ದೇಶದ ರಸ್ತೆಗೆ ಮರ್ಸಿ ಸಣ್ಣಕಾರು "ಸ್ಮಾರ್ಟ್"
ಆದರೆ ಸ್ಮಾರ್ಟ್ ಕಾರುಗಳು ಮಿನಿಯಷ್ಟು ದುಬಾರಿಯಲ್ಲ. ವರದಿಗಳ ಪ್ರಕಾರ ಸ್ಮಾರ್ಟ್ ಸಣ್ಣಕಾರುಗಳ ದರ 12-15 ಲಕ್ಷ ರುಪಾಯಿ ಆಸುಪಾಸಿನಲ್ಲಿರಬಹುದು. ಮರ್ಸಿಡಿಸ್ ಬೆಂಝ್ ಕಂಪನಿಯ ಎ-ಕ್ಲಾಸ್ ಕಾರಿಗಿಂತಲೂ ಸ್ಮಾರ್ಟ್ ಅಗ್ಗವಾಗಿರಲಿದೆ. ಕಂಪನಿಯು ಮುಂದಿನ ಎರಡು ವರ್ಷಗಳಲ್ಲಿ ಎ-ಕ್ಲಾಸ್ ಮತ್ತು ಬಿ ಕ್ಲಾಸ್ ಕಾರುಗಳನ್ನು ಕೂಡ ಪರಿಚಯಿಸಲಿದೆ. ಇದೇ ಸಮಯದಲ್ಲಿ ಸ್ಮಾರ್ಟ್ ಕೂಡ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ.
ರೆನಾಲ್ಟ್ ನಿಸ್ಸಾನ್ ಮೈತ್ರಿ ಕಂಪನಿಯ ಜೊತೆ ಸೇರಿ ಡೈಮ್ಲಾರ್ ಮುಂದಿನ ತಲೆಮಾರಿನ ಸ್ಮಾರ್ಟ್ ಕಾರು ಅಭಿವೃದ್ಧಿಪಡಿಸುತ್ತಿದೆ. ಐಷಾರಾಮಿ ಕಂಪನಿಯೊಂದರ ಸಣ್ಣಕಾರು ಐಷಾರಾಮಿ ಕಾರುಗಳ ಮಟ್ಟಿಗೆ ದುಬಾರಿಯಲ್ಲದ ದರದಲ್ಲಿ ಬರುವ ನಿರೀಕ್ಷೆಯಲ್ಲಿರೋಣ.
ಮರ್ಸಿಡಿಸ್ ಬೆಂಝ್ ಸ್ಮಾರ್ಟ್ ಕಾರುಗಳಿಗೆ ರೆನಾಲ್ಟ್-ನಿಸ್ಸಾನ್ ಜಂಟಿ ಕಂಪನಿಯು ಎಂಜಿನ್ ಅಭಿವೃದ್ಧಿಪಡಿಸುವ ನಿರೀಕ್ಷೆಯಿದೆ. ಈ ಜಂಟಿ ಕಂಪನಿಯ ನೆರವಿನಿಂದ ಸ್ಮಾರ್ಟ್ ಕಾರಿನ ದರ ಲಕ್ಷುರಿ ಕಾರು ಮಟ್ಟದಿಂದ ಕೆಳಗಿರಲಿದೆ.
ಮರ್ಸಿಡಿಸ್ ಬೆಂಝ್ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಹತ್ತು ಹೊಸ ಕಾರುಗಳನ್ನು ದೇಶಕ್ಕೆ ಪರಿಚಯಿಸಲು ಯೋಜಿಸಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









