ಚರ್ಚೆ: ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಬ್ರೇಕ್ ಸಮಸ್ಯೆ

ದೇಶದಲ್ಲಿ ಅತ್ಯಧಿಕ ಮಾರಾಟದ ಕಾರುಗಳಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಪ್ರಮುಖ. ಆಕರ್ಷಕ ವಿನ್ಯಾಸ, ಅನನ್ಯ ಹ್ಯಾಂಡ್ಲಿಂಗ್ ಮತ್ತು ಅತ್ಯುತ್ತಮ ಇಂಧನ ಕ್ಷಮತೆ ವಿಷಯದಲ್ಲಿ ಇದು ಕಾರು ಮಾಲೀಕರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಇದೀಗ ಸ್ವಿಫ್ಟ್ ಕಾರಿನ ಕುರಿತು ಕೊಂಚ ಅಪಸ್ವರದ ಮಾತುಗಳು ಕೇಳಿಬರುತ್ತಿವೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಬ್ರೇಕ್ ವಿಷಯದ ಕುರಿತು ಕೆಲವು ಕಾರು ಮಾಲೀಕರು ದೂರುತ್ತಿದ್ದಾರೆ. ಪ್ರಮುಖವಾಗಿ ನಿಧಾನವಾಗಿ ಕಾರು ಚಲಾಯಿಸುವಾಗ ಸ್ವಿಫ್ಟ್ ಬ್ರೇಕ್ ಸರಿಯಾಗಿ ಹಿಡಿಯುವುದಿಲ್ಲವಂತೆ. ವೇಗ ಎಷ್ಟೇ ಇರಲಿ, ಬ್ರೇಕ್ ಫೈಲ್ಯೂರ್ ಸುದ್ದಿ ಯಾರಿಗೂ ಇಷ್ಟವಾಗದು. (ಓದಿ: ಬ್ರೇಕ್ ಫೈಲ್ಯೂರ್ ಆದ್ರೆ ಏನ್ಮಾಡ್ಬೆಕು?)

ಸಂಚಾರ ದಟ್ಟಣೆಯಲ್ಲಿ ನಿಧಾನವಾಗಿ ಚಲಾಯಿಸಬೇಕಾದ ಸಂದರ್ಭದಲ್ಲಿ ಸ್ವಿಫ್ಟ್ ಬ್ರೇಕ್ ಸರಿಯಾಗಿ ಕೆಲಸ ಮಾಡದೆ ಇರುವುದು ಹೆಚ್ಚಿನ ಜನರಿಗೆ ಅನುಭವವಾಗಿದೆ. ಅಂದ್ರೆ ಗಂಟೆಗೆ ಸುಮಾರು 10 ಕಿ.ಮೀ. ವೇಗದಲ್ಲಿ ಚಲಾಯಿಸುವಾಗ ಬ್ರೇಕ್ ಪೆಡಲ್ ತುಂಬಾ ಹಾರ್ಡ್ ಆಗಿ ವರ್ತಿಸುತ್ತದೆ ಎಂದು ಕೆಲವು ಸ್ವಿಫ್ಟ್ ಮಾಲೀಕರು ದೂರಿದ್ದಾರೆ.

ಇಷ್ಟು ವೇಗದಲ್ಲಿ ಬ್ರೇಕ್ ಹಿಡಿಯದೇ ಇದ್ದರೆ ಅಷ್ಟೇನೂ ಅಪಾಯಕಾರಿಯಲ್ಲ. ಹಾಗಂತ ಇದನ್ನು ಗಂಭೀರವಾಗಿ ಪರಿಗಣಿಸದೆ ಇದ್ದರೆ ಕಷ್ಟ. ಈ ಸಮಸ್ಯೆ ಕುರಿತು ಆನ್ ಲೈನ್ ಪೋರಮ್ ಗಳಲ್ಲಿ ಕೆಲವು ಸ್ವಿಫ್ಟ್ ಮಾಲೀಕರು ಚರ್ಚೆ ಆರಂಭಿಸಿದ್ದಾರೆ. ಕೆಲವರು ಮಾರುತಿ ಸರ್ವಿಸ್ ಸ್ಟೇಷನಿಗೆ ಹೋಗಿ ಈ ಸಮಸ್ಯೆ ಸರಿಪಡಿಸಿಕೊಂಡಿದ್ದಾರೆ.

ಸ್ಲೋ ಮೂವಿಂಗ್ ಟ್ರಾಫಿಕ್ನಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಅರ್ಧ ಕ್ಲಚ್ ಹಿಡಿದು ಡ್ರೈವಿಂಗ್ ಮಾಡುವುದನ್ನು ಕಡಿಮೆ ಮಾಡಿ ಎಂದು ಕೆಲವರು ಸಲಹೆ ನೀಡುತ್ತಾರೆ. ಆದರೆ ಟ್ರಾಫಿಕ್ನಲ್ಲಿ ಅರ್ಧ ಕ್ಲಚ್ ಹಿಡಿದು ಡ್ರೈವ್ ಮಾಡುವುದು ಅನಿವಾರ್ಯ.

ಎಲ್ಲಾದರೂ ಇದೇ ಸಮಸ್ಯೆ ಯುರೋಪ್ ಅಥವಾ ಅಮೆರಿಕದಲ್ಲಿದ್ದರೆ ಎಲ್ಲಾ ಕಾರುಗಳನ್ನೂ ರಿಕಾಲ್ ಅಥವಾ ಹಿಂಪಡೆತ ಮಾಡಬೇಕಿತ್ತು. ಆದರೆ ಭಾರತದಲ್ಲಿ ಇನ್ನೂ ರಿಕಾಲ್ ಪಾಲಿಸಿ ಆರಂಭವಾಗಿಲ್ಲ. ಆದ್ರೆ ಶೀಘ್ರದಲ್ಲಿ ರಿಕಾಲ್ ನೀತಿಯೊಂದು ದೇಶಕ್ಕೆ ಆಗಮಿಸುವ ಸೂಚನೆಯಿದೆ.

ಬ್ರೇಕ್ ಫೈಲ್ಯೂರ್ ವಿಷಯವನ್ನು ಮಾರುತಿ ಸುಜುಕಿ ದೊಡ್ಡ ಸುದ್ದಿಯಾಗಲೂ ಇನ್ನೂ ಬಿಟ್ಟಿಲ್ಲ. ಕಂಪನಿ ಇಮೇಜಿಗೆ ದಕ್ಕೆಯಾಗಬಹುದು ಎಂಬ ಭೀತಿ ಇದಕ್ಕೆ ಕಾರಣವಾಗಿರಬಹುದು. ನಿಮ್ಮ ಸ್ವಿಫ್ಟ್ ಕಾರಿನಲ್ಲೂ ಇಂತಹ ಸಮಸ್ಯೆಯಿದ್ದರೆ ಹತ್ತಿರದ ಮಾರುತಿ ಸರ್ವಿಸ್ ಸ್ಟೇಷನಿಗೆ ಹೋಗುವುದು ಒಳ್ಳೆಯದು.(ಬ್ರೇಕ್ ಫೈಲ್ ಟಿಪ್ಸ್)

More from DriveSpark

Article Published On: Wednesday, July 25, 2012, 10:09 [IST]
English summary
The Maruti Suzuki Swift has been one of India's best selling cars. It has been appreciated by owners for its sporty look, neat handling and good fuel economy. However, the new Maruti Suzuki Swift is not devoid of issues. Some owners have reported that the Swift's brakes do not work well particularly while driving at low speeds. Brake failure at whatever speed is not a welcome news.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+