ನೂತನ ಮಾರುತಿ ಎ-ಸ್ಟಾರ್, ದರ 3.67 ಲಕ್ಷ ರು.ನಿಂದ ಆರಂಭ

ನೂತನ ಎ-ಸ್ಟಾರ್ ಆವೃತ್ತಿಯ ರಿಟೇಲ್ ಮಾರಾಟ ಜನವರಿ 27ರಂದು ಆರಂಭವಾಗಲಿದೆ. ಹಳೆಯ ಎ-ಸ್ಟಾರ್ ಕಾರಿಗಿಂತ ನೂತನ ಆವೃತ್ತಿ ಸುಮಾರು ಒಂದು ಸಾವಿರ ರುಪಾಯಿಯಷ್ಟು ದುಬಾರಿಯಾಗಿರಲಿದೆ.
"ಗ್ರಾಹಕರು ನೀಡಿದ ಫೀಡ್ ಬ್ಯಾಕ್ ಗಮನದಲ್ಲಿಟ್ಟುಕೊಂಡು ಕಾರಿನ ಒಟ್ಟಾರೆ ಲುಕ್, ಆರಾಮದಾಯಕತೆ ಹೆಚ್ಚಿಸಿದ್ದೇವೆ" ಎಂದು ಮಾರುತಿ ಸುಜುಕಿ ಇಂಡಿಯಾ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಶಶಾಂಕ್ ಶ್ರೀವಾಸ್ತವ್ ಹೇಳಿದ್ದಾರೆ.
ಪರಿಷ್ಕೃತ ಎಸ್ಟಾರ್ ಕಾರಿನಲ್ಲಿ ಕಂಪನಿಯು ಕಾರಿನ ಇಂಟಿರಿಯರ್ ವಿನ್ಯಾಸ ಪರಿಷ್ಕರಿಸಿದೆ. ಉಳಿದಂತೆ ಕೊಂಚ ಬಣ್ಣಗಳಲ್ಲಿ ಬದಲಾವಣೆ ಮಾಡಲಾಗಿದೆ. ಇದರೊಂದಿಗೆ ಕಂಪನಿಯು ಎ-ಸ್ಟಾರ್ ಕಾರಿನ ಟಾಪ್ ಎಂಡ್ ಆವೃತ್ತಿ ಝಡ್ಎಕ್ಸ್ಐ ಕೂಡ ಪರಿಚಯಿಸಿದೆ. ಹೊಸ ಕಾರಿನ ಕರ್ನಾಟಕ ದರ ಮಾಹಿತಿ ಮುಂದಿನ ಪುಟದಲ್ಲಿದೆ.


Click it and Unblock the Notifications








