ಬೆಂಗ್ಳೂರಲ್ಲಿ ಮರ್ಸಿಡಿಸ್ ಬೆಂಝ್ ಸ್ಟಾರ್ ಡ್ರೈವ್ ಝಲಕ್

ಮರ್ಸಿಡಿಸ್ ಬೆಂಝ್ ಕಂಪನಿಯು ಬೆಂಗಳೂರಿನ ಮಾರತ್ ಹಳ್ಳಿ ಸಮೀಪ ಇತ್ತೀಚೆಗೆ (ಮೇ 12) ಗ್ರಾಹಕ ಸ್ನೇಹಿ ಸ್ಟಾರ್ ಡ್ರೈವ್ ಕಾರ್ಯಕ್ರಮ ಆಯೋಜಿಸಿತ್ತು. ಇದು ಕಂಪನಿಯು ದೇಶದಲ್ಲಿ ಆಯೋಜಿಸಿದ ಮೂರನೇ ಸ್ಟಾರ್ ಡ್ರೈವ್ ಕಾರ್ಯಕ್ರಮವಾಗಿದೆ.

ಈ ಕಾರ್ಯಕ್ರಮದಲ್ಲಿ ಮರ್ಸಿಡಿಸ್ ಬೆಂಝ್ ಕಾರುಗಳನ್ನು ಯಾವ ರೀತಿಯಲ್ಲಿ ನಿಯಂತ್ರಿಸಬೇಕು ಎನ್ನುವದನ್ನು ಅನುಭವಿ ಚಾಲಕರ ನೆರವಿನಿಂದ ಕಂಪನಿಯು ಗ್ರಾಹಕರಿಗೆ ತೋರಿಸಿಕೊಟ್ಟಿತ್ತು. ಅಂದರೆ ವಿವಿಧ ವಾತಾವರಣಗಳಲ್ಲಿ, ವಿವಿಧ ರೀತಿಯ ರಸ್ತೆಗಳಲ್ಲಿ, ಏರುದಿಕ್ಕಿನಲ್ಲಿ, ಇಳಿಜಾರಿನಲ್ಲಿ, ಫೋರ್ ವೀಲ್ ಡ್ರೈವ್ ನಲ್ಲಿ ವಾಹನ ಚಾಲನೆ ಕೌಶಲ್ಯ ಹೆಚ್ಚಿಸುವ ಕಾರ್ಯಕ್ರಮ ಇದಾಗಿದೆ.

ಬೆಂಗಳೂರಿನಲ್ಲಿ ನಡೆದ ಮರ್ಸಿಡಿಸ್ ಸ್ಟಾರ್ ಡ್ರೈವ್ ಎಕ್ಸ್‌ಪೀರಿಯನ್ಸ್ ಕಾರ್ಯಕ್ರಮದಲ್ಲಿ ಕಂಪನಿಯ ಎಸ್ಎಲ್ಎಸ್ ಎಎಂಜಿ ಮತ್ತು ಸಿ 63 ಎಎಂಜಿ ಸ್ಪೋರ್ಟ್ಸ್ ಕಾರುಗಳು, ಸಿ ಕ್ಲಾಸ್ ಮತ್ತು ಇ ಕ್ಲಾಸ್ ಪ್ರೀಮಿಯಂ ಸೆಡಾನ್ ಕಾರುಗಳು, ಎಂ ಕ್ಲಾಸ್ ಮತ್ತು ಜಿಎಲ್ ಕ್ಲಾಸಿನ ಸ್ಪೋರ್ಟ್ ಯುಟಿಲಿಟಿ ವೆಹಿಕಲುಗಳು ಇದ್ದವು.

ಪ್ರೀ ಸೇಫ್. ಟ್ರಾಕ್ಷನ್ ಕಂಟ್ರೋಲ್, ಇಎಸ್ ಪಿ, ಆಫ್ ರೋಡ್ ಚಾಲನೆ ಇತ್ಯಾದಿಗಳನ್ನು ನುರಿತ ಚಾಲಕರು ಪ್ರದರ್ಶಿಸಿದರು. 40 ಡಿಗ್ರಿ ಬಾಗಿದ ರಸ್ತೆಯಲ್ಲಿ ಜಿಎಲ್ ಕ್ಲಾಸ್ ಮತ್ತು ಎಂಎಲ್ ಕ್ಲಾಸ್ ಸ್ಪೋರ್ಟ್ ಯುಟಿಲಿಟಿ ವಾಹನಗಳ ಮೂಲಕ ಪ್ರದರ್ಶನ ನೀಡಲಾಯಿತು.

ವಿವಿಧ ಪರಿಸರಕ್ಕೆ ಅನುಗುಣವಾಗಿ ಚಾಲನೆ ಮಾಡಲು ಬೆಂಝ್ ಕಾರುಗಳಲ್ಲಿರುವ ವಿವಿಧ ಲಾಕ್ ಸಿಸ್ಟಮ್ ವ್ಯವಸ್ಥೆಯನ್ನೂ ಕಂಪನಿಯು ಗ್ರಾಹಕರಿಗೆ ಹೇಳಿಕೊಟ್ಟಿತ್ತು. ಅಂದರೆ ಕೇವಲ ಒಂದು ಅಥವಾ ಎರಡು ಚಕ್ರಗಳು ಮಾತ್ರ ತಿರುಗುವುದು, ಉಳಿದ ಚಕ್ರಗಳು ತಟಸ್ಥವಾಗಿರುವುದು, ರಿವರ್ಸ್ ಆಗಿ ಏರುದಿಕ್ಕಿನತ್ತ ಕಾರು ಚಲಾಯಿಸುವುದು, ಭಾರಿ ಇಳಿಜಾರಿನಲ್ಲೂ ಕಾರನ್ನು ನಿಲ್ಲಿಸುವುದು ಸೇರಿದಂತೆ ಆಲ್ ವೀಲ್ ಡ್ರೈವ್ ಕಲೆಗಳನ್ನು ಪ್ರದರ್ಶಿಸಲಾಯಿತು.

ಒಟ್ಟಾರೆ ಸ್ಟಾರ್ ಡ್ರೈವ್ ಕಾರ್ಯಕ್ರಮದ ಮೂಲಕ ಮರ್ಸಿಡಿಸ್ ಬೆಂಝ್ ಗ್ರಾಹಕರಿಗೆ, ಓನರುಗಳಿಗೆ, ಚಾಲಕರುಗಳಿಗೆ ಬೆಂಝ್ ಕಾರುಗಳ ಅಪರಿಮಿತ ಶಕ್ತಿಗಳನ್ನು ತಿಳಿಸಿಕೊಡಲಾಯಿತು.

Most Read Articles

Kannada
English summary
Mercedes Benz India (MBI) conducted Star Drive Experience in Bangalore on May 12. A first of its kind of programme aiming at more customer interaction, it's is the 3rd time Mercedes organising this event in India.
Story first published: Monday, May 14, 2012, 12:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X