ಮಾರುತಿ 800 - ಗತಕಾಲದ ವೈಭವ ಮರುಕಳಿಸಿತೇ?

Written By:

ಮಾರುತಿ 800 ಭಾರತದ ವಾಹನ ಇತಿಹಾಸವನ್ನೇ ಬದಲಾಯಿಸಿದ ಕಾರು. ಅಂದಿನ ಹಿಂದೂಸ್ತಾನ್, ಪ್ರೀಮಿಯರ್ ಪದ್ಮಿನಿ ಮುಂತಾದ ಕಾರುಗಳಿಗೆ ಸೆಡ್ಡು ಹೊಡೆಯುವ ಮೂಲಕ ಕಳೆದ ಎರಡು ದಶಕಗಿಂತಲೂ ಹೆಚ್ಚು ಕಾಲ ಭಾರತೀಯ ರಸ್ತೆಯಲ್ಲಿ ರಾಜರೋಷವಾಗಿ ಸಂಚರಿಸಿತ್ತು. ಬಳಿಕ ಹೆಚ್ಚು ಆಧುನಿಕ ಸೌಲಭ್ಯಗಳ ಮಾರುತಿ ಆಲ್ಟೊ ಕಾರಿಗೆ ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿತ್ತು.

ಆರಂಭದಲ್ಲಿ ವೈದ್ಯರ, ಶಿಕ್ಷಕರ ಹಾಗೂ ಖ್ಯಾತ ಉದ್ಯಮಿಗಳ ನೆಚ್ಚಿನ ಕಾರೆನಿಸಿಕೊಂಡಿದ್ದ ಮಾರುತಿ 800 ಬರ ಬರುತ್ತಾ ಜನಸಾಮಾನ್ಯರ ನೆಚ್ಚಿನ ಕಾರೆಂಬ ಪಟ್ಟ ಕಟ್ಟಿಕೊಂಡಿತ್ತು. ಇಂದಿನ ಈ ಲೇಖನದಲ್ಲಿ ಮಾರುತಿ 800 ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಆಸಕ್ತಿದಾಯಕ ವಿಚಾರಗಳ ಬಗ್ಗೆ ಹೇಳಿಕೊಡಲಿದ್ದೇವೆ.

ಮೊದಲನೇ ತಲೆಮಾರಿನ ಕಾರು

ಮೊದಲನೇ ತಲೆಮಾರಿನ ಕಾರು

ಮೊದಲನೇ ತಲೆಮಾರಿನ ಮಾರುತಿ ಕಾರು 1979 ಸುಜುಕಿ ಫ್ರಂಟ್ ( Suzuki Fronte) ತಲಹಳದಿಯಲ್ಲಿ ನಿರ್ಮಾಣವಾಗಿತ್ತು. ಇದರಲ್ಲಿ 800 ಸಿಸಿ ಎಫ್8ಬಿ ಎಂಜಿನ್ ಬಳಕೆಯಾಗಿತ್ತು.

2ನೇ ದೀರ್ಘಾವಧಿಯ ನಿರ್ಮಾಣ ಕಾರು

2ನೇ ದೀರ್ಘಾವಧಿಯ ನಿರ್ಮಾಣ ಕಾರು

1983ರಲ್ಲಿ ರಸ್ತೆಗಿಳಿದ ಮಾರುತಿ 800, ಭಾರತೀಯ ರಸ್ತೆಗಳ ರಾಜ ಹಿಂದೂಸ್ತಾನ್ ಅಂಬಾಸಿಡರ್ ಬಳಿಕ ದೇಶದ ಎರಡನೇ ಅತಿ ದೀರ್ಘಾವಧಿಯ ನಿರ್ಮಾಣ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ನಿರ್ಮಾಣವನ್ನು 2014 ವರ್ಷಾರಂಭದಲ್ಲಿ ಸ್ಥಗಿತಗೊಳಿಸಲಾಗಿತ್ತು.

