ಪರಿಷ್ಕೃತ ಮಾರುತಿ ಸುಜುಕಿ ಎಸ್ಎಕ್ಸ್4ಗೆ ಸ್ವಾಗತ
ಸದ್ಯ ಮಾರುತಿ ಸುಜುಕಿ ಕಂಪನಿಯು ದೇಶಕ್ಕೆ ಗ್ರಾಂಡ್ ವಿಟಾರಾ ಎಸ್ ಯುವಿಯನ್ನು ಸಿಬಿಯು ಹಾದಿ ಮೂಲಕ ದೇಶಕ್ಕೆ ಆಮದು ಮಾಡಿಕೊಳ್ಳುತ್ತಿದೆ. ಕಂಪನಿಯು ಸಿಬಿಯು(ಸಂಪೂರ್ಣವಾಗಿ ಉತ್ಪಾದಿಸಿ ಆಮದು) ಹಾದಿ ಮೂಲಕ ಪರಿಚಯಿಸಿದರೆ ಇದರ ದರ ಕಡಿಮೆಯಾಗಬಹುದು. ನೂತನ ಎಸ್ಎಕ್ಸ್4 ಕಾರನ್ನು ಕಂಪನಿಯು ದೇಶಕ್ಕೆ ಸಿಕೆಡಿ ಹಾದಿ ಮೂಲಕ ತರುವ ನಿರೀಕ್ಷೆಯಿದೆ.
ಎಸ್ಎಕ್ಸ್4: ಮಾರುತಿ ಸುಜುಕಿ ಎಸ್ಎಕ್ಸ್4 ಕಾರಿನ ದರ 7.11 ಲಕ್ಷ ರು.ನಿಂದ 9.39 ಲಕ್ಷ ರುಪಾಯಿವರೆಗಿದೆ. ಇದು ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ಜಿ ಆಯ್ಕೆಗಳಲ್ಲಿ ಸೇರಿದಂತೆ ಒಟ್ಟು 9 ಆವೃತ್ತಿಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಶೀಘ್ರದಲ್ಲಿ ದೇಶದ ರಸ್ತೆಗೆ ರಿಟ್ಜ್ ಸಣ್ಣ ಕಾರಿನ ಆಟೋಮ್ಯಾಟಿಕ್ ಆವೃತ್ತಿಯೊಂದನ್ನು ಪರಿಚಯಿಸಲು ಸಹ ಮಾರುತಿ ಸುಜುಕಿ ಯೋಜಿಸಿದೆ. ನೂತನ ರಿಟ್ಜ್ ಆವೃತ್ತಿಯು ಹೊಸ ಗ್ರಿಲ್, ಹೊಸ ಬಂಪರ್ ಇತ್ಯಾದಿ ಸೇರಿದಂತೆ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಕಾಣುವ ನಿರೀಕ್ಷೆಯಿದೆ.
ಇದರೊಂದಿಗೆ ಕಂಪನಿಯು ಗುಜರಾತಿನಲ್ಲಿ ವಾರ್ಷಿಕ 2.5 ಲಕ್ಷ ಉತ್ಪಾದನಾ ಸಾಮರ್ಥ್ಯದ ಘಟಕ ನಿರ್ಮಿಸಲು ಯೋಜಿಸಿದೆ. ಮಾನೆಸರ್ ಘಟಕದಲ್ಲಿ ಇತ್ತೀಚೆಗೆ ನೌಕರರ ಗಲಭೆಯಿಂದ ಮಾರುತಿ ಸುಜುಕಿ ಕಾರು ಉತ್ಪಾದನೆಗೆ ಸಾಕಷ್ಟು ಹಿನ್ನಡೆಯಾಗಿತ್ತು.


Click it and Unblock the Notifications









