BYD: ಚೀನಾ ಕಾರಿಗೆ ಫುಲ್ ಡಿಮ್ಯಾಂಡ್: ಈಗ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆಯೆಷ್ಟು?
ಚೀನಾದ ಪ್ರಮುಖ ಕಾರು ತಯಾರಕ ಕಂಪನಿಯಾದ ಬಿವೈಡಿ (BYD), ತನ್ನ ಬಿವೈಡಿ ಸೀಲಯನ್ 7 (BYD SEALION 7 Anniversary Edition) ನ ಮೊದಲ ವಾರ್ಷಿಕೋತ್ಸವ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ ಬ್ರ್ಯಾಂಡ್‌ನ ಪ್ರಮುಖ ಎಲೆಕ್ಟ್ರಿಕ್ ಪರ್ಫಾಮೆನ್ಸ್ SUV ಆಗಿದೆ. ಬುಕಿಂಗ್‌ಗಳು ಈಗ ಪ್ರಾರಂಭವಾಗಿವೆ, ಗ್ರಾಹಕರು ದೇಶಾದ್ಯಂತ BYD ಇಂಡಿಯಾ ಡೀಲರ್‌ಶಿಪ್‌ಗಳಲ್ಲಿ ರೂ.70,000 ಪಾವತಿಸುವ ಮೂಲಕ ಕಾರನ್ನು ಬುಕ್ ಮಾಡಬಹುದಾಗಿದೆ. ಹೊಸ ಬಿವೈಡಿ ಸೀಲಯನ್ 7 ಆನಿವರ್ಸರಿ ಎಡಿಷನ್ ಕುರಿತ ಸಂಪೂರ್ಣ ಮಾಹತಿ ಇಲ್ಲಿದೆ.
ಮೊದಲ ವಾರ್ಷಿಕೋತ್ಸವದ ಆಫರ್ ಭಾಗವಾಗಿ, ಮೊದಲ 1100 ಗ್ರಾಹಕರು ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ಇನ್‌ಸ್ಟಾಲೇಷನ್‌ನೊಂದಿಗೆ ಉಚಿತ 11 kW ಹೋಮ್ ಚಾರ್ಜರ್, ಉಚಿತ 2 ವರ್ಷಗಳ ಫ್ರೀ ಸರ್ವಿಸ್ ಮತ್ತು ಮೇಂಟೇನನ್ಸ್ ಸೇರಿವೆ. ಬ್ಯಾಟರಿ ಮೇಲೆ 8 ವರ್ಷ ಅಥವಾ 1,50,000 ಕಿ.ಮೀ ವಾರೆಂಟಿ (ಸಾಮಾನ್ಯ ಖಾತರಿ 6 ವರ್ಷಗಳು / 150,000 ಕಿಮೀ)ಯೊಂದಿಗೆ ಬರುತ್ತದೆ.

ಹಾಗೆಯೇ ಹೈ ವೋಲ್ಟೇಜ್ ಬ್ಯಾಟರಿ ಮೇಲೆ 8 ವರ್ಷಗಳು / 1,60,000 ಕಿ.ಮೀ ವಾರೆಂಟಿಯೊಂದಿಗೆ ಬರುತ್ತದೆ. ಈ ಆಫರ್‌ಗಳು ಮೊದಲ 1100 ಗ್ರಾಹಕರು ಮತ್ತು ಏಪ್ರಿಲ್ 30, 2026 ರವರೆಗೆ ಮಾಡಿದ ಬುಕಿಂಗ್‌ಗಳಿಗೆ ಮಾತ್ರ ಮಾನ್ಯವಾಗಿರುತ್ತದೆ. ಆಸಕ್ತ ಗ್ರಾಹಕರು ಕೂಡಲೇ BYD ಇಂಡಿಯಾ ಡೀಲರ್‌ಶಿಪ್‌ಗಳಲ್ಲಿ ರೂ.70,000 ಪಾವತಿಸುವ ಮೂಲಕ ಕಾರನ್ನು ಬುಕ್ ಮಾಡಬಹುದಾಗಿದೆ.
ಭಾರತದಲ್ಲಿ BYD SEALION 7 ಬಲವಾದ ಗ್ರಾಹಕರ ಪ್ರತಿಕ್ರಿಯೆಯನ್ನು ಕಂಡಿದೆ. ಇದು ಪ್ರೀಮಿಯಂ ಎಲೆಕ್ಟ್ರಿಕ್ SUV ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಭಾರತದಲ್ಲಿ ಇಲ್ಲಿಯವರೆಗೆ 2500 ಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿವೆ. ಇದು ಸುಧಾರಿತ ತಂತ್ರಜ್ಞಾನ, ಸ್ಪೋರ್ಟಿ ವಿನ್ಯಾಸ ಮತ್ತು ಹೈ-ಪರ್ಫಾಮೆನ್ಸ್ ಎಲೆಕ್ಟ್ರಿಕ್ SUV ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ತೋರಿಸಿಕೊಟ್ಟಿದೆ.