ಬಾಡಿ ಮತ್ತು ಚಾಸೀ

ಬಾಡಿ ಮತ್ತು ಚಾಸೀ

  • ವಿಭಾಗ: ಸಿಟಿ ಕಾರು
  • ದೇಹ ಶೈಲಿ: 5 ಡೋರ್ ಹ್ಯಾಚ್ ಬ್ಯಾಕ್
  • ರಚನೆ: ಫ್ರಂಟ್ ಎಂಜಿನ್, ಫ್ರಂಟ್ ವೀಲ್ ಡ್ರೈವ್
ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

  • 796 ಸಿಸಿ (0.8 ಲೀಟರ್)
  • ಗೇರ್ ಬಾಕ್ಸ್: 4 ಸ್ಪೀಡ್, 5 ಸ್ಪೀಡ್ ಮ್ಯಾನುವಲ್
ಆಯಾಮ

ಆಯಾಮ

  • ಚಂಕ್ರಾಂತರ: 2175 ಎಂಎಂ
  • ಉದ್ದ: 3335 ಎಂಎಂ
  • ಅಗಲ: 1440 ಎಂಎಂ
ಫ್ಯಾಮಿಲಿ ಕಾರು

ಫ್ಯಾಮಿಲಿ ಕಾರು

ಪರಿಪೂರ್ಣ ಫ್ಯಾಮಿಲಿ ಕಾರು ಎನಿಸಿಕೊಂಡಿದ್ದ ಮಾರುತಿ 800 ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಯಾಗಿರುವುದು ಯಶಸ್ಸಿಗೆ ಕಾರಣವಾಗಿತ್ತು. ಅಲ್ಲದೆ ನಗರಗಳಲ್ಲಿ 16 ಕೀ.ಮೀ. ಹಾಗೂ ಹೆದ್ದಾರಿಗಳಲ್ಲಿ 20 ಕೀ.ಮೀ. ಮೈಲೇಜ್ ಕಾಪಾಡಿಕೊಂಡಿದ್ದ 800 ಕಡಿಮೆ ನಿರ್ವಹಣಾ ವೆಚ್ಚವು ಮಾಲಿಕರ ಮೆಚ್ಚುಗೆಗೆ ಪಾತ್ರವಾಗಿತ್ತು.

 ಆಕರ್ಷಕ ನೋಟ

ಆಕರ್ಷಕ ನೋಟ

1980 ಹಾಗೂ 1990ರ ದಶಕದಲ್ಲಿ ಮಾರುತಿ 800 ಗ್ರಾಹಕರಲ್ಲಿ ಹೊಸತನಕ್ಕೆ ಸಾಕ್ಷಿಯಾಗಿತ್ತು. ಐದು ಬಾಗಿಲುಗಳ ಈ ಕಾರು ಎಲ್ಲ ಅರ್ಥದಲ್ಲೂ ಭಾರತೀಯ ರಸ್ತೆಗೆ ಹೆಚ್ಚು ಯೋಗ್ಯವೆನಿಸಿತ್ತು.

ಒಳಮೈ

ಒಳಮೈ

ಭಾರತದ ವಾಹನೋದ್ಯಮದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ್ದ ಮಾರುತಿ 800 ಒಳಮೈಯು ಅಂದಿನ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡಿತ್ತು. ವಾಹನ ಪ್ರೇಮಿಗಳು ಇದನ್ನು ವಿಶಾಲ ಹೃದಯದ ಕಾರೆಂದು ಬಣ್ಣಿಸಿದ್ದರು.

ನಿರ್ಮಾಣ ಸ್ಥಗಿತ

ನಿರ್ಮಾಣ ಸ್ಥಗಿತ

ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹೆಚ್ಚಿನ ಸೌಲಭ್ಯಗಳ ಕಾರುಗಳ ಆಗಮನದೊಂದಿಗೆ 2014ರಲ್ಲಿ ಮಾರುತಿ 800 ನಿರ್ಮಾಣ ಸ್ಥಗಿತಗೊಳಿಸಲು ಸಂಸ್ಥೆ ನಿರ್ಧರಿಸಿತ್ತು. ಆದರೆ ಮುಂದಿನ 10 ವರ್ಷಗಳ ವರೆಗೂ ಬಿಡಿಭಾಗಗಳು ಲಭ್ಯವಾಗಲಿದೆ ಎಂಬುದನ್ನು ಖಾತ್ರಿಪಡಿಸಿದೆ.

 ಗತಕಾಲದ ವೈಭವ ಮರುಕಳಿಸಿತೇ?

ಗತಕಾಲದ ವೈಭವ ಮರುಕಳಿಸಿತೇ?

ಭಾರತೀಯ ವಾಹನೋದ್ಯಮಕ್ಕೆ ಹೊಸ ದಿಶೆ ತೋರಿಸಿದ್ದ ಮಾರುತಿ 800 ಸದಾ ನಮ್ಮ ನಿಮ್ಮೆಲ್ಲರ ಮನದಲ್ಲಿ ಅಚ್ಚಲಿಯದೆಯೇ ಉಳಿದಿದೆ.

English summary
10 Reasons Why The Maruti 800 Was India's Big Batch Small Hatch
Story first published: Tuesday, August 4, 2015, 11:22 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark