ಕರ್ನಾಟಕದಲ್ಲಿ ಹೊಸ ಎ-ಸ್ಟಾರ್ ದರವೆಷ್ಟು ಸಾರ್?

ಬೆಂಗಳೂರು ಎಕ್ಸ್ ಶೋರೂಂ ದರ
ಮಾರುತಿ ಎ-ಸ್ಟಾರ್ ಆಟೋಮ್ಯಾಟಿಕ್: 4,54,289 ಲಕ್ಷ ರು.
ಮಾರುತಿ ಎ-ಸ್ಟಾರ್ ಎಲ್ ಎಕ್ಸ್ಐ: 3,74,908 ಲಕ್ಷ ರು.
ಮಾರುತಿ ಎ-ಸ್ಟಾರ್ ವಿಎಕ್ಸ್ಐ: 3,74,908 ಲಕ್ಷ ರು.
ಮಾರುತಿ ಎ-ಸ್ಟಾರ್ ಝಡ್ಎಕ್ಸ್ಐ: 4,40,273 ಲಕ್ಷ ರುಪಾಯಿ.
ಬೆಳಗಾವಿ, ಬಳ್ಳಾರಿ, ಚಿಕ್ಕೋಡಿ, ಚಿಕ್ಕಮಗಳೂರು, ಮಡಿಕೇರಿ, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರುತಿ ಸುಜುಕಿ ಎಸ್ಟಾರ್ ದರ ಈ ಕೆಳಗಿನಂತಿದೆ. ಕೆಲವು ಜಿಲ್ಲೆಗಳಲ್ಲಿ ದರ ಕೆಲವು ನೂರು ರು. ವ್ಯತ್ಯಾಸವಿರಬಹುದು.
ಎ-ಸ್ಟಾರ್ ಆಟೋಮ್ಯಾಟಿಕ್: 4,50,296 ಲಕ್ಷ ರು.
ಎ-ಸ್ಟಾರ್ ಎಲ್ ಎಕ್ಸ್ಐ: 3,70,916 ಲಕ್ಷ ರು.
ಎ-ಸ್ಟಾರ್ ವಿಎಕ್ಸ್ಐ: 3,99,722 ಲಕ್ಷ ರು.
ಎ-ಸ್ಟಾರ್ ಝಡ್ಎಕ್ಸ್ಐ: 4,36,281 ಲಕ್ಷ ರು.
ಈ ಹಿಂದೆ ಕಂಪನಿಯು ಎ-ಸ್ಟಾರ್ ಕಾರಿನ ಆಟೋಮ್ಯಾಟಿಕ್ ಆವೃತ್ತಿಯನ್ನು ಪರಿಚಯಿಸಿತ್ತು. ಈ ಮಾಡೆಲಿನ ಕಾರು ಅತ್ಯಧಿಕವಾಗಿ ಮಾರಾಟವಾಗುತ್ತಿದೆ. ಕಂಪನಿಯು ಒಟ್ಟು 3.81 ಲಕ್ಷ ಎ-ಸ್ಟಾರ್ ಕಾರುಗಳನ್ನು ಮಾರಾಟ ಮಾಡಿದೆ. ಇದು ಕಂಪನಿಯು ಹೆಚ್ಚು ರಫ್ತು ಮಾಡುವ ಕಾರು ಕೂಡ ಹೌದು.
ಕಂಪನಿಯು ಸುಮಾರು 2.81 ಲಕ್ಷ ಯುನಿಟ್ ನಷ್ಟು ಕಾರುಗಳನ್ನು 130 ದೇಶಗಳಿಗೆ ರಫ್ತು ಮಾಡಿದೆ. ನೆದರ್ಲಾಂಡ್, ಇಟಲಿ, ಇಂಗ್ಲೆಂಡ್, ಸ್ಪೈನ್ ಮತ್ತು ಜರ್ಮನಿ ಸೇರಿದಂತೆ ಪ್ರಮುಖ ಯುರೋಪ್ ರಾಷ್ಟಗಳಿಗೆ ಮಾರುತಿ ಸುಜುಕಿ ಕಂಪನಿಯ ಕಾರುಗಳು ರಫ್ತಾಗುತ್ತಿವೆ.


Click it and Unblock the Notifications








