ಹೊಂಡಾಗೆ ಸೆಡ್ಡು ನೀಡಲಿರುವ ಮಾರುತಿ

ಇದು ಪ್ರಮುಖವಾಗಿಯೂ ಹೊಂಡಾ ಅಮೇಜ್ ವಿರುದ್ಧ ಪ್ರತಿತಂತ್ರ ರೂಪಿಸುವುದರ ಭಾಗವಾಗಿದೆ. ಮಾರುತಿ ಉನ್ನತ ಅಧಿಕಾರಿಗಳ ಪ್ರಕಾರ ಪರಿಷ್ಕೃತ ಡಿಜೈರ್ ಆವೃತ್ತಿಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಮುಂದಿನ ದೀಪಾವಳಿ ವೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಈ ಮೂಲಕ ದೇಶದ ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯವನ್ನು ಖಾತ್ರಿಪಡಿಸಲು ಮಾರುತಿ ಬಯಸುತ್ತಿದೆ. ಹೊಂಡಾದ ಮೊದಲ ಡೀಸೆಲ್ ಎಂಜಿನ್ ಕಾರು ಮಾರುತಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.
ಪರಿಷ್ಕೃತ ಡಿಜೈರ್ ಆವೃತ್ತಿಯಲ್ಲಿ ಯಾವೆಲ್ಲ ಬದಲಾವಣೆಗಳಿರಲಿದೆ ಎಂಬುದಕ್ಕೆ ಅಧಿಕೃತ ಉತ್ತರ ಬಂದಿಲ್ಲ. ಹಾಗಿದ್ದರೂ ದರ ಪ್ರಮುಖ ಅಂಶವಾಗಿದ್ದರಿಂದ ರಚನಾತ್ಮಕವಾಗಿ ಯಾವುದೇ ದೊಡ್ಡ ಬದಲಾವಣೆ ಕಂಡುಬರುವ ಸಾಧ್ಯತೆಗಳಿಲ್ಲ. ಡಿಜೈರ್ ಹಾಗೂ ಸ್ವಿಫ್ಟ್ ಒಂದೇ ಪ್ಲಾಟ್ ಫಾರ್ಮ್‌ನಲ್ಲಿ ಆಗಮಿಸಿರುವುದರಿಂದ ಪರಿಷ್ಕೃತ ಕಾರು ಸಹ ನಾಲ್ಕು ಮೀಟರ್‌ನೊಳಗೆ ಆಗಮನವಾಗಲಿದ್ದು, ಈ ಮೂಲಕ ಸಣ್ಣ ಕಾರು ತೆರಿಗೆ ಪ್ರಯೋಜನವನ್ನು ಪಡೆಯಬಹುದಾಗಿದೆ.
ಅದೇ ರೀತಿ ಎಂಜಿನ್ ಆಯ್ಕೆಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವ ಸಾಧ್ಯತೆಗಳಿಲ್ಲ. ಅಂದರೆ ಡಿಜೈರ್ ಪೆಟ್ರೋಲ್ ಆವೃತ್ತಿ 1.2 ಹಾಗೂ ಡೀಸೆಲ್ ಆವೃತ್ತಿ 1.3 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಅನುಕ್ರಮವಾಗಿ 86 ಹಾಗೂ 74 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ.


Click it and Unblock the Notifications








