ಡೀಸೆಲ್ ಪವರಿಗೆ ನೋ ಎಂದ ಲಕ್ಷುರಿ ಕಾರು ಕಂಪನಿ

ಅದೊಂದು ಕಾಲವಿತ್ತು. ಡೀಸೆಲ್ ಎಂಜಿನುಗಳೆಂದರೆ ಒರಟು, ವಾಯು ಮತ್ತು ಶಬ್ಬ ಮಾಲಿನ್ಯ ಉಂಟುಮಾಡುತ್ತವೆ ಎನ್ನುವ ಸಮಯವಿತ್ತು. ಕಾಮನ್ ರೈಲ್ ಡೈರೆಕ್ಟ್ ಇಂಜೆಕ್ಷನ್ ಸಿಸ್ಟಮ್ ಮತ್ತು ನೂತನ ಡೀಸೆಲ್ ಎಂಜಿನ್ ತಂತ್ರಜ್ಞಾನ ಬಂದ ತರುವಾಯ ಈ ಎಲ್ಲಾ ದೂರುಗಳು ಮರೆಯಾಗಿದ್ದವು.

ಇತ್ತೀಚೆಗೆ ಡೀಸೆಲ್ ಎಂಜಿನ್ ಗಳು ಹಲವು ನೂತನ ತಂತ್ರಜ್ಞಾನಗಳೊಂದಿಗೆ ಬರುತ್ತಿವೆ. ಜೊತೆಜೊತೆಗೆ ಟಾರ್ಕ್ ಪವರ್ ಮತ್ತು ಇಂಧನ ದಕ್ಷತೆಯೂ ಹೆಚ್ಚುತ್ತಿದೆ. ಜೊತೆಗೆ ಪರಿಸರಕ್ಕೆ ಬಿಡುಗಡೆ ಮಾಡುವ ಇಂಗಾಲ ಇತ್ಯಾದಿ ಅಂಶಗಳು ಕಡಿಮೆಯಾಗಿವೆ.

ಟರ್ಬೊ ಚಾರ್ಜಿಂಗ್ ಇರಬಹುದು, ಪಿಜೊ ಎಲೆಕ್ಟ್ರಿಕ್ ಇಂಜೆಕ್ಷನ್ ಸಿಸ್ಟಮ್ ಇರಬಹುದು. ಇತ್ತಿಚೆಗೆ ಡೀಸೆಲ್ ಎಂಜಿನ್ ಗಳು ಸಾಕಷ್ಟು ಅಭಿವೃದ್ಧಿಯಾಗಿವೆ. ಆಕ್ಸಿಲರೇಷನ್ ಪವರ್ ಕೂಡ ಹೆಚ್ಚಾಗಿದೆ. ಇಷ್ಟೆಲ್ಲ ಅಭಿವೃದ್ಧಿಯಾದರೂ ಬೆಂಝ್ ಎಎಂಜಿ ಕಂಪನಿ ಮಾತ್ರ ಡೀಸೆಲ್ ಕಾರುಗಳಿಗೆ ನೋ ಎಂದಿದೆ.

ಅತ್ಯಧಿಕ ಕಾರ್ಯಕ್ಷಮತೆಯ ಸ್ಪೋರ್ಟ್ ಕಾರಿಗೆ ಡೀಸೆಲ್ ಎಂಜಿನ್ ಸೂಕ್ತವಲ್ಲವೆಂಬುದು ಈ ಕಂಪನಿಯ ಅಂಬೋಣ. ಈಗಲೂ ಪೆಟ್ರೋಲ್ ಎಂಜಿನಿಗಿಂತ ಗಾತ್ರದಲ್ಲಿ ಡೀಸೆಲ್ ಎಂಜಿನುಗಳು ದೊಡ್ಡದಿವೆ. ಹೀಗೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಮರ್ಸಿಡಿಸ್ ಬೆಂಝ್ ಬೆಂಝ್ ಎಎಂಜಿ ಡಿವಿಝನ್ ಡೀಸೆಲ್ ಎಂಜಿನ್ ಬೇಡಪ್ಪ ಬೇಡ ಎಂದಿದೆ. ಇದರ ಪ್ರತಿಸ್ಪರ್ಧಿ ಕಂಪನಿಗಳಾದ ಬಿಎಂಡಬ್ಲ್ಯು, ಆಡಿ ಮಾತ್ರ ಡೀಸೆಲ್ ಕಾರುಗಳಿಗೆ ಹಾಯ್ ಎಂದಿವೆ.

Most Read Articles

Kannada
English summary
BMW and Audi have both announced powerful diesel engines for its models. But Mercedes Benz's AMG divison says no to Diesel power.
Story first published: Wednesday, February 8, 2012, 11:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X