ಭವಿಷ್ಯದ ಪೊಲೀಸ್ ಕಾರಿನ ಮೇಲೆ ಸ್ವಲ್ಪ ಕಣ್ಣಾಯಿಸಿ!

ಜರ್ಮನ್ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ನೂತನ ಕಾನ್ಸೆಪ್ಟ್ ಕಾರೊಂದನ್ನು ಅಭಿವೃದ್ಧಿಪಡಿಸುತ್ತಿದ್ದು, ಭವಿಷ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರಿಯಾಗಲಿದೆ.

ಮರ್ಸಿಡಿಸ್ ಬೆಂಝ್ ಎನರ್-ಜಿ-ಫೋರ್ಸ್ ಎಂದು ಅರಿಯಲ್ಪಡುವ ಈ ದುಬಾರಿ ಸೆಗ್ಮೆಂಟ್ ಮುಂಬರುವ ಲಾಸ್ ಏಜಂಲೀಸ್ ಆಟೋ ಷೋದಲ್ಲಿ ಪ್ರದರ್ಶನವಾಗಲಿದೆ. ಪ್ರಮುಖವಾಗಿಯೂ 2025ರ ವೇಳೆ ಹೈವೇಗಳಲ್ಲಿ ಪೊಲೀಸ್ ಪೆಟ್ರೋಲಿಂಗ್ ಮಾಡಲು ಮರ್ಸಿಡಿಸ್ ಬೆಂಝ್ ಎನಾರ್-ಜಿ-ಫೋರ್ಸ್ ಕಾರನ್ನು ಉಪಯೋಗಿಸಬಹುದಾಗಿದೆ.

ಇದೇ ವರ್ಷ ಲಾಸ್ ಏಜಂಲೀಸ್‌ನಲ್ಲಿ ಜರಗಲಿರುವ ಆಟೋ ಷೋದಲ್ಲಿ ಪ್ರದರ್ಶನಗೊಳ್ಳಲಿರುವ ಈ ಕಾನ್ಸೆಪ್ಟ್ ಕಾರಿನ ಕೆಲವೊಂದು ಆಕರ್ಷಕ ಚಿತ್ರಣವನ್ನು ಮರ್ಸಿಡಿಸ್ ಈಗಾಗಲೇ ಬಿಡುಗಡೆಗೊಳಿಸಿದ್ದು, ಖಂಡಿತವಾಗಿಯೂ ನೀವು ಮಿಸ್ ಮಾಡದಿರಿ

ಮರ್ಸಿಡಿಸ್ ಬೆಂಝ್ ಎನಾರ್-ಜಿ-ಫೋರ್ಸ್

ಮರ್ಸಿಡಿಸ್ ಬೆಂಝ್ ಎನಾರ್-ಜಿ-ಫೋರ್ಸ್ ಪ್ರಮುಖವಾಗಿಯೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿದ್ದು, 2025ರ ವೇಳೆಗೆ ಹೈವೇಗಳಲ್ಲಿ ಪೊಲೀಸ್ ಪೆಟ್ರೋಲಿಂಗ್‌ಗೆ ಬಳಸಬಹುದಾಗಿದೆ.

ಮರ್ಸಿಡಿಸ್ ಬೆಂಝ್ ಎನಾರ್-ಜಿ-ಫೋರ್ಸ್

ಭವಿಷ್ಯದಲ್ಲಿ ಬಿಡುವಿಲ್ಲದ ನಗರ ಪ್ರದೇಶಗಳಲ್ಲಿ ಮರ್ಸಿಡಿಸ್ ಬೆಂಝ್ ಎನಾರ್-ಜಿ-ಫೋರ್ಸ್ ಖಂಡಿತವಾಗಿಯೂ ನೆರವಿಗೆ ಬರಲಿದೆ.

ಮರ್ಸಿಡಿಸ್ ಬೆಂಝ್ ಎನಾರ್-ಜಿ-ಫೋರ್ಸ್

ಮರ್ಸಿಡಿಸ್ ಬೆಂಝ್ ಎನಾರ್-ಜಿ-ಫೋರ್ಸ್ ಸಂಚಾರ ದಟ್ಟಣೆ ಪ್ರದೇಶ ಸಹಿತ ಕಠಿಣವಾದ ಆಫ್ ರೋಡ್ ನಿರ್ವಹಿಸಲು ಸಾಮರ್ಥ್ಯ ಹೊಂದಿದ್ದು, ಫೋರ್ ವೀಲ್ ಡ್ರೈವ್ ಸಿಸ್ಟಂ ನಿಜಕ್ಕೂ ಅದ್ಭುತವೆನಿಸಿದೆ.

