ಸರ್ವಿಸ್ ಚೆನ್ನಾಗಿರೋ ಕಂಪನಿ ಆಯ್ಕೆಮಾಡ್ಕೊಳ್ಳಿ...
ಆದರೆ ಮರುದಿನ ಆತ ಬರಲಿಲ್ಲ. ನಾನು ಹನ್ನೊಂದು ಗಂಟೆಗೆ ಕರೆ ಮಾಡಿದೆ. ಕೊನೆಗೆ ಮಧ್ಹಾಹ್ನ ಒಂದುಗಂಟೆಗೆ ಬಂದ. ಆತ ಬಂದು ಮತ್ತೊಂದು ಬ್ಯಾಟರಿ ಕನೆಕ್ಟ್ ಮಾಡಿ ಕಾರು ಸ್ಟಾರ್ಟ್ ಮಾಡಿದ.
ಇನ್ನೊಂದು ಸಮಸ್ಯೆಯನ್ನು ಸರ್ವಿಸ್ ಹುಡುಗನೇ ಕಂಡು ಹಿಡಿದ. ಹಿಂಭಾಗದ ಬೂಟ್ ಡೋರ್ ಹಾಕಿದಾಗ ಬೂಟ್ ಲೈಟ್ ಆಫ್ ಆಗುತ್ತಿಲ್ಲ. ಎಲೆಕ್ಟ್ರಿಕ್ ವೈರ್ ಎಲ್ಲವೂ ಸರಿಯಾಗಿರುವಂತೆ ಕಾಣುತ್ತಿತ್ತು. ಆದರೆ ಕಾರಿನ ಪೇಂಟ್ ಎಲ್ಲಾ ಹಾಳಾಗಿತ್ತು. ಈ ಸಮಸ್ಯೆ ಸರಿಪಡಿಸಲು ಇಲ್ಲಾಗದು, ಮತ್ತೊಮ್ಮೆ ಸರ್ವಿಸ್ ಸ್ಟೇಷನಿಗೆ ತಂದುಬಿಡಿ ಸಾರ್ ಅಂದ.
ಮತ್ತೆ ಸರ್ವಿಸ್ ಸ್ಟೇಷನಿಗೆ ಫೋನ್ ಮಾಡಿದೆ. ಮ್ಯಾನೆಜರ್ ಎಂದಿನಂತೆ "ಕಾರು ತಂದುಬಿಡಿ ಸಾರ್" ಅಂದ. ಮತ್ತೆ ಅಲ್ಲಿಗೆ ಕಾರನ್ನು ತೆಗೆದುಕೊಂಡು ಹೋಗುವ ಮೂಡ್ ನನಗಿರಲಿಲ್ಲ. ಇಲ್ಲಿಂದ ತೆಗೆದುಕೊಂಡು ಹೋಗಲು ಸಿಬ್ಬಂದಿ ಕಳುಹಿಸಿಕೊಡಿ ಎಂದು ಆತನಲ್ಲಿ ವಾದಿಸಿದೆ. ಕೊನೆಗೆ ಒಪ್ಪಿದ ಆತ ಸಿಬ್ಬಂದಿ ಕಳುಹಿಸಿದ.
ಎಲ್ಲಾ ಸಮಸ್ಯೆ ಪರಿಹಾರವಾಗಿರುವ ಕುರಿತು ನನ್ನಲ್ಲಿ ಯಾವುದೇ ಖಚಿತತೆ ಇರಲಿಲ್ಲ. ಆದರೆ ತುಂಬಾ ವಾದಿಸಿದ ನಂತರ ಮತ್ತೆ ಪೇಂಟ್ ಬಳಿಯಲು ಒಪ್ಪಿಕೊಂಡರು. ಆದರೆ ಕಂಪನಿಯ ಸ್ಟಾಂಡರ್ಡಿಗೆ ತಕ್ಕಂತೆ ಮರುಪೇಂಟ್ ಮಾಡಿಲ್ಲ. ಸುಮ್ಮನೆ ನನ್ನೆದುರಿಗೆ ಕಾಟನ್ ಬಟ್ಟೆಗೆ ಪೇಂಟ್ ಅದ್ದಿ ಉಜ್ಜಿಬಿಟ್ರು. ಇವ್ರ ಜೊತೆ ವಾದಿಸುವುದು ವ್ಯರ್ಥವೆನಿಸಿ ಅಲ್ಲಿಂದ ನನ್ನ ಕಾರನ್ನು ವಾಪಸ್ ತಂದೆ.
ಕಾರು ಖರೀದಿಗೆ ಮೊದಲು ಕಂಪನಿಯ ಸರ್ವಿಸ್ ಸ್ಟೇಷನ್ ಗಳ ಗುಣಮಟ್ಟದ ಕುರಿತು ತಿಳಿದುಕೊಳ್ಳಬೇಕೆಂದು ಈ ಅನುಭವ ನನಗೆ ಮರೆಯಲಾಗದ ಪಾಠ ಕಲಿಸಿಬಿಟ್ಟಿತು"
(ವಾಹನ ಖರೀದಿಯ ಅನುಭವ ನಮ್ಮೊಂದಿಗೆ ಹಂಚಿಕೊಳ್ಳಿ. ಇಮೇಲ್ ವಿಳಾಸ: [email protected])
ಓದಿ: ಕಾರು ಕೊಳ್ಳಬೇಕೆಂಬ ಕನಸಿನ ಕುದುರೆಯನೇರಿ


Click it and Unblock the Notifications









