ನನ್ನ ನೆಮ್ಮದಿ ಕೆಡಿಸಿದ ಹ್ಯುಂಡೈ ಸರ್ವಿಸ್ ಸೆಂಟರ್

"ಈ ವರ್ಷದ ಫೆಬ್ರವರಿ ಮೊದಲ ವಾರದ ಒಂದು ದಿನ ಮೈಸೂರು ರಸ್ತೆಯಲ್ಲಿರುವ........... ಶೋರೂಂನಿಂದ ಹ್ಯುಂಡೈ ಐ10 ಕಪ್ಪಾ ಕಾರನ್ನು ಖರೀದಿಸಿದೆ. ಮೊದಲ ನೋಟಕ್ಕೆ ಈ ಕಾರು ನನಗೆ ತುಂಬಾ ಇಷ್ಟವಾಯ್ತು. ಲುಕ್, ಪಿಕಪ್, ಇಂಟಿರಿಯರ್/ಎಕ್ಸ್ ಟೀರಿಯರ್ ಎಲ್ಲವೂ ಅತ್ಯುತ್ತಮ. ಅಸಲಿಗೆ ಕಾರಿನ ಕುರಿತು ಯಾವುದೇ ದೂರುಗಳಿಲ್ಲ.
ನನ್ನ ದುರ್ದೈವವೆಂದು ಹೇಳಬೇಕು. ಖರೀದಿಸಿ ಒಂದು ವಾರದಲ್ಲೇ ಸಿಗ್ನಲ್ ಬಳಿ ಕಾರಿನ ಹಿಂಭಾಗಕ್ಕೆ ಟ್ರಕ್ ಗುದ್ದಿಬಿಟ್ಟಿತು. ಕಾರಿನ ಬೂಟ್ ಮತ್ತು ಬಂಪರ್ ಜಜ್ಜಿ ಹೋಗಿತ್ತು. ತಕ್ಷಣ ಸರ್ವಿಸ್ ಸ್ಟೇಷನಿಗೆ ಕರೆಮಾಡಿದೆ. ಕಾರು ತರಲು ಸೂಚಿಸಿದರು. ಹಾಗೆ ಮಾಡಿದೆ. ಮೂರು ದಿನದಲ್ಲಿ ಸರಿಮಾಡಿಕೊಡುವುದಾಗಿ ಮ್ಯಾನೆಜರ್ ಭರವಸೆ ನೀಡಿದ.
ಹೊಸ ಕಾರು ಎಲ್ಲಿದೆ ಎಂದು ಕೇಳುವ ಸಂಬಂಧಿಕರು/ಸ್ನೇಹಿತರಿಗೆ ಮೂರು ದಿನದಲ್ಲಿ ನಿಭಾಯಿಸುವುದು ಕಷ್ಟವಾಗಲಿಲ್ಲ. ಆದರೆ ಮೂರು ದಿನ ಕಳೆದು ಶೋರೂಂ ತಲುಪಿದಾಗ ನನ್ನ ಕಾರು ಹಾಗೇ ಇತ್ತು. ಕ್ಷಮಿಸಿ, ಸಾರ್ ಶೀಘ್ರದಲ್ಲಿ ಸರಿಮಾಡಿಕೊಡುತ್ತೇವೆ ಎಂಬ ಅಭಯ ಮತ್ತೆ ಸಿಕ್ಕಿತು. ಮತ್ತೆ ಹಲವು ಕರೆಮಾಡಿ, ಹಲವು ಬಾರಿ ಸರ್ವಿಸ್ ಸ್ಟೇಷನಿಗೆ ಹೋದೆ. ಆಗಿಲ್ಲ ಸಾರ್, ನಾಳೆ ಬನ್ನಿ, ಕೊಂಚ ರಿಪೇರಿ ಬಾಕಿ ಇದೆ.. ಹೀಗೆ ದಿನಕ್ಕೊಂದು ಸಬೂಬು ರೆಡಿ ಇರುತ್ತಿದ್ದವು.
ಹದಿನೈದು ದಿನ ಕಳೆದು ನನ್ನ ಕಾರನ್ನು ವಾಪಸ್ ನೀಡಿದ್ರು. ಸಂತೋಷದಿಂದ ಮನೆಗೆ ತೆಗೆದುಕೊಂಡು ಹೋದೆ. ಕಾರಿನ ಮತ್ತೆರಡು ಸಮಸ್ಯೆ ನನ್ನ ಹೆಂಡತಿ ಗಮನಕ್ಕೆ ಬಂತು. ಕಾರಿನ ಬ್ರೇಕ್ ಲೈಟ್ ಮಿಣುಕುತ್ತಿರಲಿಲ್ಲ. ಹಿಂಭಾಗದ ಡೋರನ್ನು ಒಳಭಾಗದಿಂದ ತೆರೆಯಲು ಸಾಧ್ಯವಾಗಲಿಲ್ಲ. ತಥೇರಿಕೆ....ಅಂದುಕೊಂಡು ಮತ್ತೆ ಸರ್ವಿಸ್ ಸ್ಟೇಷನಿಗೆ ಕರೆಮಾಡಿದೆ.
ಆಮೇಲೆ ಏನಾಯ್ತು?


Click it and Unblock the Notifications