ಮರ್ಸಿಡಿಸ್ ಬೆಂಝ್ ಎನಾರ್-ಜಿ-ಫೋರ್ಸ್

ಮರ್ಸಿಡಿಸ್ ತನ್ನ ಈ ನೂತನ ಕಾನ್ಸೆಪ್ಟ್ ಅನ್ನು ಸ್ಪೋರ್ಟ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ತಲಹದಿಯ ಐಕಾನ್ ಕಾರು ಜಿ-ವಾಗನ್‌ಗೆ ಆಳವಡಿಸುತ್ತಿದೆ.

ಮರ್ಸಿಡಿಸ್ ಬೆಂಝ್ ಎನಾರ್-ಜಿ-ಫೋರ್ಸ್

ಹಲವಾರು ದೇಶದ ಪ್ರಾದೇಶಿಕ ಸೈನ್ಯವು ಈಗಾಗಲೇ ಜಿ-ವಾಗನ್ ಕಾರನ್ನು ಸೈನ್ಯಕ್ಕಾಗಿ ಬಳಸುತ್ತಿದೆ. ನೂತನ ಎನಾರ್-ಜಿ-ಫೋರ್ಸ್ ಕೂಡಾ ಇದೇ ರೀತಿಯ ಬಳಕೆಗೆ ಉಪಯುಕ್ತವೆನಿಸಲಿದೆ.

ಮರ್ಸಿಡಿಸ್ ಬೆಂಝ್ ಎನಾರ್-ಜಿ-ಫೋರ್ಸ್

ಎನಾರ್-ಜಿ-ಫೋರ್ಸ್ ಹಿಂಭಾಗದಲ್ಲಿ ಹಿಂತೆಗೆಯಬಹುದಾದ ಟೂಲ್ ಬಾಕ್ಸ್ ಹೊಂದಿದ್ದು, ಹಾಗಾಗಿ ನಿಮ್ಮ ಟೂಲ್‌ಗಳನ್ನು ತೆಗೆಯುವುದಕ್ಕಾಗಿ ಹಿಂದಿನ ಬಾಗಿಲು ಸಂಪೂರ್ಣವಾಗಿಯೂ ತೆಗೆಯಬೇಕಾದ ಅಗತ್ಯವಿರುವುದಿಲ್ಲ.

ಮರ್ಸಿಡಿಸ್ ಬೆಂಝ್ ಎನಾರ್-ಜಿ-ಫೋರ್ಸ್

ಇನಾರ್ ಜಿ ಫೋರ್ಸ್ ಮತ್ತೊಂದು ವಿಶೇಷತೆ ಏನೆಂದರೆ ಮೇಲ್ಭಾಗದಲ್ಲಿ ವಾಟರ್ ಟ್ಯಾಂಕ್ ಹೊಂದಿದೆ. ಇದರ ನೆರವಿನಿಂದ ನೀರು ಸಂಗ್ರಹಿಸಿ ಇಡಬಹುದಾಗಿದೆ. ಆ ಮುಖಾಂತರ ಈ ಎಸ್‌ಯುವಿ ಕಾರು ಡಸರ್ಟ್‌ನಲ್ಲೂ ಉಪಕಾರಿಯೆನಿಸಲಿದೆ.

ಮರ್ಸಿಡಿಸ್ ಬೆಂಝ್ ಎನಾರ್-ಜಿ-ಫೋರ್ಸ್

ಎನಾರ್-ಜಿ-ಫೋರ್ಸ್ ಎಲೆಕ್ಟ್ರಿಕ್ ವೆಹಿಕಲ್ ಕೂಡಾ ಆಗಿದ್ದು, ಎಲ್ಲ ನಾಲ್ಕು ಟಯರ್‌ಗಳು ಇಂಧನ ಕೋಶಗಳ ಶಕ್ತಿಯಿಂದ ಎಲೆಕ್ಟ್ರಿಕ್ ಮೋಟಾರ್‌ಗಳಿಗೆ ಜೋಡಿಸಬಹುದಾಗಿದೆ.

More from DriveSpark

Article Published On: Saturday, November 17, 2012, 15:10 [IST]
English summary
The Mercedes-Benz Ener-G-Force is the latest concept car developed by the German prmium car brand. Based on the iconic G Wagon, this concept car has been conceived keeping in mind the law enforcement vehicles that can be used I the future.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+