ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು..!

By Nagaraja

ಈ ಜಗತ್ತೇ ಹೀಗೆ...ಪ್ರತಿಯೊಬ್ಬರು ನಾನಾ ರೀತಿಯಲ್ಲಿ ನೂತನ ಅವಿಷ್ಕಾರ ಮಾಡುವ ಹಂಬಲ ಹೊಂದಿರುತ್ತಾರೆ. ಇದು ನವನವೀನ ಮಾನವ ಸೃಷ್ಟಿಗೆ ದಾರಿದೀಪವಾಗಿದೆ. ಈ ಯಾಂತ್ರಿಕ ಯುಗದಲ್ಲಿ ಬೆಳೆದು ಬರುತ್ತಿರುವ ಪರಸ್ಪರ ಪೈಪೋಟಿಯೇ ಅಂತಹವರ ಸಾಧನೆಗೆ ಸ್ಪೂರ್ತಿಯಾಗಿದೆ.

ನಿಮ್ಮ ಬದುಕಲ್ಲಿ ನಾನಾ ರೀತಿಯ ಕಾರುಗಳನ್ನು ಕಣ್ಣಾರೆ ನೋಡುವೀರಾ. ಆದರೆ ಚಿನ್ನದ ಕಾರಿನ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಹೌದು, ಈ ಚೆಂದದ ಚೆಂದುಳ್ಳಿಯನ್ನು ಪರಿಶುದ್ಧ ಬಿಳಿ ಚಿನ್ನ ಉಪಯೋಗಿಸಿ ತಯಾರಿಸಲಾಗಿದೆ.

ಅಬುದಾಬಿ ಮೂಲದ ತೈಲ ಉದ್ಯಮಿ ಹಾಗೂ ಕೋಟ್ಯಧಿಪತಿ ಈ ಅತಿ ದುಬಾರಿ ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಆರ್ ಮೆಕ್‌ಲಾರೆನ್ ವೈಟ್ ಗೋಲ್ಡ್ ಕಾರನ್ನು ಖರೀದಿಸಿದ್ದಾರೆ. ಹಾಗಿದ್ದರೆ ಬನ್ನಿ ಬಿಳಿ ಬಂಗಾರಿಯ ಬಗ್ಗೆ ಹೆಚ್ಚು ತಿಳಿಯೋಣ.

ವೈಟ್ ಗೋಲ್ಡ್ ಮರ್ಸಿಡಿಸ್ ಬೆಂಝ್ ಫ್ರಂಟ್ ವ್ಯೂ

ವೈಟ್ ಗೋಲ್ಡ್ ಮರ್ಸಿಡಿಸ್ ಬೆಂಝ್ ಫ್ರಂಟ್ ವ್ಯೂ

ನಿಮ್ಮನ್ನು ಬೆರಗುಗೊಳಿಸುವುವಂತಹ ಆಕರ್ಷಕ ಫೀಚರ್ಸ್‌ಗಳನ್ನು ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಆರ್ ಮೆಕ್‌ಲಾರೆನ್ ವೈಟ್ ಗೋಲ್ಡ್ ಕಾರಿಗೆ ಆಳವಡಿಸಲಾಗಿದೆ.

ವೈಟ್ ಗೋಲ್ಡ್ ಮರ್ಸಿಡಿಸ್ ಬೆಂಝ್ ಸೈಡ್ ವ್ಯೂ

ವೈಟ್ ಗೋಲ್ಡ್ ಮರ್ಸಿಡಿಸ್ ಬೆಂಝ್ ಸೈಡ್ ವ್ಯೂ

ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಆರ್ ಮೆಕ್‌ಲಾರೆನ್ ವೈಟ್ ಗೋಲ್ಡ್ ಕಾರಿಗೆ ಹೊಸತಾಗಿ ಅಭಿವೃದ್ಧಿಪಡಿಸಲಾದ ವಿ10 ಕ್ವಾಡ್ ಟರ್ಬೊ ಜತೆಗೆ 1800 ಎನ್‌ಎಂನಲ್ಲಿ 1600 ಹಾರ್ಸ್ ಉತ್ಪಾದಿಸುವ ಅಶ್ವಶಕ್ತಿ ಹೊಂದಿದೆ.