ಬಿವೈಡಿ ಸೀಲಯನ್ 7 ಆನಿವರ್ಸರಿ ಎಡಿಷನ್ ವಿಶೇಷತೆಗಳು
ಈ ಕಾರಿನಲ್ಲಿ ಎರಡು ವೇರಿಯೆಂಟ್‌ಗಳಿದ್ದು, ಮೊದಲನೇಯದು 'ಸೀಲಿಯನ್ 7 ಪ್ರೀಮಿಯಂ' ವೇರಿಯೆಂಟ್ 82.56 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದರ ಬೆಲೆಯು ರೂ. 49,40,000 (ಎಕ್ಸ್ ಶೋರೂಂ) ಇದೆ. ಎರಡನೇಯದು 'ಸೀಲಿಯನ್ 7 ಪರ್ಫಾಮೆನ್ಸ್' ವೇರಿಯೆಂಟ್ 82.56 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದರ ಬೆಲೆಯು ರೂ. 54,90,000 (ಎಕ್ಸ್ ಶೋರೂಂ) ಇದೆ.
ಪರ್ಫಾರ್ಮೆನ್ಸ್ ವೇರಿಯೆಂಟ್ ಕೇವಲ 4.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪಬಲ್ಲದು, ಹಾಗೆಯೇ ಪ್ರೀಮಿಯಂ ವೇರಿಯೆಂಟ್ 6.7 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪಬಲ್ಲದು. SEALION 7 ಪರ್ಫಾರ್ಮೆನ್ಸ್ ವೇರಿಯೆಂಟ್ ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 542 ಕಿ.ಮೀ ಓಡಿಸಬಹುದು ಮತ್ತು ಪ್ರೀಮಿಯಂ ವೇರಿಯೆಂಟ್ ಸಂಪೂರ್ಣ ಚಾರ್ಜ್‌ನಲ್ಲಿ 567 ಕಿ.ಮೀ ಓಡಿಸಬಹುದು.

ಇಂಟೀರಿಯರ್‌ನಲ್ಲಿ 15.6-ಇಂಚಿನ ತಿರುಗುವ ಟಚ್‌ಸ್ಕ್ರೀನ್, ಕ್ವಿಲ್ಟೆಡ್ ನಪ್ಪಾ ಲೆದರ್ ಸೀಟ್‌ಗಳು ಮತ್ತು 128-ಆಂಬಿಯೆಂಟ್ ಲೈಟಿಂಗ್, ಎಲೆಕ್ಟ್ರಿಕ್ ಸನ್‌ಶೇಡ್‌ನೊಂದಿಗೆ ಪನೋರಮಿಕ್ ಗ್ಲಾಸ್ ರೂಫ್ ಮತ್ತು ಶಬ್ದ, 12 Dynaudio ಸ್ಪೀಕರ್‌ಗಳು, ವೆಂಟಿಲೇಟೆಡ್ ಸೀಟುಗಳು ಮತ್ತು 50 W ವೈರ್‌ಲೆಸ್ ಫೋನ್ ಚಾರ್ಜರ್, ಎಲೆಕ್ಟ್ರಿಕ್ ಟೈಲ್‌ಗೇಟ್ ಮತ್ತು ವೆಹಿಕಲ್-ಟು-ಲೋಡ್ (VTOL) ಸಾಮರ್ಥ್ಯವನ್ನು ಹೊಂದಿದೆ.
ಪ್ರಸ್ತುತ ಭಾರತದದಲ್ಲಿ ಕಂಪನಿಯು BYD SEALION 7, BYD ATTO 3 eSUV, BYD eMAX 7 eMPV, ಮತ್ತು BYD SEAL ಎಂಬ ಮಾಡಲ್‌ಗಳನ್ನು ಮಾರಾಟ ಮಾಡುತ್ತಿದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








