ಕಳೆದ ವರ್ಷದ ದರಕ್ಕೆ ಮಾರುತಿ, ಹ್ಯುಂಡೈ ಕಾರು ಖರೀದಿಸಿ!!

Maruti Suzuki, Hyundai skip price hike Decision
ಪ್ರಸಕ್ತ ತಿಂಗಳು ಕಾರು ದರ ಹೆಚ್ಚಿಸುವ ನಿರ್ಧಾರದಿಂದ ಮಾರುತಿ ಸುಜುಕಿ, ಹ್ಯುಂಡೈ ಮೋಟರ್ ಮತ್ತು ಫೋಕ್ಸ್ ವ್ಯಾಗನ್ ಕಂಪನಿಗಳು ಹಿಂದೆ ಸರಿದಿವೆ. ಇದರಿಂದ ಗ್ರಾಹಕರು ಕಳೆದ ವರ್ಷದ ದರದಲ್ಲಿಯೇ ಈ ಬ್ರಾಂಡುಗಳ ಕಾರು ಖರೀದಿಸಬಹುದಾಗಿದೆ.

ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಅತ್ಯಧಿಕ ಅಂದರೆ 2.18 ಲಕ್ಷ ವಾಹನಗಳು ಮಾರಾಟವಾಗಿದ್ದವು. ಡಿಸೆಂಬರ್ ತಿಂಗಳಲ್ಲಿ 1.59 ಲಕ್ಷ ಕಾರುಗಳು ಮಾರಾಟವಾಗಿದ್ದವು. ಕಳೆದ ವರ್ಷದ ಕೊನೆಯ ನಾಲ್ಕು ತಿಂಗಳಲ್ಲಿ ಹತ್ತು ಹಲವು ಕೊಡುಗೆಗಳು, ಡಿಸ್ಕೌಂಟುಗಳನ್ನು ಕಂಪನಿ ನೀಡಿದರೂ ಕಾರು ಮಾರಾಟ ಏರಿಕೆ ಕಂಡಿರಲಿಲ್ಲ.

ಬಿಡಿಭಾಗಗಳ ವೆಚ್ಚ ಹೆಚ್ಚಳ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮುಂತಾದ ಕಾರಣಗಳಿಂದ ಕಂಪನಿಗಳು ಕಾರುಗಳ ದರವನ್ನು ಹೆಚ್ಚಿಸಲು ಮುಂದಾಗಿದ್ದರು. ಜನವರಿ ತಿಂಗಳಿನಿಂದ ಕಾರುಗಳ ದರವನ್ನು ಹೆಚ್ಚಿಸುವುದಾಗಿ ಕಾರು ಕಂಪನಿಗಳು ಪ್ರಕಟಿಸಿದ್ದವು.

ಜನವರಿಯಲ್ಲಿ ಕಾರು ದರ ಹೆಚ್ಚಿಸುವುದಾಗಿ ಪ್ರಕಟಿಸಿದರೂ ಯಾವ ಕಂಪನಿಗಳು ಕೂಡ ದರ ಹೆಚ್ಚಳಕ್ಕೆ ಮುಂದಾಗಿಲ್ಲ. ಆದರೆ ಕಂಪನಿಗಳು ಶೀಘ್ರದಲ್ಲಿ ದರ ಹೆಚ್ಚಿಸುವ ಸೂಚನೆಯಿದೆ. "ನಾವು ಕಾರು ದರವನ್ನು ಶೀಘ್ರದಲ್ಲಿ ಹೆಚ್ಚಿಸುತ್ತೇವೆ. ಆದರೆ ಅಂತಿಮ ತೀರ್ಮಾಣ ಇನ್ನೂ ತೆಗೆದುಕೊಂಡಿಲ್ಲ" ಎಂದು ಮಾರುತಿ ಸುಜುಕಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ಮುಂದಿನ ಕೆಲವೇ ದಿನಗಳಲ್ಲಿ ಕಾರು ದರ ಹೆಚ್ಚಳ ನಿರ್ಧಾರ ಪ್ರಕಟಿಸಲಿದ್ದೇವೆ" ಎಂದು ಟೊಯೊಟಾ ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೀಗೆ ಹಲವು ಕಾರು ಕಂಪನಿಗಳು ದರ ಹೆಚ್ಚಳ ಮಾಡಲು ಮುಂದಾಗಿವೆ. ಅದಕ್ಕಿಂತ ಮೊದಲು ಕಾರು ಖರೀದಿಸಿದರೆ ಕೊಂಚ ದುಡ್ಡು ಉಳಿಸಬಹುದು.

More from DriveSpark

Article Published On: Monday, January 16, 2012, 16:00 [IST]
English summary
Three major carmakers, Maruti Suzuki, Hyundai Motors and Volkswagen have decided not to increase the prices of their cars despite increase in manufacturing costs. This decision has been taken considering the decreased demand for cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+