ಕೈಕೊಟ್ಟ ಬೆಂಝ್‌ಗೆ ಮಾಲಿಕನಿಂದ ಕತ್ತೆ ಸೇವೆ

By Nagaraja

ಅಷ್ಟೊಂದು ದೊಡ್ಡ ಮೊತ್ತ ಖರ್ಚು ಮಾಡಿ ದುಬಾರಿ ಕಾರೊಂದನ್ನು ಖರೀದಿಸಿದ ಬಳಿಕ ಆ ಕಾರು ಸರಿಯಾದ ನಿರ್ವಹಣೆ ನೀಡುವುದಿಲ್ಲವಾದರೆ ನೀವು ಏನು ಮಾಡುವೀರಾ? ಅಷ್ಟೇ ಯಾಕೆ ಡೀಲರ್‌ಗಳಿಂದಲೂ ಸರಿಯಾದ ಪ್ರತಿಕ್ರಿಯೆ ಸಿಗುತ್ತಿಲ್ಲವಾದರೆ ನಿಮ್ಮ ಆಕ್ರೋಶ ಎಷ್ಟರ ಮಟ್ಟಿಗಿರಬಹುದು?

ಹೌದು, ಇಲ್ಲೂ ಅದೇ ಸಂಭವಿಸಿರುವುದು. ಗ್ರಾಹಕನೊಬ್ಬ 60 ಲಕ್ಷ ರುಪಾಯಿಗಳಷ್ಟು ಖರ್ಚು ಮಾಡಿ ಪ್ರೀಮಿಯಂ ಮರ್ಸಿಡಿಸ್ ಬೆಂಝ್ ಕಾರು ಕೊಂಡುಕೊಂಡಿದ್ದರು. ಆದರೆ ಕಾರು ಖರೀದಿಸಿದ ಒಂದು ವರ್ಷದೊಳಗೆ ಹಲವು ಬಾರಿ ಕೈಕೊಡಲು ಆರಂಭಿಸಿತು.

ಡೀಲರ್ ಹಾಗೂ ಸರ್ವಿಸ್ ಸೆಂಟರ್‌ನಲ್ಲೂ ಸರಿಯಾದ ಸೇವೆ ಮಾಲಿಕನಿಗೆ ದೊರಕಿರಲಿಲ್ಲ. ಇದರಿಂದ ಬೆಸತ್ತ ಮಾಲಿಕ ಮರ್ಸಿಡಿಸ್ ಬೆಂಝ್‌ಗೆ ಕತ್ತೆ ಸೇವೆ ಮಾಡುವ ಮೂಲಕ ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿಗೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ.

ವಡೋದರಾ ಉದ್ಯಮಿ ಕುಮುದ್ ಪಟೇಲ್ ಎಂಬವರೇ ಈ ರೀತಿ ಕೆರಳಿದವರು. 2011 ಜುಲೈ ತಿಂಗಳಲ್ಲಿ ಲಗ್ಷುರಿ ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಕಾರನ್ನು ಖರೀದಿಸಿದ್ದರು. ಆದರೆ ಒಂದು ತಿಂಗಳಾಗುವಷ್ಟರಲ್ಲಿ ಕಾರಿನಲ್ಲಿ ಸಮಸ್ಯೆ ಕಾಣಿಸತೊಡಗಿತು.

ಡೀಲರ್‌ಗಳಿಂದಲೂ ಸರಿಯಾದ ಸೇವೆ ದೊರದಿರುವುದರಿಂದ ಆಕ್ರೋಶ ಭರಿತರಾದ ಕುಮುದ್ ಆರು ಕತ್ತೆಗಳ ನೆರವಿನಿಂದ ಮರ್ಸಿಡಿಸ್‌ಗೆ ಬೆಂಝ್‌ಗೆ ಕತ್ತೆ ಸವಾರಿ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆ ಬಳಿಕ ವಡೋದರಾ ನಗರದ್ಯಾಂತ ಕಾರನ್ನು ಪ್ರದರ್ಶನಕ್ಕಿಡಲಾಗಿತ್ತು. ಅಲ್ಲದೆ ಕಾರಿನಲ್ಲಿ 'ಜಸ್ಟ್ ಥಿಂಕ್' ಎಂಬ ನೋಟಿಸ್ ಸಹ ಲಗತ್ತಿಸಲಾಗಿತ್ತು. ಖಂಡಿತವಾಗಿಯೂ ಈ ಘಟನೆಯು ಮರ್ಸಿಡಿಸ್ ಬೆಂಝ್‌ ಗಮನಕ್ಕೆ ಬಂದಿರಬಹುದು.

ಅಂದ ಹಾಗೆ ಇದು ಮೊದಲ ಬಾರಿಯೇನೆಲ್ಲ ಪ್ರೀಮಿಯಂ ಕಾರು ಮಾಲಿಕರು ಈ ರೀತಿಯಾಗಿ ವರ್ತಿಸುತ್ತಿರುವುದು. ಈ ಹಿಂದೆ ಚೀನಾದಲ್ಲಿ ರೇಂಜ್ ರೋವರ್‌ಗೂ ಕತ್ತೆ ಸೇವೆ ಮಾಡಿಸಲಾಗಿತ್ತು. ಮತ್ತೊಬ್ಬ ಚೈನೀಸ್ ಗ್ರಾಹಕ ಲಂಬೊರ್ಗಿನಿ ಕಾರಿಗೂ ಇದೇ ಚಿಕಿತ್ಸೆ ಕೊಡಿಸಿದ್ದ.

