ಮಾರುತಿ ಸ್ವಿಫ್ಟ್ ಡಿಜೈರ್ ಟೂರ್: ಎಲ್ಲರೂ ಖರೀದಿಸಬಹುದು!

ಹಳೆಯ ತಲೆಮಾರಿನ ಸ್ವಿಫ್ಟ್ ಡಿಜೈರ್(ಈಗ ಡಿಜೈರ್ ಟೂರ್ ಹೆಸರು) ಖರೀದಿಸಲು ಬಯಸಿದ್ದರೆ ನಿಮಗೊಂದು ಒಳ್ಳೆಯ ಸುದ್ದಿಯಿದೆ. ಸದ್ಯ ರಸ್ತೆಯಲ್ಲಿರುವ ಡಿಜೈರ್ ಕಾರಿಗೆ ಅತ್ಯಧಿಕ ಬೇಡಿಕೆ ಇರುವ ಕಾರಣ ಕಂಪನಿಯು ಡಿಜೈರ್ ಟೂರ್ ಕಾರನ್ನು ಸಾಮಾನ್ಯ ಸಾರ್ವಜನಿಕರಿಗೆ ಮಾರಾಟ ಮಾಡಲು ಆರಂಭಿಸಿದೆ.

ಕಂಪನಿಯು ಈ ಹಿಂದೆ ಬೇರೆಯದ್ದೇ ಯೋಜನೆ ಮಾಡಿತ್ತು. ನೂತನ ಡಿಜೈರ್ ಪರಿಚಯಿಸಿದ ನಂತರ ಡಿಜೈರ್ ಟೂರನ್ನು ಬೇಸ್ ಎಲ್ಎಕ್ಸ್ಐ/ಎಲ್ ಡಿಐ ಆವೃತ್ತಿಗಳಲ್ಲಿ ಟ್ಯಾಕ್ಸಿ ಕಂಪನಿಗಳಿಗೆ ಮಾರಾಟ ಮಾಡಲು ನಿರ್ಧರಿಸಿತ್ತು. ಇದೀಗ ಕಂಪನಿಯು ಈ ಕಾರನ್ನು ಟ್ಯಾಕ್ಸಿ ಮಾಲೀಕರಿಗೆ ಮಾತ್ರವಲ್ಲದೇ ಎಲ್ಲರಿಗೂ ಮುಕ್ತವಾಗಿಸಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಟೂರ್ ಎಲ್ ಎಕ್ಸ್ಐ ಮತ್ತು ಎಲ್ ಡಿಐ ಆವೃತ್ತಿಗಳಿಗೆ ಕ್ರಮವಾಗಿ 4.89 ಲಕ್ಷ ರು. ಮತ್ತು 5.91 ಲಕ್ಷ ರು. ಇದೆ. ಇದು ದೆಹಲಿ ಎಕ್ಸ್ ಶೋರೂಂ ದರ.

ಬೇಸಿಕ್ ಟೂರ್ ಕಪ್ಪು ಬಣ್ಣದ ಬಂಪರ್ ಹೊಂದಿದೆ. ಇದು ಕೇವಲ ಬಲಭಾಗದಲ್ಲಿ ರಿಯರ್ ವ್ಯೂ ಮಿರರ್ ಮತ್ತು ಏಸಿ, ಪವರ್ ಸ್ಟಿಯರಿಂಗ್ ಮುಂತಾದ ಸ್ಟಾಂಡರ್ಡ್ ಫೀಚರ್ಸ್ ಹೊಂದಿದೆ. ಡಿಜೈರ್ ಟೂರ್ ಖರೀದಿಯ ಲಾಭವೆಂದರೆ ಈ ಕಾರಿಗೆ ಯಾವುದೇ ತೆರನಾದ ವೇಟಿಂಗ್ ಪಿರೆಯಿಡ್ ಇಲ್ಲ.

ಅಥವಾ ಈ ಫೀಚರುಗಳಿಲ್ಲದ ಸಾದಾ ಡಿಜೈರ್ ಬೇಡವೆಂದ್ರೆ ಹತ್ತು ಹಲವು ಫೀಚರುಗಳ ಡಿಜೈರ್ ಕಾರು ಖರೀದಿಸಬಹುದು. ಆದರೆ ಅದರ ವೇಟಿಂಗ್ ಪಿರೆಯಿಡ್ ಸುಮಾರು ನಾಲ್ಕು ತಿಂಗಳಿದೆ. ನಿಮಗೆ ಈ ಡೀಲ್ ಇಷ್ಟವಾಯಿತಾ? ಅಥವಾ ಟ್ಯಾಕ್ಸಿ ಡಿಜೈರ್ ಯಾರಿಗೆ ಬೇಕು? ಎನ್ನುವಿರಾ.

More from DriveSpark

Article Published On: Monday, August 27, 2012, 15:07 [IST]
English summary
Maruti has decided to sell Dzire tour to private buyers due to overwhelming demand and long waiting periods for its new Dzire.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+