ಕನ್ನು ಹೊಂದಿರುವ ಜಿಯಾಂಗ್ ಬೀ ಮೆಷಿನರಿ ಪ್ಲಾಂಟ್ ಖರೀದಿಸುವ ಮೂಲಕ ಸಂಸ್ಥೆಯು ಇದನ್ನು ಗಿಟ್ಟಿಸಿಕೊಂಡಿದೆ.

ಭಾರತದ ಅಕ್ಕರೆಯ ಮಾರುತಿ 800 ಕಾರಿಗೆ ಚೀನಾದಲ್ಲಿ ಪುನರ್ಜನ್ಮ

ಬಳಿಕ 2009ರಲ್ಲಿ ನಿರ್ಮಾಣ ಸ್ಥಗಿತಗೊಂಡು 2010ರಲ್ಲಿ ಪುನರಾರಂಭಗೊಂಡಿತ್ತು. 2011ರಲ್ಲಿ ಇದಕ್ಕೆ ಟಿಟಿ ಎಂಬ ಹೆಸರನ್ನಿಡಲಾಗಿತ್ತು. ಸದ್ಯ ಹೊಸ ರೂಪವನ್ನು ಬಂದು ತಲುಪಿದೆ.

ಭಾರತದ ಅಕ್ಕರೆಯ ಮಾರುತಿ 800 ಕಾರಿಗೆ ಚೀನಾದಲ್ಲಿ ಪುನರ್ಜನ್ಮ

ಜಿಯಾಂಗ್ನನ್ ಟಿಟಿ ಮಾರುತಿ 800 ಕಾರಿನ ತದ್ರೂಪವಲ್ಲ. ಆದರೂ ಇದೇ ತಳಹದಿಯಿಂದಲೇ ಅಭಿವೃದ್ಧಿಪಡಿಸಲಾಗಿದ್ದು, ಚೀನಾದ ಸಣ್ಣ ಸಣ್ಣ ನಗರಗಳನ್ನು ಗುರಿಯಾಗಿರಿಸಲಿದೆ.

ಭಾರತದ ಅಕ್ಕರೆಯ ಮಾರುತಿ 800 ಕಾರಿಗೆ ಚೀನಾದಲ್ಲಿ ಪುನರ್ಜನ್ಮ

ಜಿಯಾಂಗ್ನನ್ ಟಿಟಿ 15,800 ಯುವಾನ್ ಅಥವಾ ಭಾರತೀಯ ರುಪಾಯಿ ಪ್ರಕಾರ 1.67 ಲಕ್ಷ ರು.ಗಳಷ್ಟು ಮಾತ್ರ ದುಬಾರಿಯೆನಿಸಲಿದೆ.

ಭಾರತದ ಅಕ್ಕರೆಯ ಮಾರುತಿ 800 ಕಾರಿಗೆ ಚೀನಾದಲ್ಲಿ ಪುನರ್ಜನ್ಮ

ಒಟ್ಟಿನಲ್ಲಿ ಚೀನಾದ ಅಗ್ಗದ ಕಾರು ಭಾರತದಷ್ಟೇ ಮೈಲುಗಲ್ಲನ್ನು ಚೀನಾದಲ್ಲೂ ಸ್ಥಾಪಿಸಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Monday, May 23, 2016, 16:43 [IST]
English summary
Maruti 800 Rebirth In China; Named As Jiangnan TT
Read more on ಮಾರುತಿ 800
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+