ವೈಟ್ ಗೋಲ್ಡ್ ಮರ್ಸಿಡಿಸ್ ಬೆಂಝ್

ವೈಟ್ ಗೋಲ್ಡ್ ಮರ್ಸಿಡಿಸ್ ಬೆಂಝ್ ಕಾರಿನ ವೇಗದ ಬಗ್ಗೆ ತಿಳಿದುಕೊಂಡರೆ ನೀವು ಹೈರಾನ್ ಆಗುವೀರಾ? ಹೌದು ಇದು ಕೇವಲ 2 ಸೆಕೆಂಡುಗಳಲ್ಲಿ 0-100 ಕಿಲೋ ಮೀಟರ್ ವೇಗ ವರ್ಧಿಸಲು ಶಕ್ತವಾಗಿದೆ.

ವೈಟ್ ಗೋಲ್ಡ್ ಮರ್ಸಿಡಿಸ್ ಬೆಂಝ್

ಅಂದಹಾಗೆ ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಆರ್ ಮೆಕ್‌ಲಾರೆನ್ ಕಾರನ್ನು ಸ್ಟೈನ್‌ಲೆಸ್ ಸ್ಟೀಲಿನಿಂದ ತಯಾರಿಸಲಾಗಿಲ್ಲ. ಬದಲಾಗಿ ಪರಿಶುದ್ಧ ಬಿಳಿ ಚಿನ್ನದಿಂದ ತಯಾರು ಮಾಡಲಾಗಿದೆ.

ವೈಟ್ ಗೋಲ್ಡ್ ಮರ್ಸಿಡಿಸ್ ಬೆಂಝ್ ರಿಯರ್ ವ್ಯೂ

ವೈಟ್ ಗೋಲ್ಡ್ ಮರ್ಸಿಡಿಸ್ ಬೆಂಝ್ ರಿಯರ್ ವ್ಯೂ

ತನ್ನದೇ ಆದ ವಿಶೇಷ ವಿನ್ಯಾಸ ಹಾಗೂ ಆಕರ್ಷತೆಗೆ ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಆರ್ ಮೆಕ್‌ಲಾರೆನ್ ವೈಟ್ ಗೋಲ್ಡ್ ಕಾರು ಜನಪ್ರಿಯವಾಗಿದೆ.

ವೈಟ್ ಗೋಲ್ಡ್ ಮರ್ಸಿಡಿಸ್ ಬೆಂಝ್

ಪ್ಯೂರ್ ವೈಟ್ ಗೋಲ್ಡ್ ಕಾರಿನ ದರದ ಬಗ್ಗೆ ಹೆಚ್ಚೇನು ಹೇಳುವ ಅಗತ್ಯವಿರುವುದಿಲ್ಲ. ಇದೀಗ ಬಂದಿರುವ ಮಾಹಿತಿಯಂತೆ ಬಿಳಿ ಬಂಗಾರದ ಕಾರಿನ ದರ 2.5 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

ವೈಟ್ ಗೋಲ್ಡ್ ಮರ್ಸಿಡಿಸ್ ಬೆಂಝ್

ಇದೇ ಮೊದಲ ಬಾರಿಗೆ ಪರಿಶುದ್ಧ ಬಿಳಿ ಬಂಗಾರ ಬಳಸಿ ಕಾರೊಂದನ್ನು ತಯಾರಿಸಲಾಗುತ್ತಿದೆ. ಹಾಗಾಗಿ ಮರ್ಸಿಡಿಸ್‌ನ ಈ ಕಾರು ಭಾರಿ ಸುದ್ದಿ ಮಾಡುತ್ತಿದೆ.

More from DriveSpark

Article Published On: Friday, November 23, 2012, 12:05 [IST]
English summary
Ever wondered about white gold Mercedes Benz car. An billionaire in Abu Dhabi has got himself a custom built Mercedes-Benz SLR Mclaren that has been made out of pure white gold. This white gold Mercedes Benz car also offers superb performance. It can accelerate to 100kmph within 2 seconds.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+