ರಸ್ತೆ ಬಿಟ್ಟು ಆಕಾಶದಲ್ಲೂ ಹಾರುವ ಡಿಂಗ ಬೈಕ್

ಜಮಖಾನೆಯಲ್ಲಿ ಕುಳಿತು ಹಾರುವ ಮಾಟಗಾತಿಯ ಕಥೆ ಎಲ್ಲೋ ಓದಿದ ನೆನಪಾಗುತ್ತಿದೆಯೇ? ಹಾರುವ ಹುಡಿ ಹಾಕುವ, ದಂಡದ ಮೇಲೆ ಕುಳಿತು ಪ್ರಯಾಣಿಸುವ ಬಾಲಮಂಗಳದ ಪಕ್ರು ನಿಮಗೆ ತಿಳಿದಿರಬಹುದು. ನೆಲವ ಬಿಟ್ಟು ಆಕಾಶ ಮಾರ್ಗದಲ್ಲಿ ಬರುವ ಡಿಂಗ ನಿಮಗೆ ಅಚ್ಚುಮೆಚ್ಚು ಆಗಿರಬಹುದು.

ಚಂದಮಾಮಾ, ಬಾಲಮಿತ್ರ, ಗಿಳಿವಿಂಡು, ತುಂತುರು, ಬಾಲಮಂಗಳ, ಚಂಪಕ, ಬೊಂಬೆಮನೆ, ಪುಟಾಣಿ ಸೇರಿದಂತೆ ಯಾವುದಾದರೂ ಪತ್ರಿಕೆಗಳಲ್ಲಿ ಹಾರುವ ವಾಹನಗಳು ಬೆರಗು ಹುಟ್ಟಿಸಿರಬಹುದು. ವಿಮಾನದ ಬಗ್ಗೆ ಮಾತ್ರ ತಿಳಿದಿದ್ದ ನಮಗೆ, ಕಾರು, ಬೈಕು, ಜೀಪು ರಸ್ತೆ ಬಿಟ್ಟು ಆಕಾಶಕ್ಕೆ ಹಾರುವುದೆಂದರೆ ಅಚ್ಚರಿ ತಾರದೆ ಇರದು. ಇಷ್ಟೇಲ್ಲ ಪೀಠಿಕೆ ಯಾಕಂತಿರಾ? ಚಿತ್ರ ನೋಡಿ ಓದು ಮುಂದುವರೆಸಿರಿ.

ಸೆರ್ಬಿಯಾ ದೇಶದ ಜನಪ್ರಿಯ ವಿನ್ಯಾಸಕ ಮಾರ್ಕ್ ಲುಕೊವಿಕ್ ಸಹ ಇದೇ ತರಹದ ಕಾಮಿಕ್ಸ್ ಪುಸ್ತಕಗಳನ್ನು ಓದಿರಬೇಕು. ಆತ ಮೂನ್ ರೈಡರ್ ಎನ್ನುವ ಭವಿಷ್ಯದ ಹೈಬ್ರಿಡ್ ದ್ವಿಚಕ್ರವಾಹನ ವಿನ್ಯಾಸ ಮಾಡಿದ್ದಾನೆ. ಇದರಲ್ಲಿ ಬೈಕಿನಂತೆ ರಸ್ತೆಯಲ್ಲಿ ಸವಾರಿ ಮಾಡಬಹುದಾಗಿದೆ. ವಿಮಾನದಂತೆ ಆಕಾಶದಲ್ಲಿ ಹಾರಬಹುದಾಗಿದೆ.

ಇದರ ವಿನ್ಯಾಸ ಬೊಂಬಾಟ್ ಆಗಿದ್ದು, ಕಣ್ಮನ ಸೆಳೆಯುತ್ತದೆ. ಇದು ಹಗುರವಾದ ದ್ವಿಚಕ್ರವಾಹನವಾಗಿದ್ದು, ಪರಿಸರ ಸ್ನೇಹಿ ಕೂಡ ಹೌದು. ಇದರಲ್ಲಿರುವ ಪ್ಲಾಸ್ಮಾ ಜೆಟ್ ಎಂಜಿನ್ ವಿಮಾನದಂತೆ ಹಾರಲು ನೆರವಾಗುತ್ತದೆ. ಇದನ್ನು ಹಗುರ ಬಿಡಿಭಾಗಗಳಿಂದ ನಿರ್ಮಿಸಲಾಗಿದೆ.

ಈ ಬೈಕಿನ ಮುಂಭಾಗದಲ್ಲಿ ಎರಡು ವಿಶೇಷ ದಪ್ಪಗಿನ ಚಕ್ರಗಳಿವೆ. ಇದು ಎಲೆಕ್ಟ್ರಿಕ್ ಬ್ಯಾಟರಿಗಳ ನೆರವಿನಿಂದ ಚಲಿಸುತ್ತದೆ. ಈ ಬ್ಯಾಟರಿಗಳು ಸೌರಶಕ್ತಿ ಪ್ಯಾನೆಲುಗಳಿಂದ ಚಾರ್ಜ್ ಆಗುತ್ತದೆ. ಸೋಲರ್ ಪ್ಯಾನೆಲ್ ಗಳನ್ನು ಚಕ್ರದ ಮುಂಭಾಗದಲ್ಲಿ ಇಡಲಾಗಿದೆ.

ಹಾರುವ ಬೈಕಿನ ವಿನ್ಯಾಸಕ ಮಾರ್ಕೊ ಲುಕೊವಿಕ್. ಈತ ಮತ್ತು ಈತನ ತಂಡವೂ ಈಗಾಗಲೇ ಇಂತಹ ಹತ್ತು ಹಲವು ಪ್ರಯೋಗಗಳನ್ನು ಮಾಡಿಯಾಗಿದೆ. ಈತನ ವಿನ್ಯಾಸಗಳು ಸುಮಾರು 60ರಷ್ಟು ದೇಶಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಕಂಡಿವೆ. 15ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿನ್ಯಾಸ ಪ್ರಶಸ್ತಿಗಳು ಬಂದಿವೆ. 2000ನೇ ಇಸವಿಯಲ್ಲಿ ಪ್ಯೂಜು ಡಿಸೈನ್ ಕಾನ್ಸೆಪ್ಟ್ ಎಂಬ ಪ್ರಖ್ಯಾತ ಪ್ರಶಸ್ತಿಯನ್ನು ಈತನ ಕಂಪನಿ ಪಡೆದಿದೆ.

More from DriveSpark

Article Published On: Monday, July 2, 2012, 15:14 [IST]
English summary
The MoonRider is a futuristic hybrid two wheeler which can be driven as a motorbike, but also acts as a flying machine. The lightweight motorcycle is an electric-powered bike with zero emission as well a plasma jet engine to provide power in flying mode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+