ದೇಶಿ ರಸ್ತೆಗೆ ಮಾರುತಿ ಸುಜುಕಿ ಸ್ವಿಫ್ಟ್ ಸ್ಪೋರ್ಟ್
ನೂತನ ಸ್ವಿಫ್ಟ್ ಸ್ಪೋರ್ಟ್ ಕಾರು ಹಳೆಯ ಸ್ವಿಫ್ಟ್ ಆವೃತ್ತಿಗಳಿಗಿಂತ ಸದೃಢ ಮತ್ತು ಆಕರ್ಷಕವಾಗಿರಲಿದೆಯಂತೆ. ಇದರೊಂದಿಗೆ ಇದರ ಎಂಜಿನ್ ಶಕ್ತಿಯೂ ಹೆಚ್ಚಾಗುವ ನಿರೀಕ್ಷೆಯಿದೆ. ಅಂದರೆ ಹೊಸ ಸ್ವಿಫ್ಟ್ ಪ್ರಾಯಶಃ 1.6 ಲೀಟರಿನ ಎಂಜಿನ್ ಹೊಂದಿರಲಿದ್ದು, 134 ಅಶ್ವಶಕ್ತಿ ಮತ್ತು 160 ಎನ್ಎಂ ಟಾರ್ಕ್ ಪವರ್ ನೀಡಲಿದೆ.
ನೂತನ ಸ್ವಿಫ್ಟ್ ಕಾರಿಗೆ ಯಾವ ಎಂಜಿನ್ ಬಳಸಲಾಗುವುದು ಎನ್ನುವ ಕುರಿತು ಇನ್ನೂ ಸ್ಪಷ್ಟತೆಯಿಲ್ಲ. ಮಾರುತಿ ಸುಜುಕಿ ಎಸ್ಎಕ್ಸ್4 ಕಾರಿನ 1.6 ಲೀಟರಿನ ಎಂ16 ಎಂಜಿನ್ ಅಥವಾ ಎರ್ಟಿಗಾ ಕಾರಿನ 1.4 ಲೀಟರ್ ಕೆ14 ಎಂಜಿನ್ ಅಳವಡಿಸುವ ಸಾಧ್ಯತೆಯೂ ಇದೆ.
ಈಗಾಗಲೇ ಆಸ್ಟ್ರೇಲಿಯಾದಲ್ಲಿ ಮಾರುತಿ ಸುಜುಕಿ ಸ್ಪೋರ್ಟ್ ಕಾರ್ ಮಾರಾಟವಾಗುತ್ತಿದೆ. ಇದು 5 ಡೋರಿನ ರೈಟ್ ಹ್ಯಾಂಡ್ ಡ್ರೈವ್ ಆವೃತ್ತಿಯಾಗಿದೆ. ಆಸ್ಟ್ರೇಲಿಯಾದಲ್ಲಿನ ದರವನ್ನು ಭಾರತದ ರುಪಾಯಿಗೆ ಕನ್ವರ್ಟ್ ಮಾಡಿದರೆ ಸ್ವಿಫ್ಟ್ ಸ್ಪೋರ್ಟ್ ದರ ಸುಮಾರು 13.66 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ.
ಎಲ್ಲಾದರೂ ನೂತನ ಸ್ವಿಫ್ಟ್ ಸ್ಪೋರ್ಟ್ ಕಾರು ಆಗಮಿಸಿದರೆ ಫೋಕ್ಸ್‌ವ್ಯಾಗನ್ ಪೊಲಿ ಮತ್ತು ಸ್ಕೋಡಾ ಫಾಬಿಯಾ ಕಾರುಗಳಿಗೆ ಪ್ರಬಲ ಪೈಪೋಟಿಯಾಗಲಿದೆ.


Click it and Unblock the Notifications









