ಕಾರು ಖರೀದಿಸಿದ ಒಂದು ತಿಂಗ್ಳಲ್ಲೇ ಸುಸ್ತು
ಅದೇ ದಿನ ಮಧ್ಯಾಹ್ನ ಕರೆಮಾಡಿದಾಗ ಶೋರೂಂನಲ್ಲಿದ್ದ ಸರ್ವಿಸ್ ಎಂಜಿನಿಯರ್ "ಎಲೆಕ್ಟ್ರಿಕಲ್ ಸಮಸ್ಯೆಗಳು ಸರಿಯಾಗಿವೆ" ಅಂದ. ಈ ಸಲ ಬೇಗ ಸರ್ವಿಸ್ ಮಾಡಿದ್ದಾರೆ ಅನ್ನೋ ಅಚ್ಚರಿಯಿಂದ ಶೋರೂಂಗೆ ಹೋಗಿ ಕಾರನ್ನು ಮನೆಗೆ ತಂದೆ.
ಕಳೆದ ಕೆಲವು ದಿನಗಳ ಘಟನೆಗಳಿಂದ ಮತ್ತೆ ಆ ಕಾರನ್ನು ಡ್ರೈವ್ ಮಾಡುವ ಮೂಡ್ ಹೊರಟುಹೋಗಿತ್ತು. ಕಾರನ್ನು ಮನೆಯ ಗ್ಯಾರೇಜಿನಲ್ಲಿ ಕಾರು ಕವರ್ ಹೊದೆಸಿ ನಿಲ್ಲಿಸಿಬಿಟ್ಟೆ. ಆದರೆ ಕೆಲವೇ ದಿನದಲ್ಲಿ, ಆ ವಾರಾಂತ್ಯಾಕ್ಕೆ ಸಂಬಂಧಿಕರೊಬ್ಬರನ್ನು ಬಸ್ ನಿಲ್ದಾಣದಿಂದ ಕರೆತರಬೇಕಿದ್ದರಿಂದ ಆ ಕಾರು ಡ್ರೈವ್ ಮಾಡುವ ಅನಿವಾರ್ಯತೆ ಉಂಟಾಯಿತು.
ಆದರೆ, ಕಾರು ಕವರ್ ತೆರೆದು ರಿಮೋಟ್ ಒತ್ತಿದಾಗ ಡೋರ್ ಓಪನ್ ಆಗಲಿಲ್ಲ. ರಿಮೋಟ್ ಸಮಸ್ಯೆಯಾಗಿರಬಹುದು ಎಂದುಕೊಂಡು ಕೀಲಿಕೈ ಹಾಕಿ ಡೋರ್ ತೆಗೆದೆ. ವಾಹ್, ಕಾರಿನ ಡೋರ್ ಓಪನ್ ಆಯ್ತು. ಆದರೆ, ನನ್ನ ಕರ್ಮಕ್ಕೆ ಕೀಲಿಕೈ ಹಾಕಿದ್ರೂ ಕಾರು ಸ್ಟಾರ್ಟ್ ಆಗಲಿಲ್ಲ, ಯಾವುದೇ ದೀಪಗಳು ಉರಿಯಲಿಲ್ಲ. ಥಕ್.
ರಾಜೇಶ್ ಅಂತಿಮವಾಗಿ ಏನು ಮಾಡಿದ್ರು? ಮುಂದಿನ ಪುಟ ನೋಡಿ..


Click it and Unblock the Notifications









