ಮರ್ಸಿಡೀಸ್‌ನಿಂದ ಎಂಎಲ್ 250 ಸಿಡಿಐ ಬಿಡುಗಡೆ - 46.5 ಲಕ್ಷ ರು..!

By Nagaraja

ಜರ್ಮನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪೆನಿಯಾದ ಮರ್ಸಿಡೀಸ್‌ ಬೆಂಝ್‌ 'ಎಂ' ಶ್ರೇಣಿಯ ನೂತನ ವೈವಿಧ್ಯಮಯ ಕಾರು ಪರಿಚಯಿಸಿದ್ದು, ಎಂಎಲ್ 250 ಸಿಡಿಐ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಎಂಎಲ್ 350 ಸಿಡಿಐ ಕಾರುಗಳಿಗೆ ಹೋಲಿಸಿದರೆ ಕಡಿಮೆ ದುಬಾರಿಯಾಗಿದೆ. ಎಂಎಲ್ 250 ಸಿಡಿಐ ಕಾರುಗಳು ಎಸ್‌ಕೆಡಿ ತಂತ್ರಜ್ಞಾನದಿಂದ ರೂಪಿಸಲಾಗಿರುವ ದೇಶದ ಮೊದಲ 'ಎಂ' ಶ್ರೇಣಿಯ ಕಾರುಗಳಾಗಿವೆ.

ನವದೆಹಲಿಯ ಎಕ್ಸ್ ಷೋ ರೂಂಗಳಲ್ಲಿ ಎಂಎಲ್ 250 ಸಿಡಿಐ ಕಾರುಗಳ ಬೆಲೆ 46.5 ಲಕ್ಷ ರುಪಾಯಿಗಳಾಗಿದ್ದು, ಇದು ಇನ್ನಷ್ಟು ಪವರ್‌ಫುಲ್ ಆಗಿರುವ 350 ಸಿಡಿಐ ಕಾರುಗಳಿಗಿಂತಲೂ 10.4 ಲಕ್ಷಗಳಷ್ಟು ಅಗ್ಗವಾಗಿದೆ. ಎಡಗೈ-ಡ್ರೈವ್ ಜಿಎಲ್‌ಕೆ ಹೊರತುಪಡಿಸಿ ಮೆರ್ಸಿಡೀಸ್ ಕಂಪೆನಿಗಳಿಗೆ ಲಗ್ಷುರಿ ಕಾರು ಸೆಗ್ಮೆಂಟಿನಲ್ಲಿ ಯಾವುದೇ ನೇರ ಎದುರಾಗಳಿಗಳಿಲ್ಲ.


ಈ ಮೂಲಕ ಆಡಿ ಕ್ಯೂ5 ಹಾಗೂ ಬಿಎಂಡಬ್ಲ್ಯು ಎಕ್ಸ್3 ಕಾರುಗಳಿಗೆ ಪ್ರಬಲ ಪೈಪೋಟಿ ನೀಡಲು ಮರ್ಸಿಡೀಸ್ ಬೆಂಝ್‌ ಮುಂದಾಗಿದೆ. ಎಂಎಲ್ 350 ಸಿಡಿಐ ಕಾರುಗಳು ಹೊಂದಿರುವ ಇಂಟೆಲಿಜೆಂಟ್ ಲೈಟ್ ಸಿಸ್ಟಮ್ ಹಾಗೂ ಆಕ್ಟಿವ್ ಪಾರ್ಕ್ ಅಸಿಸ್ಟ್‌ಗಳಂತಹ ಇತರ ಸಂಯೋಜನೆಗಳನ್ನು ಕೂಡಾ ಎಂಎಲ್ 250 ಸಿಡಿಐ ಕಾರುಗಳು ಒಳಗೊಂಡಿವೆ.

ಮೆರ್ಸಿಡೀಸ್ ಎಂಎಲ್ 250 ಸಿಡಿಐ ಕಾರುಗಳು 2.2 ಲೀಟರ್‌ನ ನಾಲ್ಕು ಸಿಲಿಂಡರ್ ಟ್ವಿನ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಇದು 204 ಬಿಎಚ್‌ಪಿ ಪವರ್ 500 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಅಂತೆಯೇ 7 ಸ್ಪೀಡ್ ಆಟೊಮೆಟಿಕ್ ಟ್ರಾನ್ಸ್‌ಮಿಷನ್ ಸಿಸ್ಟಮ್ ಜತೆಗೂ ಲಭ್ಯವಿರುತ್ತದೆ. ಪ್ರಸ್ತುತ ಇದೇ ಇಂಜಿನ್ 'ಸಿ' ಕ್ಲಾಸ್ ಹಾಗೂ 'ಇ' ಕ್ಲಾಸ್‌ಗಳಲ್ಲೂ ಬಳಕೆ ಮಾಡಲಾಗಿದೆ.

ಮೆರ್ಸಿಡೀಸ್ ಬೆಂಝ್‌ ಎಂಎಲ್250 ಸಿಡಿಐ ಪ್ರತಿಸ್ಪರ್ಧಿಗಳು:
ಎಂಎಲ್250 ಸಿಡಿಐ: 46.5 ಲಕ್ಷ
ಬಿಎಂಡಬ್ಲ್ಯು ಎಕ್ಸ್3 3.0 ಡಿ: 49. 8 ಲಕ್ಷ
ಆಡಿ ಕ್ಯೂ5 3.0 ಟಿಡಿಐ: 52.61 ಲಕ್ಷ

More from DriveSpark

Article Published On: Thursday, October 11, 2012, 18:05 [IST]
English summary
German luxury carmaker Mercedes Benz India has just launched a cheaper M-Class SUV in India. Company has added a new variant to its M-Class lineup, the ML250 CDI which slots below the more-expensive ML350 CDI. The ML250 CDI is priced at Rs 46.5 lakh (ex-showroom, Delhi).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+