ಮರ್ಸಿಡಿಸ್ ಬೆಂಝ್ ಆರ್350 ಡೀಸೆಲ್ ರಸ್ತೆಗೆ, ದರ 59.9 ಲಕ್ಷ ರು.
ಇತ್ತೀಚೆಗೆ ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳಿಗೆ ಹೆಚ್ಚು ಬೇಡಿಕೆಯಿದೆ. ಈ ಟ್ರೆಂಡ್ ಐಷಾರಾಮಿ ಕಾರು ಮಾರುಕಟ್ಟೆಯಲ್ಲೂ ಆರಂಭವಾಗಿದೆ. ಅದ್ದೂರಿ ಕಾರು ತಯಾರಕ ಕಂಪನಿಗಳು ಇದೀಗ ಡೀಸೆಲ್ ಕಾರು ಹೊರತರಲು ಗಮನ ನೀಡುತ್ತಿದ್ದಾರೆ. ಇದೀಗ ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಡೀಸೆಲ್ ಆವೃತ್ತಿಯೊಂದನ್ನು ಪರಿಚಯಿಸಿದೆ.
ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಜನಪ್ರಿಯ ಎಂಪಿವಿ ಆರ್350 ಕಾರಿನ ಡೀಸೆಲ್ ಆವೃತ್ತಿಯೊಂದನ್ನು ಪರಿಚಯಿಸಿದೆ. ಇದರ ದೆಹಲಿ ಎಕ್ಸ್ ಶೋರೂಂ ದರ 58.9 ಲಕ್ಷ ರುಪಾಯಿ ಆಗಿದೆ.
ನೂತನ ಮರ್ಸಿಡಿಸ್ ಬೆಂಝ್ ಆರ್350 ಕಾರು 2,987 ಸಿಸಿಯ ವಿ6 ಎಂಜಿನ್ ಹೊಂದಿದೆ. ಇದು ಫೋರ್ ವೀಲ್ ಡ್ರೈವ್ ಟ್ರಾನ್ಸ್ ಮಿಷನ್ ಹೊಂದಿದೆ. ಬೆಂಝ್ ಆರ್ 350 ಡೀಶೆಲ್ ಕಾರು ಪ್ರತಿಲೀಟರಿಗೆ 11.25 ಕಿ.ಮೀ. ಮೈಲೇಜ್ ನೀಡುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
"ನೂತನ ಡೀಸೆಲ್ ಆವೃತ್ತಿಯು ಗ್ರಾಹಕರನ್ನು ಖಂಡಿತವಾಗಿಯೂ ಸೆಳೆಯುವ ಭರವಸೆಯಿದೆ" ಎಂದು ಮರ್ಸಿಡಿಸ್ ಬೆಂಝ್ ಇಂಡಿಯಾ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕರಾದ ದೇಬಾಶಿಸ್ ಮಿತ್ರಾ ಹೇಳಿದ್ದಾರೆ.
ಇದು ಏಳು ಸೀಟಿನ ಮಲ್ಟಿಪರ್ಪೊಸ್ ವೆಹಿಕಲ್ ಆಗಿದೆ. ಇದರ ಲಗೇಜ್ ಸ್ಥಳಾವಕಾಶವೂ ವಿಶಾಲವಾಗಿದೆ. ಕಂಪನಿಯು ಆರ್ 350 ಪೆಟ್ರೋಲ್ ಆವೃತ್ತಿಯನ್ನು 2010ರಲ್ಲಿ ಹೊತತಂದಿತ್ತು. ಅದರ ದರ 58.7 7 ಲಕ್ಷ ರುಪಾಯಿ ಇದೆ.


Click it and Unblock the Notifications









