ಬಜೆಟ್ ಸುಂಕದ ಭೀತಿ, ಮಾರುತಿ ಸುಜುಕಿ ಝೂಮ್!

ಬಜೆಟ್ ಸಮೀಪಿಸುತ್ತಿದ್ದು, ಡೀಸೆಲ್ ಕಾರುಗಳಿಗೆ ಸುಂಕ ಹೆಚ್ಚಿಸುವ ಭೀತಿಯಲ್ಲಿ ಗ್ರಾಹಕರು ಕಾರು ಖರೀದಿಗೆ ಮುಗಿಬಿದ್ದ ಹಿನ್ನಲೆಯಲ್ಲಿ ಮಾರುತಿ ಸುಜುಕಿ ಫೆಬ್ರವರಿ ಕಾರು ಮಾರಾಟ ಗಮನಾರ್ಹವಾಗಿ ಏರಿಕೆ ದಾಖಲಿಸಿದೆ.

ಮಾರ್ಚ್ ಹದಿನಾರರಂದು ಮಂಡಿಸಲಿರುವ ಬಜೆಟಿನಲ್ಲಿ ಡೀಸೆಲ್ ಕಾರಿಗೆ ಸುಂಕ ಹೆಚ್ಚಿಸುವ ಸೂಚನೆಯನ್ನು ಈ ಹಿಂದೆಯೇ ಹಣಕಾಸು ಸಚಿವರು ಸೂಚ್ಯವಾಗಿ ತಿಳಿಸಿದ್ದರು. ಸುಂಕ ಹೆಚ್ಚಳ ಮೊತ್ತವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವೆಂದು ಕಾರು ಕಂಪನಿಗಳು ಹೇಳಿದ್ದವು.

ಮುಖ್ಯವಾಗಿ ಡೀಸೆಲ್ ಕಾರುಗಳ ದರ ಹೆಚ್ಚಾಗುವ ಭೀತಿಯಲ್ಲಿ ಫೆಬ್ರವರಿ ತಿಂಗಳಲ್ಲಿ ಕಾರು ಮಾರಾಟ ಹೆಚ್ಚಾಗಿದೆ. ಕಳೆದ ತಿಂಗಳು ಮಾರುತಿ ಸುಜುಕಿ ಸುಮಾರು 1,07,653 ಯುನಿಟ್ ಕಾರು ಮಾರಾಟ ಮಾಡಿದ್ದು, ಕಳೆದ ವರ್ಷದ ಫೆಬ್ರವರಿ ಮಾರಾಟಕ್ಕಿಂತ ಶೇಕಡ 6.54ರಷ್ಟು ಹೆಚ್ಚಾಗಿದೆ. ಸ್ವಿಫ್ಟ್ ಮತ್ತು ಡಿಜೈರ್ ಮಾರಾಟ ಕ್ರಮವಾಗಿ ಶೇಕಡ 31 ಮತ್ತು ಶೇಕಡ 58ರಷ್ಟು ಏರಿಕೆ ಕಂಡಿದೆ.

ನೂತನ ಸ್ವಿಫ್ಟ್ ಮತ್ತು ಡಿಜೈರ್ ನೆರವಿನಿಂದ ಮಾರುತಿ ಸುಜುಕಿ ಕಂಪನಿಯು ಗಮನಾರ್ಹ ಸಂಖ್ಯೆಯಲ್ಲಿ ಮಾರಾಟ ಹೆಚ್ಚಿಸಿಕೊಂಡಿದೆ. ಡೀಸೆಲ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿರುವುದು ಕೂಡ ಮಾರಾಟ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದು ವಾಹನ ವಿಶ್ಲೇಷಕರೊಬ್ಬರು ಹೇಳುತ್ತಾರೆ.

ಮಾರುತಿ ಸುಜುಕಿ ಕಂಪನಿಯು ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ 1,01,543 ಯುನಿಟ್ ಕಾರು ಮಾರಾಟ ಮಾಡಿತ್ತು. ಮಾರುತಿ ಸುಜುಕಿ ಕಂಪನಿಯ ಕಾರು ರಫ್ತು 11,296 ಯುನಿಟ್ ಗೆ ತಲುಪಿದ್ದು, ಕಳೆದ ವರ್ಷದ ಫೆಬ್ರವರಿ ತಿಂಗಳ 10,102 ಯುನಿಟ್ ರಫ್ತಿಗೆ ಹೋಲಿಸಿದರೆ ಗಮನಾರ್ಹ ಏರಿಕೆ ಕಂಡಿದೆ.

ಇದೇ ತಿಂಗಳಲ್ಲಿ ಮಾರುತಿ ರಿಟ್ಜ್, ಸ್ವಿಫ್ಟ್ ಮತ್ತು ಎಸ್ಟಿಲೊ ಆವೃತ್ತಿಗಳ ಮಾರಾಟ 27,899 ಯುನಿಟ್ ತಲುಪಿ ಶೇಕಡ 31,06ರಷ್ಟು ಏರಿಕೆ ಕಂಡಿದೆ. ಕಾಂಪ್ಯಾಕ್ಟ್ ಸೆಡಾನ್ ಡಿಜೈರ್ ಮಾರಾಟ 15,068 ಯುನಿಟ್ ಗೆ ತಲುಪಿ ಶೇಕಡ 58,78ರಷ್ಟು ಏರಿಕೆ ಕಂಡಿದೆ. ಆದರೆ ಮಾರುತಿ ಎಸ್ಎಕ್ಸ್4 ಮಾರಾಟ ಶೇಕಡ 42.47ರಷ್ಟು ಇಳಿಕೆ ದಾಖಲಿಸಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Friday, March 2, 2012, 11:06 [IST]
English summary
Maruti Suzuki India February 2012 Sales reached 1,01,543 units and registering 6.54 per cent of sales growth. Budget duty hike fear also helped to increase Feb Sales.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+