ಜಿಎಸ್‌ಟಿ ಜಾರಿಯಿಂದಾಗಿ ಮಾರುತಿ ಸುಜುಕಿ ಡಿಜೈರ್ ಕಾರಿನ ಬೆಲೆಗಳು ಇಳಿಕೆ..!
ಜುಲೈ 1ರಿಂದ ಜಿಎಸ್‌ಟಿ ಜಾರಿ ಹಿನ್ನೆಲೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ಡಿಜೈರ್ ಕಾರು ಮಾದರಿಯ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ.
ಜುಲೈ 1ರಿಂದ ಜಿಎಸ್‌ಟಿ ಜಾರಿ ಹಿನ್ನೆಲೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ಡಿಜೈರ್ ಕಾರು ಮಾದರಿಯ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ.

ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕಾರು ಉತ್ಪಾದನೆ ಮತ್ತು ಮಾರಾಟ ಮೇಲೆ ಶೇ.3 ರಷ್ಟು ತೆರಿಗೆ ಹಿಂಪಡೆದ ಹಿನ್ನೆಲೆ ಕಾರುಗಳ ಬೆಲೆಗಳು ಇಳಿಕೆಯಾಗಿದ್ದು, ಮಾರುತಿ ಸುಜುಕಿ ಕೂಡಾ ಡಿಜೈರ್ ಬೆಲೆಗಳನ್ನು ಕಡಿತಗೊಳಿಸಿದೆ.

ಜುಲೈ 1ರಿಂದಲೇ ಹೊಸ ದರಗಳು ಅನ್ವಯವಾಗುವಂತೆ ಹೊಸ ದರ ಪಟ್ಟಿ ಬಿಡುಗಡೆ ಮಾಡಿರುವ ಮಾರುತಿ ಸುಜುಕಿ, ಡಿಜೈರ್ ಬೆಲೆಗಳಲ್ಲಿ 4 ಸಾವಿರಕ್ಕಿಂತ ಹೆಚ್ಚು ರಿಯಾಯ್ತಿ ಘೋಷಿಸಿದೆ.

ಜಿಎಸ್‌ಟಿ ಜಾರಿಗೂ ಮುನ್ನ ಇದ್ದ ಡಿಜೈರ್ ಬೆಲೆಗಳಿಗೂ ಜಿಎಸ್‌ಟಿ ಜಾರಿ ನಂತರದ ಬೆಲೆಗಳಿಗೂ 4 ಸಾವಿರದಿಂದ 5 ಸಾವಿರದಷ್ಟು ಇಳಿಕೆಯಾಗಿದ್ದು, ಸದ್ಯ ದೆಹಲಿ ಎಕ್ಸ್‌ಶೋರಂ ಪ್ರಕಾರ ವಿವಿಧ ಮಾದರಿಗಳಿಗೆ ಅನುಗುಣವಾಗಿ ಡಿಜೈರ್ ಬೆಲೆ ರೂ.5.42 ಲಕ್ಷದಿಂದ ರೂ. 9.39 ಲಕ್ಷ ಇದೆ.

ಡಿಜೈರ್ ಕಾರು ಮಾದರಿಯೂ ಡಿಸೇಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಯಲ್ಲೂ ಲಭ್ಯವಿದ್ದು, ಹೊಸ ದರಗಳಲ್ಲೇ ಕಾರು ಖರೀದಿ ಮಾಡಬಹುದಾಗಿದೆ.

ಇನ್ನು ಡಿಸೈರ್ ಡೀಸೆಲ್ ಆವೃತ್ತಿಯು 1.3-ಲೀಟರ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿಯು 1.2-ಲೀಟರ್ ಎಂಜಿನ್ ಹೊಂದಿದೆ. ಹೀಗಾಗಿ ಸೆಡಾನ್ ಮಾದರಿಗಳಲ್ಲಿ ಡಿಜೈರ್ ಖರೀದಿ ಉತ್ತಮ ಮಾದರಿಯಾಗಿದೆ.


Click it and Unblock the Notifications








