ಆಲ್ಟೊ ಹಿಂದಿಕ್ಕಿದ ಮಾರುತಿ ಸುಜುಕಿ ಸ್ವಿಫ್ಟ್
ಡೀಸೆಲ್ ಸ್ವಿಫ್ಟಿಗೆ ಅತ್ಯಧಿಕ ಬೇಡಿಕೆಯಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಇದೀಗ ಸ್ವಿಫ್ಟ್ ಕಾರಿನ ವೇಟಿಂಗ್ ಪಿರೆಯಿಡ್ ಕೂಡ ಕಡಿಮೆಯಾಗಿದೆ. ಅಂದ್ರೆ ಈ ಹಿಂದೆ ಇದ್ದ 7-8 ತಿಂಗಳ ವೇಟಿಂಗ್ ಪಿರೆಯಿಡ್ ಈಗ 4-5 ತಿಂಗಳಿಗೆ ತಲುಪಿದೆ. ಸಹಜವಾಗಿಯೇ ಸ್ವಿಫ್ಟ್ ಮಾರಾಟ ಹೆಚ್ಚಾಗಿದೆ.
ಮಾರುತಿ ಸುಜುಕಿ ಆಲ್ಟೊ ರಸ್ತೆಗಿಳಿದು ದಶಕ ಕಳೆದಿದೆ. ಆಲ್ಟೊ ಹೊಸ ಪರಿಷ್ಕೃತ ಆವೃತ್ತಿ ತರಲು ಇದು ಸೂಕ್ತ ಸಮಯ.
ಆಲ್ಟೊ ಕೆ10 ಕಾರು 998ಸಿಸಿಯ ಕೆ10 ಎಂಜಿನ್ ಹೊಂದಿದೆ. ಇದು 68 ಪಿಎಸ್ ಪವರ್ ಮತ್ತು 90ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದು 5 ಸ್ಪೀಡಿನ ಮ್ಯಾನುಯಲ್ ಟ್ರಾನ್ಸ್ ಮಿಷನ್ ಹೊಂದಿದೆ. ಕೇವಲ 13.3 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆಯಬಹುದು.
ನೂತನ ಸ್ವಿಫ್ಟ್ ಪೆಟ್ರೊಲ್ ಮತ್ತು ಡೀಸಲ್ ಎಂಜಿನ್ ಗಳಲ್ಲಿ ದೊರಕುತ್ತಿದೆ. ಇದು ಕೆ-ಸೀರಿಸ್ 1.2 ಲೀಟರ್ ಪೆಟ್ರೊಲ್ ಮತ್ತು 1.3 ಲೀಟರ್ ಡಿಡಿಐಎಸ್ ಡೀಸಲ್ ಎಂಜಿನ್ ಹೊಂದಿದೆ. ಇದರ ದರ ಸುಮಾರು 4.22 ಲಕ್ಷ ರು.ನಿಂದ 6.38 ಲಕ್ಷ ರು.ವರೆಗಿದೆ.


Click it and Unblock the Notifications









