ಮರ್ಸಿಡಿಸ್ ಬೆಂಝ್ ಕಂಪನಿಯ ಬೃಹತ್ ವರ್ಕ್‌ಶಾಪ್

Mercedes-Benz Wrenches Out Largest Workshop
ವಿಶ್ವದರ್ಜೆಯ ಸರ್ವಿಸ್ ನೀಡುವುದರಲ್ಲಿ ಮರ್ಸಿಡಿಸ್ ಬೆಂಝ್ ಜನಪ್ರಿಯ. ಇದೀಗ ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ತನ್ನ ಸರ್ವಿಸ್ ಜಾಲವನ್ನು ವಿಸ್ತರಿಸಿಕೊಂಡಿದೆ. ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ನಿಕಟವಾಗುವ ಮತ್ತು ಸಂಭಾವ್ಯ ಗ್ರಾಹಕರ ಹತ್ತಿರಕ್ಕೆ ತಲುಪುವ ದೀರ್ಘಕಾಲದ ಗುರಿಯನ್ನು ಕಂಪನಿ ಹೊಂದಿದೆ.

ಇದೀಗ ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ದೇಶದ ಬೃಹತ್ ವರ್ಕ್ ಶಾಪ್ ತೆರೆದಿದೆ. ಈ ವರ್ಕ್ ಶಾಪ್ ಮುಂಬೈನ ಅಂಧೇರಿಯಲ್ಲಿದೆ. ಇಲ್ಲಿ ಸುಮಾರು 155 ಸರ್ವಿಸ್ ವೃತ್ತಿಪರರು ಮತ್ತು 54 ಸರ್ವಿಸ್ ವಿಭಾಗಗಳಿವೆ.

"ಇಲ್ಲಿ ಗ್ರಾಹಕರಿಗೆ ವಿಶ್ವದರ್ಜೆಯ ಸೇವೆಗಳನ್ನು ನೀಡಲಿದ್ದೇವೆ. ನಾವು ದೇಶದಲ್ಲಿ ನಮ್ಮ ಜಾಲವನ್ನು ಇನ್ನಷ್ಟು ವಿಸ್ತರಿಸಲಿದ್ದೇವೆ. ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಈ ಬೃಹತ್ ವರ್ಕ್ ಶಾಪ್ ಪ್ರಮುಖ ಹೆಜ್ಜೆಯಾಗಿದೆ" ಎಂದು ಮರ್ಸಿಡಿಸ್ ಬೆಂಝ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಪೀಟರ್ ಹೊನೆಗ್ ಹೇಳಿದ್ದಾರೆ.

ಈ ವರ್ಕ್ ಶಾಪ್ ಗೆ ಕಂಪನಿಯು ಸುಮಾರು 52 ಕೋಟಿ ರುಪಾಯಿ ಹೂಡಿಕೆ ಮಾಡಿದೆ. ಈ ಸರ್ವಿಸ್ ಕೇಂದ್ರವನ್ನು ಮರ್ಸಿಡಿಸ್ ಬೆಂಝ್ ಡೀಲರ್ ಆಟೋ ಹಂಗರ್ ನೋಡಿಕೊಳ್ಳಲಿದೆ. ಇಲ್ಲಿ ಕಾರು ರಿಪೇರಿ, ಬಾಡಿ ರಿಪೇರಿ, ಪೇಂಟ್ ಕೆಲಸ, ವೀಲ್ ಜೋಡಣೆ, ವೀಲ್ ಸಮತೋಲನ, ಟೈರ್ ಬದಲಾವಣೆ, ಕಾರು ವಾಷ್, ಪಾಲಿಷ್ ಸೇರಿದಂತೆ ಹಲವು ಬಗೆಯ ಸೇವೆಗಳನ್ನು ಕಂಪನಿ ನಡೆಸಲಿದೆ.

More from DriveSpark

Article Published On: Tuesday, August 21, 2012, 10:16 [IST]
English summary
Mercedes-Benz has inaugurated its largest workshop in India. The new workshop is located at Andheri (East) in Mumbai. This new workshop boosts, 54 dedicated bays managed by 155 service personnel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+