ಕೈಕೊಟ್ಟ ಬೆಂಝ್‌ಗೆ ಮಾಲಿಕನಿಂದ ಕತ್ತೆ ಸೇವೆ

ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಪ್ರೀಮಿಯಂ ಕಾರು ಪದೇ ಪದೇ ಕೈಕೊಟ್ಟಿದ್ದರಿಂದ ಬೆಸತ್ತ ವಡೋದರಾ ಮಾಲಿಕ ಕುಮುದ್ ಪಟೇಲ್ ಈ ರೀತಿಯಾಗಿ ಕತ್ತೆಸೇವೆ ಮಾಡಿಸಿದ್ದಾರೆ. ವಡೋದರಾ ನಗರದಿಂದ ಆರಂಭಿಸಿದ ಪ್ರತಿಭಟನಾ ರ‌್ಯಾಲಿ ಶೋ ರೂಂ ತನಕ ಮುಂದುವರಿದಿತ್ತು.

ಕೈಕೊಟ್ಟ ಬೆಂಝ್‌ಗೆ ಮಾಲಿಕನಿಂದ ಕತ್ತೆ ಸೇವೆ

ಅಂದ ಹಾಗೆ ಜರ್ಮನ್ ಪ್ರೀಮಿಯಂ ಕಾರು ತಯಾರಕರಾದ ಮರ್ಸಿಡಿಸ್ ಬೆಂಝ್‌ನ ದುಬಾರಿ ಇ ಕ್ಲಾಸ್ ಕಾರು 45 ಲಕ್ಷದಿಂದ 80 ಲಕ್ಷ ರುಪಾಯಿಗಳಷ್ಟು ದುಬಾರಿಯಾಗಿದೆ.

ಕೈಕೊಟ್ಟ ಬೆಂಝ್‌ಗೆ ಮಾಲಿಕನಿಂದ ಕತ್ತೆ ಸೇವೆ

ಪ್ರಸ್ತುತ ಭಾರತದಲ್ಲೂ ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಲಭ್ಯವಿದ್ದು, ಒಟ್ಟು ಎಂಟು ವೆರಿಯಂಟ್‌ಗಳಲ್ಲಿ ಗ್ರಾಹಕರ ಕೈಸೇರುತ್ತಿದೆ.

ಕೈಕೊಟ್ಟ ಬೆಂಝ್‌ಗೆ ಮಾಲಿಕನಿಂದ ಕತ್ತೆ ಸೇವೆ

ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ತನ್ನದೇ ಆದ ವಿಶೇಷ ಇಂಟಿರಿಯರ್ ಶೈಲಿಗೆ ಹೆಸರುವಾಸಿಯಾಗಿದೆ.

ಕೈಕೊಟ್ಟ ಬೆಂಝ್‌ಗೆ ಮಾಲಿಕನಿಂದ ಕತ್ತೆ ಸೇವೆ

ಗರಿಷ್ಠ ಗುಣಮಟ್ಟದ ಲೆಥರ್‌ನಿಂದ ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಇಂಟಿರಿಯರ್ ಭಾಗಗಳನ್ನು ತಯಾರಿಸಲಾಗಿದೆ.

ಕೈಕೊಟ್ಟ ಬೆಂಝ್‌ಗೆ ಮಾಲಿಕನಿಂದ ಕತ್ತೆ ಸೇವೆ

ಆದರೆ ಪ್ರಸ್ತುತ ಘಟನೆಯು ಮರ್ಸಿಡಿಸ್ ಕಂಪನಿಯು ಮುಖ ತಗ್ಗಿಸುವಂತೆ ಮಾಡಿದೆ.

ಕೈಕೊಟ್ಟ ಬೆಂಝ್‌ಗೆ ಮಾಲಿಕನಿಂದ ಕತ್ತೆ ಸೇವೆ

ಪ್ರೀಮಿಯಂ ಕಾರು ಪದೇ ಪದೇ ಸಮಸ್ಯೆಗೆ ಈಡಾಗುತ್ತಿರುವುದು ಮಾಲಿಕನ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಬ್ರಾಂಡ್ ಹೆಸರಿನ ಹೊರತಾಗಿಯೂ ಸಮಸ್ಯೆಗೆ ಪರಿಹಾರ ದೊರಕದಿರುವುದು ಮತ್ತಷ್ಟು ಕೆರಳುವಂತೆ ಮಾಡಿತ್ತು.

Article Published On: Saturday, December 1, 2012, 9:55 [IST]
English summary

 What would you do if your premium car starts giving you problems? You go to the dealer and service centre to get the car repaired. But what would you do if your car worth over Rs.60 lakhs repeatedly gets some or the other problem within a year of buying it? You get it dragged by donkeys all over the city on the way to the showrooms.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+